More

    ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ನೇಪಾಳ ಸರ್ಕಾರಕ್ಕೆ ಖಡಕ್​ ವಾರ್ನಿಂಗ್​ ಕೊಟ್ಟ ಬಿಕಿನಿ ಕಿಲ್ಲರ್ ಚಾರ್ಲ್ಸ್​ ಶೋಭರಾಜ್!​

    ನವದೆಹಲಿ: ಬಿಕಿನಿ ಕಿಲ್ಲರ್​ ಎಂದೇ ಕುಖ್ಯಾತಿಯಾಗಿರುವ ಫ್ರೆಂಚ್​ ಸರಣಿ ಹಂತಕ ಚಾರ್ಲ್ಸ್​ ಶೋಭರಾಜ್ 19 ವರ್ಷಗಳ ಜೈಲು ವಾಸ ಅನುಭವಿಸಿ ನೇಪಾಳದ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಸದ್ಯ ತನ್ನ ದೇಶಕ್ಕೆ ಪ್ರಯಾಣ ಬೆಳೆಸಿರುವ ಶೋಭರಾಜ್​ ನೇಪಾಳ ಸರ್ಕಾರಕ್ಕೆ ಖಡಕ್​ ಎಚ್ಚರಿಕೆ ನೀಡಿದ್ದು, ನಾನು ಮಾಡಬೇಕಿರುವುದು ಬೇಕಾದಷ್ಟಿದೆ ಎಂದಿದ್ದಾನೆ.

    ಎರಡು ಕೊಲೆ ಪ್ರಕರಣದಲ್ಲಿ 19 ವರ್ಷ ಜೈಲು ಶಿಕ್ಷೆ ಅನುಭವಿಸಿದ ಶೋಭರಾಜ್​ ನಿನ್ನೆ ತನ್ನ ತವರು ದೇಶಫ್ರಾನ್ಸ್​ಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ನೇಪಾಳ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

    ನಾನು ಯಾವುದೇ ಕಾರಣಕ್ಕೂ ನೇಪಾಳ ಸರ್ಕಾರವನ್ನು ಬಿಡುವುದಿಲ್ಲ. ಆ ಎರಡು ಕೊಲೆ ಪ್ರಕರಣಗಳಲ್ಲಿ ನಾನು ನಿರಪರಾಧಿ. ಹೀಗಾಗಿ ನಾನು ಕೆಟ್ಟದ್ದನ್ನಾಗಲಿ ಅಥವಾ ಒಳ್ಳೆಯದನ್ನಾಗಲಿ ಅನುಭವಿಸಬೇಕಾಗಿಲ್ಲ. ನಾನು ನಿರಪರಾಧಿ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ ಎಂದು ಹೇಳಿದರು. ಅಲ್ಲದೆ, ನೇಪಾಳದ ಜಿಲ್ಲಾ ನ್ಯಾಯಾಧೀಶರು, ಒಬ್ಬ ಸಾಕ್ಷಿಯನ್ನೂ ಕರೆಯದೆ ಮತ್ತು ವಾದ ಮಂಡಿಸಲು ಆರೋಪಿಗೆ ನೋಟಿಸ್ ನೀಡದೆ ತೀರ್ಪು ಬರೆದರು ಎಂದು ಶೋಭರಾಜ್​ ಆಕ್ರೋಶ ಹೊರಹಾಕಿದ್ದಾರೆ.

    ನೆಟ್‌ಫ್ಲಿಕ್ಸ್ ಸರಣಿ “ದಿ ಸರ್ಪೆಂಟ್” ನಲ್ಲಿ ಚಾರ್ಲ್ಸ್ ಶೋಭರಾಜ್​ ಅವರ ಜೀವನವನ್ನು ವಿವರಿಸಲಾಗಿದೆ. 1970ರ ದಶಕದಲ್ಲಿ ಏಷ್ಯಾದಾದ್ಯಂತ ನಡೆದ ಸುಮಾರು 20 ಕ್ಕೂ ಹೆಚ್ಚು ಕೊಲೆಗಳಿಗೆ ಈ ಸರಣಿ ಸಂಬಂಧಿಸಿದೆ. ವಿಯೆಟ್ನಾಂ ಮಹಿಳೆ ಹಾಗೂ ಭಾರತೀಯ ಪ್ರಜೆಗೆ ಜನಿಸಿದ ಶೋಭರಾಜ್, ಬಾಲ್ಯದಲ್ಲಿಯೇ ಪೋಷಕರು ಬೇರ್ಪಟ್ಟಿದ್ದರಿಂದ ಅಪರಾಧಗಳನ್ನು ಅಭ್ಯಾಸ ಮಾಡಿಕೊಂಡ. 1970 ರಿಂದ 1976ರವರೆಗೆ ಶೋಭರಾಜ್​ ಹೆಸರು ಕೇಳಿದರೆ ಎಲ್ಲರು ನಡುಗುತ್ತಿದ್ದರು. ಅನೇಕ ಗಂಭೀರ ಅಪರಾಧಗಳನ್ನು ಈತ ಮಾಡಿದ್ದಾನೆ. ಏಷ್ಯನ್​ ದೇಶದ ಅನೇಕ ವಿದೇಶಿ ಮಹಿಳೆಯರ ಕೊಲೆಗೆ ಈತ ಹೊಣೆಯಾಗಿದ್ದಾನೆ. 19 ವರ್ಷಗಳ ಜೈಲು ಶಿಕ್ಷೆಯ ಬಳಿಕ ನೇಪಾಳ ಜೈಲಿನಿಂದ ಡಿ. 23 (ಶುಕ್ರವಾರ) ರಂದು ಬಿಡುಗಡೆಯಾದನು. ಫ್ರಾನ್ಸ್​, ಗ್ರೀಸ್​, ಟರ್ಕಿ, ಇರಾನ್​, ಅಫ್ಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಭಾರತ, ಥಾಯ್ಲೆಂಡ್​ ಮತ್ತು ಮಲೇಷಿಯಾದಲ್ಲಿ ಅನೇಕ ಸುಲಿಗೆಗಳನ್ನು ಮಾಡಿದ್ದಾನೆ.

    ಕಳೆದ ಬುಧವಾರ (ಡಿ.21) ಶೋಭರಾಜ್​ನನ್ನು ಬಿಡುಗಡೆ ಮಾಡಿ ನೇಪಾಳದ ಸುಪ್ರಿಂಕೋರ್ಟ್​ ಆದೇಶ ಹೊರಡಿಸಿತು. 2017ರಲ್ಲಿ ಶೋಭರಾಜ್​ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ. ಭಾರತ ಮತ್ತು ನೇಪಾಳ ಸೇರಿ ಒಟ್ಟು 21 ವರ್ಷ ಜೈಲು ಶಿಕ್ಷೆ ಅನುಭಿಸಿದ್ದಾನೆ. ಸದ್ಯ ಶೋಭರಾಜ್​ಗೆ 78 ವರ್ಷ ವಯಸ್ಸು. ನಿನ್ನೆ ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ನೇಪಾಳ ಸರ್ಕಾರಕ್ಕೆ ಶೋಭರಾಜ್​ ವಾರ್ನಿಂಗ್​ ಮಾಡಿದ್ದು, ಅಮಾಯಕ ಮೇಲೆ ಸರಣಿ ಹಂತಕ ಪ್ರಕರಣ ದಾಖಲಿಸಿದ್ದಕ್ಕೆ ಯಾರನ್ನು ಬಿಡುವುದಿಲ್ಲ ಎಂದಿದ್ದಾನೆ.

    2003ರಲ್ಲಿ ಉತ್ತರ ಅಮೆರಿಕದ ಇಬ್ಬರು ಪ್ರವಾಸಿಗರನ್ನು ಹತ್ಯೆಗೈದ ಪ್ರಕರಣದಲ್ಲಿ ನೇಪಾಳದ ರಾಜಧಾನಿ ಕಠ್ಮಂಡು ಪೊಲೀಸರು ಶೋಭರಾಜ್​​ನನ್ನು ಬಂಧಿಸಿದ್ದರು. ಆ ಸಮಯದಲ್ಲಿ ನೇಪಾಳದ ಸುಪ್ರೀಂಕೋರ್ಟ್ ಶೋಭರಾಜ್​ಗೆ ಜೀವಾವಧಿ ಶಿಕ್ಷೆ ವಿಧಿಸಿತು. ಅಂದಿನಿಂದ ಶೋಭರಾಜ್ ಜೈಲಿನಲ್ಲಿದ್ದ. ನೇಪಾಳದಲ್ಲಿ ಜೀವಾವಧಿ ಶಿಕ್ಷೆ 20 ವರ್ಷಗಳು. 19 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ಚಾರ್ಲ್ಸ್, ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು. ವಯಸ್ಸು ಮತ್ತು ಅನಾರೋಗ್ಯದ ಹಿನ್ನೆಲೆಯಲ್ಲಿ ಚಾರ್ಲ್ಸ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಶುಕ್ರವಾರ ನೇಪಾಳ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

    ಜೈಲಿನಿಂದ ಬಿಡುಗಡೆ ಮಾಡಿದ ಬಳಿಕ ಹೆಚ್ಚಿನ ಪ್ರಕ್ರಿಯೆಗಾಗಿ ವಲಸೆ ಅಧಿಕಾರಿಗಳಿಗೆ ಆತನನ್ನು ಹಸ್ತಾಂತರಿಸಲಾಯಿತು. ಶೋಭರಾಜ್​ನನ್ನು ಫ್ರಾನ್ಸ್‌ಗೆ ಕಳುಹಿಸಲು ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ. ಶೋಭರಾಜ್ ಭಾರತದಲ್ಲಿಯೂ ಅನೇಕ ಕೊಲೆಗಳನ್ನು ಮಾಡಿದ್ದಾನೆ. 1976ರಲ್ಲಿ ವಿವಿಧ ಜೈಲುಗಳಲ್ಲಿ ಆತ ಬಂಧಿಯಾಗಿದ್ದ. ಬೀಚ್‌ಗಳಲ್ಲಿ ಬಿಕಿನಿ ಧರಿಸಿದ ಹುಡುಗಿಯರನ್ನು ಟಾರ್ಗೆಟ್​ ಮಾಡಿ ಕೊಂದ ಆರೋಪ ಹೊತ್ತಿರುವುದರಿಂದ ಶೋಭರಾಜ್​ನನ್ನು ಬಿಕಿನಿ ಕಿಲ್ಲರ್ ಎಂದೂ ಕರೆಯುತ್ತಾರೆ. (ಏಜೆನ್ಸೀಸ್​)

    ಯುವಕನನ್ನು ಬೆದರಿಸಲು ಗ್ಯಾಂಗ್​ ಕಟ್ಕೊಂಡು 450 ಕಿ.ಮೀ ಪ್ರಯಾಣಿಸಿದ ಟಿಕ್​ಟಾಕ್​ ಸ್ಟಾರ್​ಗೆ ಕಾದಿತ್ತು ಬಿಗ್​ ಶಾಕ್​!

    VIDEO | ಹಣ ಕೊಡುವಂತೆ ಪೀಡಿಸಿದ ಪೋರ್ನ್​ ಸ್ಟಾರ್; ಮನನೊಂದು ಹೆಂಡತಿ-ತಾಯಿಯೊಂದಿಗೆ ವಿಷ ಸೇವಿಸಿದ ಸಂತ್ರಸ್ತ ಯುವಕ!

    ಕೋವಿಡ್​ ನಿಯಮ ಪಾಲನೆ ವಿಚಾರದಲ್ಲಿ ಕಾಂಗ್ರೆಸ್​-ಬಿಜೆಪಿ ಕಚ್ಚಾಟದ ನಡುವೆ ದೆಹಲಿ ಪ್ರವೇಶಿಸಿದ ಭಾರತ್​ ಜೋಡೋ ಯಾತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts