More

  ಮಳೆಗಾಗಿ ಪ್ರಾರ್ಥಿಸಿ ಕಂತೆ ಭಿಕ್ಷೆ

  ಚನ್ನಗಿರಿ: ಮಳೆರಾಯನ ಕೃಪೆಗಾಗಿ ಪ್ರಾರ್ಥಿಸಿ ತಾಲೂಕಿನ ಪೆನ್ನಸಮುದ್ರ ಗ್ರಾಮದಲ್ಲಿ ಶ್ರೀ ಮಹಾರುದ್ರ ಸ್ವಾಮಿ ದೇವರ ಸಹಿತ ಗ್ರಾಮಸ್ಥರು ಮಂಗಳವಾರ ಕಂತಿ ಭಿಕ್ಷೆ ಮಾಡಿದರು.

  ಗ್ರಾಮ ದೇವರಾದ ಶ್ರೀ ಮಹಾರುದ್ರ ಸ್ವಾಮಿ ಅಪ್ಪಣೆ ಕೇಳಿದಾಗ ಮೂರು ದಿನ ಪ್ರತಿ ಮನೆಗೆ ಕಂತಿ ಭಿಕ್ಷೆ ಮಾಡಿ, ಭಕ್ತರು ಪ್ರಸಾದ ಸ್ವೀಕರಿಸಿದರೆ ಮಳೆ ಬರುತ್ತದೆ ಎಂದು ನುಡಿಯಿತು.

  ದೇವರ ಆಜ್ಞೆಯಂತೆ ಗ್ರಾಮಸ್ಥರು ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಕಂತಿ ಭಿಕ್ಷೆಯಾಗಿ ನೀಡಿದರು. ಬಳಿಕ ರಾತ್ರಿ ಗ್ರಾಮದ ಎಲ್ಲರೂ ಒಟ್ಟಿಗೆ ಸೇರಿ ಪ್ರಸಾದ ಸ್ವೀಕರಿಸಿದರು.

  ಈ ಕುರಿತು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಕುಮಾರ್ ಮಾತನಾಡಿ, ಬರ ಬಂದಾಗ ಗ್ರಾಮದ ದೇವರನ್ನು ಹೊರಡಿಸಿ ಅಪ್ಪಣೆ ಕೇಳಿ, ಕಂತಿ ಭಿಕ್ಷೆ ಎತ್ತಲಾಗುತ್ತದೆ. ಈ ವೇಳೆ ಬಂದ ಕಾಣಿಕೆ, ಪ್ರಸಾದವನ್ನು ದೇಗುಲಕ್ಕೆ ತಂದು ಗ್ರಾಮಸ್ಥರು ಪ್ರಸಾದ ಸ್ವೀಕರಿಸಿದಾಗ ಮಳೆ ಬರುತ್ತದೆ ಎಂಬ ವಾಡಿಕೆ ಇದೆ. ನಮ್ಮ ಪೂರ್ವಜನರು ನಡೆಸಿಕೊಂಡು ಪದ್ಧತಿಯನ್ನು ನಾವು ಮುಂದುವರಿಸಿದ್ದೇವೆ. ಪೂಜೆ ಮಾಡಿದ ಮಾರನೆ ದಿನವೇ ಮಳೆ ಬಂದಿದೆ ಎಂದು ಹೇಳಿದರು.

  ಗ್ರಾಮದ ಮುಖಂಡರಾದ ಜಿ. ಗೌಡ್ರು ಪ್ರಕಾಶ, ನಿವೃತ್ತ ಶಿಕ್ಷಕ ಮಾದಪ್ಪ, ನಿವೃತ್ತ ಶಿಕ್ಷಕ ಬಸವರಾಜ್, ರವಿಕುಮಾರ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts