More

    ಚನ್ನಪಟ್ಟಣದಲ್ಲಿ ದುಪ್ಪಟ್ಟು ದರ ಪಡೆಯುತ್ತಿದ್ದ ಅಂಗಡಿಗೆ ಬೀಗ

    ಚನ್ನಪಟ್ಟಣ: ದಿನಸಿ ಪದಾರ್ಥಗಳಿಗೆ ನಿಗದಿತ ಬೆಲೆಗಿಂತ ದುಪ್ಪಟ್ಟು ಹಣ ಪಡೆಯುತ್ತಿದ್ದ ತಾಲೂಕಿನ ಗ್ರಾಮೀಣ ಹಾಗೂ ನಗರ ಪ್ರದೇಶದ ಹಲವು ದಿನಸಿ ಅಂಗಡಿಗಳ ಮೇಲೆ ತಹಸೀಲ್ದಾರ್ ಸುದರ್ಶನ್ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ದಾಳಿ ನಡೆಸಿ, ಬೀಗ ಜಡಿದು ನೋಟಿಸ್ ಜಾರಿ ಮಾಡಿದ್ದಾರೆ.

    ಲಾಕ್‌ಡೌನ್ ಆದೇಶವನ್ನು ರ್ದುಬಳಕೆ ಮಾಡಿಕೊಳ್ಳುತ್ತಿರುವ ಕೆಲ ದಿನಸಿ ಅಂಗಡಿ ಮಾಲೀಕರು ಗ್ರಾಹಕರಿಂದ ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಗರದ ಹಾಗೂ ಕೋಡಂಬಳ್ಳಿ ಗ್ರಾಮದ ಕೆಲ ದಿನಸಿ ಅಂಗಡಿಗಳಿಗೆ ಸಿಬ್ಬಂದಿಗಳನ್ನು ಗ್ರಾಹಕರ ಸೋಗಿನಲ್ಲಿ ಕಳುಹಿಸಿಕೊಟ್ಟು ವಹಿವಾಟು ನಡೆಸಿದ ತಹಸೀಲ್ದಾರ್ ಸುದರ್ಶನ್, ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದಿರುವುದನ್ನು ಖಚಿತ ಪಡಿಸಿಕೊಂಡು ಅಂತಹ ಅಂಗಡಿಗಳಿಗೆ ಬೀಗ ಜಡಿಸಿ ನೋಟಿಸ್ ನೀಡಿದ್ದಾರೆ.

    ನಗರದ ಐದು ಹಾಗೂ ಕೋಡಂಬಳ್ಳಿ ಗ್ರಾಮದ ಮೂರು ಅಂಗಡಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳ ತಂಡ, ಎಂಪಿಎಂಸಿ ದರಕ್ಕಿಂತ ಹೆಚ್ಚಿನ ಹಣ ಪಡೆಯುತ್ತಿದ್ದ ಅಂಗಡಿ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಇದಲ್ಲದೇ ಅಂಗಡಿ ಪರವಾನಗಿ ಸೇರಿದಂತೆ ಇತರ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.

    ಆಹಾರ ಇಲಾಖೆ ಸಿಬ್ಬಂದಿ ಅನುಷಾ, ತೂಕ ಮತ್ತು ಮಾಪನ ಇಲಾಖೆ ಅಧಿಕಾರಿ ರಾಮಚಂದ್ರ, ಎಂಪಿಎಂಸಿ ಕಾರ್ಯದರ್ಶಿ ಶ್ರೀನಿವಾಸ್, ಶಿಕ್ಷಣ ಸಂಯೋಜಕ ಗಂಗಾಧರ್‌ಮೂರ್ತಿ ಸೇರೊ ಹಲವು ಅಧಿಕಾರಿಗಳು ಇದ್ದರು.

    ಮಾಲೀಕರ ವಿರುದ್ಧ ಕಿಡಿ: ಹೆಚ್ಚಿನ ದರ ಪಡೆಯುತ್ತಿರುವ ದಿನಸಿ ಅಂಗಡಿ ಮಾಲೀಕರ ಮೇಲೆ ಕಿಡಿಕಾಡಿರುವ ತಹಸೀಲ್ದಾರ್ ಸುದರ್ಶನ್, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವೀಯತೆ ಮೆರೆಯಬೇಕು. ಗ್ರಾಹಕರಿಂದ ದುಪ್ಪಟ್ಟು ಹಣ ಪಡೆಯುವ ಮೂಲಕ ಅಮಾನವೀಯ ನಡೆ ತೋರುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪರವಾನಗಿ ಇಲ್ಲದೇ ನಡೆಯುತ್ತಿದ್ದ ಅಂಗಡಿಗಳ ಮೇಲೆ ಕ್ರಮ ಜರುಗಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts