More

    ಈ ಬಾರಿ ಚಾರ್ ​​ಧಾಮ್​ ಯಾತ್ರಾ ಇಲ್ಲ : ಉತ್ತರಾಖಂಡ ಸಿಎಂ

    ಡೆಹ್ರಾಡೂನ್ : ಕರೊನಾ ಪ್ರಕರಣಗಳು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರವು ಈ ಬಾರಿ ಚಾರ್​ ಧಾಮ್​ ಯಾತ್ರಾಗೆ ಅವಕಾಶ ನೀಡುತ್ತಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಹೇಳಿದ್ದಾರೆ.

    ಮೇ 14 ರಿಂದ ಚಾರ್ ​ಧಾಮ್ ಅಂದರೆ ನಾಲ್ಕು ಮುಖ್ಯ ತೀರ್ಥ ಕ್ಷೇತ್ರಗಳಾದ ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿಗಳಿಗೆ ಭಕ್ತರ ಯಾತ್ರೆಗೆ ರಾಜ್ಯ ಸರ್ಕಾರ ಅವಕಾಶ ಕೊಟ್ಟಿತ್ತು. ಇದಕ್ಕಾಗಿ ನಿನ್ನೆ ಹೊಸ ಎಸ್​ಒಪಿಯನ್ನು ಸಹ ಬಿಡುಗಡೆ ಮಾಡಿತ್ತು. ಆದರೆ ಕುಂಭ ಮೇಳದ ರೀತಿಯಲ್ಲಿ ಲಕ್ಷಾಂತರ ಜನ ಸೇರಿ ಕರೊನಾ ಸೋಂಕು ಹೆಚ್ಚಾಗಿ ಹರಡುವುದರ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಇದೀಗ ಸರ್ಕಾರ ಯಾತ್ರೆಗೆ ಅವಕಾಶ ನೀಡಬಾರದೆಂಬ ನಿರ್ಧಾರ ಕೈಗೊಂಡಿದೆ.

    ಇದನ್ನೂ ಓದಿ: ಭಾರತದ ಆಕ್ಸಿಜನ್ ಪೂರೈಕೆಗಾಗಿ 50 ಸಾವಿರ ಡಾಲರ್ ನೀಡಿದ ಐಪಿಎಲ್ ಆಟಗಾರ

    “ರಾಜ್ಯದಲ್ಲಿನ ಕರೊನಾ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಉತ್ತರಾಖಂಡ ಸರ್ಕಾರವು ಚಾರ್ ಧಾಮ್ ಯಾತ್ರೆಯನ್ನು ಸಸ್ಪೆಂಡ್​ ಮಾಡಿದೆ. ನಾಲ್ಕು ದೇವಾಲಯಗಳಲ್ಲಿ ಕೇವಲ ಪೂಜಾರಿಗಳು ಶಾಸ್ತ್ರಗಳನ್ನು ಮತ್ತು ಪೂಜೆಯನ್ನು ನೆರವೇರಿಸಬಹುದು” ಎಂದು ಸಿಎಂ ರಾವತ್ ಹೇಳಿದ್ದಾರೆ.

    ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಕುಂಭ ಮೇಳದ ಸಮಯದಲ್ಲಿ ಲಕ್ಷಾಂತರ ಜನರು ಸೇರಿದ್ದರಿಂದ ರಾಜ್ಯದಲ್ಲಿ ಕರೊನಾ ಸೋಂಕಿನ ಪ್ರಮಾಣ ಶೇ. 1800 ರಷ್ಟು ಹೆಚ್ಚಾಗಿತ್ತು ಎನ್ನಲಾಗಿದೆ. ಕಳೆದ 24 ಗಂಟೆಗಳಲ್ಲಿ 6,054 ಹೊಸ ಕರೊನಾ ಪ್ರಕರಣಗಳು ಮತ್ತು 108 ಸಂಬಂಧಿತ ಸಾವುಗಳು ವರದಿಯಾಗಿವೆ. ರಾಜ್ಯದಲ್ಲಿ ಒಟ್ಟು 45,383 ಸಕ್ರಿಯ ಕರೊನಾ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. (ಏಜೆನ್ಸೀಸ್)

    ಭಾರತದಲ್ಲಿರುವ ಅಮೆರಿಕನ್ನರಿಗೆ ‘ಈಗಲೇ ವಾಪಸ್ ಬನ್ನಿ’ ಎಂದ ಅಮೆರಿಕ ಸರ್ಕಾರ

    ಕರೊನಾ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಬೆಡ್​​ ಬೇಕೆ ? ಬೆಂಗಳೂರಿನಲ್ಲಿ ಈ ವಿಧಾನ ಅನುಸರಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts