More

    ಜನರ ದೂರಿಗೆ ಕ್ಯಾರೇ ಎನ್ನದ ಪುರಸಭೆ

    ಚನ್ನಗಿರಿ: ಪಟ್ಟಣದ ಹಲವೆಡೆ ಬೀದಿನಾಯಿಗಳ ಕಾಟ ಅಧಿಕವಾಗಿದ್ದು, ಮಕ್ಕಳು ಹಾಗೂ ಸಾರ್ವಜನಿಕರು ಹಗಲು ಹೊತ್ತಿನಲ್ಲೇ ಓಡಾಡಲು ಹೆದರುವಂತಾಗಿದೆ. ಪುರಸಭೆ ಅಧಿಕಾರಿಗಳಿಗೆ ಸಾರ್ವಜನಿಕರು ಅನೇಕ ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ.

    ಪಟ್ಟಣದಲ್ಲಿ 23 ವಾರ್ಡ್‌ಗಳಿದ್ದು, ನಾಲ್ಕು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಬೀದಿನಾಯಿ ಹಿಡಿಯಲು ಕ್ರಮ ಕೈಗೊಂಡಿತ್ತಾದರೂ, ಪೂರ್ಣಗೊಳಿಸಿಲ್ಲ. ಹೀಗಾಗಿ ನಾಯಿಗಳ ಸಂಖ್ಯೆ ಹೆಚ್ಚಿದೆ. ದಾರಿಯಲ್ಲಿ ಗುಂಪು-ಗುಂಪಾಗಿ ಅಡ್ಡ ನಿಲ್ಲುವ ನಾಯಿಗಳಿಂದ ತಪ್ಪಿಸಿಕೊಂಡು ಹೋಗುವುದೇ ಕಷ್ಟವಾಗಿದೆ. 20 ಅಧಿಕ ಸಂಖ್ಯೆ ನಾಯಿಗಳು ಒಂದೊಂದು ಗುಂಪಿನಲ್ಲಿತ್ತವೆ.

    ವಾಹನ ಚಾಲಕರು ಮೈ ಮರೆತರೆ ಅಪಘಾತ ಕಟ್ಟಿಟ್ಟ ಬುತ್ತಿ. ಬೈಕ್ ಸವಾರರು ಈಗಾಗಲೇ ಅನೇಕ ಬಾರಿ ನಾಯಿಗಳಿಗೆ ಡಿಕ್ಕಿ ಹೊಡೆದು ಕೈಕಾಲು ಮುರಿದುಕೊಂಡಿದ್ದಾರೆ. ಕಾರು ಚಾಲಕರು ಎದುರಿಗೆ ಬರುವ ನಾಯಿಗಳ ಪ್ರಾಣ ರಕ್ಷಿಸಲು ಹೋಗಿ ಅಪಘಾತ ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ. ರಸ್ತೆಗೆ ಬರುವ ಜನರು ನಾಯಿಗಳ ದಂಡು ಕಂಡು ಅವು ಮುಂದೆ ಹೋಗುವವರೆಗೂ ನಿಂತು ಕಾಯಬೇಕಿದೆ. ಯಾವುದಾದರೂ ಮನೆ ಬಾಗಿಲು ಹಾಕಿದರೆ ಆ ಮನೆಯ ಬಾಗಿಲ ಮುಂದೆ ಬೀಡು ಬಿಟ್ಟಿರುತ್ತವೆ.

    ಪಟ್ಟಣದ ಕೃಷ್ಣಪ್ಪ ಮಾತನಾಡಿ, ಪಟ್ಟಣದ ಸಂತೇ ಮೈದಾನದಲ್ಲಿ ಕೋಳಿ ಹಾಗೂ ಮಾಂಸದಂಗಡಿಗಳಿಗೆ ಪುರಸಭೆ ಅವಕಾಶ ನೀಡಿದ್ದು, ಅಂಗಡಿ ಮಾಲೀಕರು ಮಾಂಸದ ತ್ಯಾಜ್ಯ ವಸ್ತುಗಳನ್ನು ಬೇರೆ ಕಡೆ ವಿಲೇವಾರಿ ಮಾಡದೇ ನಾಯಿಗಳಿಗೆ ಹಾಕುತ್ತಾರೆ. ಹತ್ತಿರ ಹೋದವರನ್ನೇ ಕಚ್ಚಲು ಮುಂದಾಗುತ್ತವೆ. ಹೀಗಾಗಿ ಜನರು ರಸ್ತೆಗೆ ಬರಲು ಹೆದರುತ್ತಾರೆ ಎಂದರು.

    ಪಟ್ಟಣದಲ್ಲಿ ನಾಯಿ ಹಿಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಬೀದಿ ನಾಯಿಗಳ ಜೊತೆ ಸಾಕಿದ ನಾಯಿಗಳು ಸೇರಿಕೊಳ್ಳುತ್ತವೆ. ನಾಯಿ ಸಾಕಿದವರು ರಸ್ತೆಗೆ ಬಿಡಬಾರದು. ಜನರು ಭಯಪಡುವುದು ಬೇಡ. ನಾಯಿಗಳನ್ನು ಹಿಡಿಸಲು ಕ್ರಮ ತೆಗೆದುಕೊಳ್ಳುತ್ತೇನೆ.
    > ಬಸವರಾಜ್ ಐಹೊಳೆ ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts