More

    PHOTOS | ಬದಲಾಗಿದೆ ಕ್ರಿಕೆಟ್, ಇಲ್ಲಿದೆ ನೋಡಿ ಸಾಕ್ಷಿ!

    ಸೌಥಾಂಪ್ಟನ್: ಅಂತಾರಾಷ್ಟ್ರೀಯ ಕ್ರಿಕೆಟ್ ಕೊನೆಗೂ ಆರಂಭಗೊಂಡಿದೆ. ಆದರೆ ಇದು 117 ದಿನಗಳ ಹಿಂದೆ ನಾವು ಕೊನೆಯದಾಗಿ ನೋಡಿದ ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತ ಸಾಕಷ್ಟು ಬದಲಾಗಿದೆ. ಕರೊನಾ ಹಾವಳಿಯ ನಡುವೆ ಇಂಗ್ಲೆಂಡ್‌ನ ಜೈವಿಕ ಸುರಕ್ಷಾ ವಾತಾವರಣದಲ್ಲಿ ನಡೆಯುತ್ತಿರುವ ನವವಾಸ್ತವದ ಕ್ರಿಕೆಟ್ ಪಂದ್ಯ ಯಾವ ರೀತಿಯಲ್ಲಿ ಭಿನ್ನವಾಗಿದೆ ಎಂಬುದರ ಝಲಕ್ ಇಲ್ಲಿದೆ ನೋಡಿ.

    ಹ್ಯಾಂಡ್ ಶೇಕ್ ಇಲ್ಲ

    PHOTOS | ಬದಲಾಗಿದೆ ಕ್ರಿಕೆಟ್, ಇಲ್ಲಿದೆ ನೋಡಿ ಸಾಕ್ಷಿ!
    ವಿಕೆಟ್ ಬಿದ್ದಾಗ ಆಟಗಾರರು ಹ್ಯಾಂಡ್‌ಶೇಕ್ ಅಥವಾ ಹೈ-ೈವ್ ಮೂಲಕ ಸಂಭ್ರಮಿಸುವುದು ಸಾಮಾನ್ಯವಾಗಿತ್ತು. ಆದರೆ ಈಗ ಕರೊನಾ ಮಾರ್ಗಸೂಚಿಗಳಿಂದಾಗಿ ಆಟಗಾರರು ಸಂಭ್ರಮದ ವೇಳೆಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ. ಹೀಗಾಗಿ ಆಟಗಾರು ಮೊಣಕೈಗಳನ್ನು ತಾಗಿಸಿಕೊಳ್ಳುವ ಮೂಲಕ ಪರಸ್ಪರ ದೂರದಲ್ಲಿ ನಿಂತೇ ಸಂಭ್ರಮಿಸುತ್ತಿದ್ದಾರೆ.

    ಖಾಲಿ ಕ್ರೀಡಾಂಗಣ…

    PHOTOS | ಬದಲಾಗಿದೆ ಕ್ರಿಕೆಟ್, ಇಲ್ಲಿದೆ ನೋಡಿ ಸಾಕ್ಷಿ!
    ಇಂಗ್ಲೆಂಡ್ ತಂಡಕ್ಕೆ ಕ್ರಿಕೆಟ್ ಪಂದ್ಯ ಆಡುವಾಗ ಅದರ ಅಭಿಮಾನಿ ಬಳಗ ‘ಬಾರ್ಮಿ ಆರ್ಮಿ’ 12ನೇ ಆಟಗಾರನಂತೆ ಬಲ ತುಂಬುತ್ತಿತ್ತು. ಆದರೆ ಈಗ ಜೈವಿಕ-ಸುರಕ್ಷಾ ವಾತಾವರಣ ನಿರ್ಮಿಸಿಕೊಳ್ಳುವ ಸಲುವಾಗಿ ಪಂದ್ಯವನ್ನು ಖಾಲಿ ಕ್ರೀಡಾಂಗಣದಲ್ಲಿ ಆಡಲಾಗುತ್ತಿದೆ.

    ಇದನ್ನೂ ಓದಿ: ಅನುಷ್ಕಾ ಶರ್ಮ ಮಾದಕ ಪೋಸ್​ಗೆ ವಿರಾಟ್ ಕೊಹ್ಲಿ ಏನಂತಾರೆ?

    ಚೆಂಡಿಗೆ ಎಂಜಲು ಹಚ್ಚಲ್ಲ

    ಬೌಲರ್‌ಗಳಿಗೆ ಸ್ವಿಂಗ್ ಸಾಧಿಸಲು ಚೆಂಡಿನ ಒಂದು ಬದಿಗೆ ಎಂಜಲು ಹಚ್ಚಿ ಪಾಲಿಶ್ ಮಾಡುವುದು ಅಗತ್ಯವಾಗಿತ್ತು. ಆದರೆ ಸೋಂಕು ಹರಡುವ ಭೀತಿಯಿಂದ ಈಗ ಐಸಿಸಿ ಚೆಂಡಿಗೆ ಎಂಜಲು ಹಚ್ಚುವುದನ್ನು ನಿಷೇಧಿಸಿದೆ. ಅಲ್ಲದೆ ಪ್ರತಿ ಇನಿಂಗ್ಸ್‌ನಲ್ಲಿ ಮೊದಲೆರಡು ಎಚ್ಚರಿಕೆಯ ಬಳಿಕ 3ನೇ ಬಾರಿ 5 ರನ್ ದಂಡ ವಿಧಿಸುವುದಾಗಿ ತಿಳಿಸಿದೆ. ಆದರೆ ಬೆವರು ಹಚ್ಚಲು ಅವಕಾಶ ನೀಡಿದೆ. ಹೀಗಾಗಿ ಇಂಗ್ಲೆಂಡ್ ಆಟಗಾರರು ಬೆನ್ನಿನ ಬೆವರನ್ನು ಚೆಂಡಿಗೆ ಹಚ್ಚುತ್ತಿದ್ದಾರೆ ಎನ್ನಲಾಗಿದೆ.

    ಮರಳಿ ಬಂದ ಹೆಡ್‌ಬ್ಯಾಂಡ್

    PHOTOS | ಬದಲಾಗಿದೆ ಕ್ರಿಕೆಟ್, ಇಲ್ಲಿದೆ ನೋಡಿ ಸಾಕ್ಷಿ!
    ಟೆನಿಸ್ ಆಟಗಾರರು ಹೆಡ್‌ಬ್ಯಾಂಡ್ ಧರಿಸುವುದು ಈ ಹಿಂದೆ ಸಾಮಾನ್ಯವಾಗಿತ್ತು. ಕ್ರಿಕೆಟಿಗರೂ ಇದನ್ನೇ ಬಳಸಿದ್ದು ಇದೆ. ಇದೀಗ ಇದು ಮತ್ತೊಮ್ಮೆ ಕ್ರಿಕೆಟ್‌ನಲ್ಲಿ ಸ್ಟೈಲ್ ಆಗಿದೆ. ಇಂಗ್ಲೆಂಡ್ ಬೌಲರ್‌ಗಳು ಈಗ ಹೆಡ್‌ಬ್ಯಾಂಡ್ ಧರಿಸುವ ಮೂಲಕ ಬೆವರು ಮುಖಕ್ಕೆ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಜತೆಗೆ ಇದು ಹೊಸ ಸ್ಟೈಲ್ ಕೂಡ ಆಗಿದೆ.

    ಪಿಪಿಇ ಗ್ಲೌಸ್ ಬಳಕೆ

    PHOTOS | ಬದಲಾಗಿದೆ ಕ್ರಿಕೆಟ್, ಇಲ್ಲಿದೆ ನೋಡಿ ಸಾಕ್ಷಿ!
    ಪಂದ್ಯದ ವೇಳೆ ಮೀಸಲು ಆಟಗಾರರು ಕೂಡ ಪಿಪಿಇ ಕಿಟ್ ಧರಿಸಿಯೇ ಆಡುವ ಆಟಗಾರರಿಗೆ ನೀರಿನ ಬಾಟಲಿ ಮತ್ತಿತರ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಇಂಗ್ಲೆಂಡ್ ತಂಡದ 12ನೇ ಆಟಗಾರ ಸ್ಟುವರ್ಟ್ ಬ್ರಾಡ್ ಸಹ-ಆಟಗಾರ ಜೇಮ್ಸ್ ಆಂಡರ್‌ಸನ್‌ಗೆ ನೀರಿನ ಬಾಟಲಿ ನೀಡುವಾಗ ಪಿಪಿಇ ಗ್ಲೌಸ್ ಧರಿಸಿದ್ದು ಕಂಡುಬಂದಿದೆ. ಅಲ್ಲದೆ ಐಸಿಸಿಯ ಹೊಸ ನಿಯಮದ ಅನ್ವಯ ಅಂಪೈರ್‌ಗಳು ಬೌಲರ್‌ಗಳ ಕ್ಯಾಪ್ ಮತ್ತಿತರ ವಸ್ತುಗಳನ್ನು ತಮ್ಮಲ್ಲಿ ಇಟ್ಟುಕೊಳ್ಳುವುದಿಲ್ಲ. ಅದನ್ನು 12ನೇ ಆಟಗಾರನಿಗೆ ವರ್ಗಾಯಿಸಬೇಕು ಮತ್ತು ಆತ ಪಿಪಿಇ ಗ್ಲೌಸ್ ಧರಿಸಿರಬೇಕು.

    ರೋಬಾಟ್ ಟಿವಿ ಕ್ಯಾಮರಾ

    PHOTOS | ಬದಲಾಗಿದೆ ಕ್ರಿಕೆಟ್, ಇಲ್ಲಿದೆ ನೋಡಿ ಸಾಕ್ಷಿ!
    ಹಿಂದೆಲ್ಲ ಪಂದ್ಯದ ವೇಳೆ ಆಟಗಾರರ ಚಲನೆಯನ್ನು ಕ್ಯಾಮರಾಮನ್‌ಗಳು ಮೈದಾನಕ್ಕಿಳಿದು ಚಿತ್ರೀಕರಿಸುತ್ತಿದ್ದರು. ಆದರೆ ಈಗ ಕ್ಯಾಮರಾಗಳಿಗೂ ರೋಬಾಟ್‌ಗಳನ್ನು ಬಳಸಲಾಗುತ್ತಿದೆ. ಈ ಮೂಲಕ ಕರೊನಾ ಭೀತಿಯಿಂದ ಕ್ಯಾಮರಾಮನ್‌ಗಳನ್ನೂ ದೂರವಿಡಲಾಗಿದೆ. ಇವು ರಿಮೋಟ್ ಕಂಟ್ರೋಲ್‌ಗಳ ಮೂಲಕ ಕಾರ್ಯನಿರ್ವಹಿಸುತ್ತವೆ.

    ವೀಕ್ಷಕವಿವರಣೆಕಾರರಿಗೂ ಸಾಮಾಜಿಕ ಅಂತರ

    PHOTOS | ಬದಲಾಗಿದೆ ಕ್ರಿಕೆಟ್, ಇಲ್ಲಿದೆ ನೋಡಿ ಸಾಕ್ಷಿ!
    ಹಿಂದೆಲ್ಲ ವೀಕ್ಷಕವಿವರಣೆಕಾರರು ಜತೆಯಾಗಿಯೇ ನಿಂತು ಪಂದ್ಯದ ಬಿಡುವಿನ ವೇಳೆ ವಿಶ್ಲೇಷಣೆ ನಡೆಸುತ್ತಿದ್ದರು. ಈಗ ಅವರು ಕೂಡ ಮೈದಾನದಲ್ಲಿ ಮತ್ತು ಪ್ರೆಸ್ ಬಾಕ್ಸ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

    ಹ್ಯಾಂಡ್ ಸ್ಯಾನಿಟೈಸರ್ ಬಳಕೆ

    PHOTOS | ಬದಲಾಗಿದೆ ಕ್ರಿಕೆಟ್, ಇಲ್ಲಿದೆ ನೋಡಿ ಸಾಕ್ಷಿ!
    ಆಟಗಾರರು ಹಿಂದೆಲ್ಲ ಮೈದಾನದ ಬೌಂಡರಿ ಗೆರೆಯಲ್ಲಿ ಕ್ಷೇತ್ರರಕ್ಷಣೆ ಮಾಡುವಾಗ ನಡುನಡುವೆ ಪ್ರೇಕ್ಷಕರಿಗೆ ಹಸ್ತಾಕ್ಷರಗಳನ್ನು ನೀಡುತ್ತಿದ್ದರು. ಈಗ ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣದಲ್ಲಿ ಆಟಗಾರರು ಬೌಂಡರಿ ಗೆರೆಯ ಪಕ್ಕದಲ್ಲೇ ಇಡಲಾಗಿರುವ ಹ್ಯಾಂಡ್ ಸ್ಯಾನಿಟೈಸರ್ ಆಗಾಗ ಬಳಸುತ್ತಿದ್ದಾರೆ. ಇನ್ನು ಜೈವಿಕ-ಸುರಕ್ಷಾ ವಾತಾವರಣದಲ್ಲಿರುವ ಎಲ್ಲ ಆಟಗಾರರಿಗೆ ದಿನನಿತ್ಯ ಆರೋಗ್ಯ ತಪಾಸಣೆಯೂ ನಡೆಯುತ್ತಿದೆ.

    ಆತಿಥೇಯ ಇಂಗ್ಲೆಂಡ್​ ತಂಡಕ್ಕೆ ಡೊಮಿನಿಕ್​ ಸಿಬ್ಲೆ ಆಸರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts