More

    ಮರಿತಿಬ್ಬೇಗೌಡರ ಪರ ಮತಯಾಚನೆ

    ಚಾಮರಾಜನಗರ: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೂ 3ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದು ಮುಖಂಡ ಶ್ರೀನಿವಾಸಗೌಡ ಶಿಕ್ಷಕರ ಮತದಾರರಲ್ಲಿ ಮನವಿ ಮಾಡಿದರು.

    ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮರಿತಿಬ್ಬೇಗೌಡ ಪರ ಮತಯಾಚಿಸಿ ಮಾತನಾಡಿದ ಅವರು, ಜಿಲ್ಲೆಯ ಶಿಕ್ಷಕ ಮತದಾರರು ಕಳೆದ ಚುನಾವಣೆಯಲ್ಲಿ ಮರಿತಿಬ್ಬೇಗೌಡರಿಗೆ ಅತ್ಯಧಿಕ ಮತಗಳನ್ನು ನೀಡಿ ಆಶೀರ್ವಾದ ಮಾಡಿದರು. ಅದೇ ರೀತಿ ಈ ಬಾರಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಿಕೊಡಲಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಅವರು ಪರ ಉತ್ತಮ ವಾತಾವರಣ ಇದ್ದು. ಮರಿತಿಬ್ಬೇಗೌಡರು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಷಡಕ್ಷರಿ, ಪಣ್ಯದಹುಂಡಿ ರಾಜು, ಗ್ರಾಪಂ ಮಾಜಿ ಸದಸ್ಯ ಕಲ್ಪುರ ಮಂಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವ್ಯವಸ್ಥಾಪಕಿ ಪೂರ್ಣಿಮಾ, ಉಪನ್ಯಾಸಕರಾದ ಮುರುಗೇಶ್, ರಾಜೇಂದ್ರ, ಗಂಗಾಧರ್, ಶಿಕ್ಷಕ ಡಾ.ಲಿಂಗರಾಜು, ಯುವ ಕಾಂಗ್ರೆಸ್ ಸದಸ್ಯ ಪ್ರಸಾದ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts