More

    ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವಾಹನ ಸವಾರರ ತಪಾಸಣೆ

    ಮದ್ದೂರು: ಚಿನ್ನದ ಸರಗಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದ ವ್ಯಾಪ್ತಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವಾಹನ ಸವಾರರನ್ನು ಗುರುತಿಸಿ ತಪಾಸಣೆ ಮಾಡಲಾಗುತ್ತಿದೆ ಎಂದು ವೃತ್ತ ನಿರೀಕ್ಷಕ ಪ್ರಸಾದ್ ತಿಳಿಸಿದರು.

    ತಾಲೂಕಿನ ನಿಡಘಟ್ಟದ ಗಡಿ ಭಾಗದಲ್ಲಿರುವ ಸರ್ವೀಸ್ ರೋಡ್ ಹಾಗೂ ಹಲವಾರು ಕಡೆಗಳಲ್ಲಿ ಗುರುವಾರ ಸಂಜೆ ಅನುಮಾನಾಸ್ಪದ ವಾಹನ ಸವಾರರನ್ನು ಪರಿಶೀಲಿಸಿ ಮಾತನಾಡಿದರು.

    ವಾಹನಗಳು ನಂಬರ್ ಪ್ಲೇಟ್ ಬದಲಿಸಿ ಚಿನ್ನದ ಸರ ಕಳ್ಳತನ, ರಾತ್ರಿ ವೇಳೆ ಅಂಗಡಿ, ಮನೆ ಕಳ್ಳತನಗಳು ನಡೆಯುತ್ತಿದ್ದು, ಅಪರಿಚಿತ ವ್ಯಕ್ತಿಗಳು ಹೊರಗಡೆಯಿಂದ ಬಂದು ಈ ಕೃತ್ಯ ಎಸಗುತ್ತಿದ್ದಾರೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಹೋಬಳಿ ಪೊಲೀಸ್ ಠಾಣೆಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದರು.

    ಮಹಿಳೆಯರು ಬೆಳಗಿನ ಜಾವ ವಾಯ ವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಚಿನ್ನದ ಆಭರಣಗಳನ್ನು ಧರಿಸಿಕೊಂಡು ಹೋಗಬಾರದು. ಒಂದು ವೇಳೆ ಹೋದರೆ ತುಂಬ ಎಚ್ಚರಿಕೆಯಿಂದ ಇರಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.

    ಕೊಲ್ಲಿ ವೃತ್ತ ಸೇರಿದಂತೆ ಹಲವಾರು ಕಡೆಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುವ ಅಪರಿಚಿತರನ್ನು ತಪಾಸಣೆ ಮಾಡುವ ಜತೆಗೆ ಹೆಲ್ಮೆಟ್ ಹಾಕದ ದ್ವಿಚಕ್ರ ವಾಹನ ಸವಾರರಿಗೆ ದಂಡ ಹಾಕಲಾಯಿತು. ಸಂಚಾರ ಪಿಎಸ್‌ಐ ಮಹೇಶ್, ಎಎಸ್‌ಐ ರಮೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts