More

    5ರ ಬಾಲೆ ಮೇಲೆ ವಿಕೃತಿ ಮೆರೆದ 55ರ ಕಾಮುಕ

    ಚಾಮರಾಜನಗರ: ಏನೂ ಅರಿಯದ ಕಂದಮ್ಮನ ಮೇಲೆ 55 ವರ್ಷದ ಕಾಮುಕನೊಬ್ಬ ವಿಕೃತಿ ಮೆರೆದಿದ್ದು, ನೋವಿನಿಂದ ಬಳಲುತ್ತಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮಂಜುನಾಥ ನಗರದಲ್ಲಿ ಈ ದುಷ್ಕೃತ್ಯ ಸಂಭವಿಸಿದ್ದು, ಆರೋಪಿ ವೇಣುಗೋಪಾಲ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ಚಾಕೋಲೇಟ್​ ಕೊಡಿಸುವ ಮತ್ತು ಚೆಂಡಿನ ಆಸೆ ತೋರಿಸಿ 5 ವರ್ಷ ವಯಸ್ಸಿನ ಬಾಲಕಿ ಮೇಲೆ ವೇಣುಗೋಪಾಲ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬಾಲಕಿಯ ಜನನಾಂಗದಲ್ಲಿ ಗಾಯದ ಗುರುತುಗಳನ್ನು ಗಮನಿಸಿದಾಗ ಪ್ರಕರಣ ಬೆಳೆಕಿಗೆ ಬಂದಿದೆ ಎಂದು ಸಂತ್ರಸ್ತ ಮಗುವಿನ ಪಾಲಕರು ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಕೇಸ್​ ದಾಖಲಿಸಿದ್ದಾರೆ.

    ಈ ಘಟನೆ ಸಂಭವಿಸಿ ಮೂರ್ನಾಲ್ಕು ದಿನಗಳಾಗಿದ್ದು, ಪಾಲಕರು ದೂರು ಕೊಡಲು ಆರಂಭದಲ್ಲಿ ಹಿಂಜರಿದಿದ್ದು ಎನ್ನಲಾಗಿದೆ. ಜನನಾಂಗದಲ್ಲಿ ಆದ ಗಾಯಕ್ಕೆ ಚಿಕಿತ್ಸೆಕೊಡಿಸಲೆಂದು ಮಗುವನ್ನು ಆಸ್ಪತ್ರೆಗೆ ಕರೆತಂದಾಗ ವೈದ್ಯರು ಪಾಲಕರಿಗೆ ಧೈರ್ಯತುಂಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಪಾಲಕರು ಆರೋಪಿ ವಿರುದ್ಧ ಕೇಸು ದಾಖಲಿದ್ದಾರೆ. ದೂರಿನ ಮೇರೆಗೆ ಗುರುವಾರ ಆರೋಪಿಯನ್ನು ಬಂಧಿಸಲಾಗಿದೆ.

    ತುಂಬಾ ಆಸೆಯೊಂದಿಗೆ ಬಂದ ಗೆಳತಿಯನ್ನು ರಾತ್ರೋರಾತ್ರಿ ಕಾರಿನಿಂದ ಕೆಳಗಿಳಿಸಿ ಮಾಡಬಾರದ್ದನ್ನು ಮಾಡಿದ್ಲು!

    ತನ್ನದೇ ಸೆಕ್ಸ್​ ವಿಡಿಯೋ ಮಾರುತ್ತಿದ್ದ ಬಸ್​ ಕಂಡಕ್ಟರ್​! ಪರಸ್ತ್ರೀಯರೊಂದಿಗೂ ಲೈಂಗಿಕ ಸಂಪರ್ಕ, 65 ವಿಡಿಯೋ ವಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts