More

    ಭಕ್ತಿ ಸಾರುವ ಮಹದೇಶ್ವರ ಕಲಾ ತಂಡ

    ಯಳಂದೂರು: ತಾಲೂಕಿನ ಕಂದಹಳ್ಳಿ ಗ್ರಾಮದ ಶ್ರೀಮಹದೇಶ್ವರ ಜಾನಪದ ಕಲಾ ತಂಡ ತಂಬೂರಿ ಕಥಾಶೈಲಿ ಹಾಗೂ ಜಾನಪದ ಭಕ್ತಿಗೀತೆಗಳ ಮೂಲಕ ಮೋಡಿ ಮಾಡುವುದರೊಂದಿಗೆ ಆಸಕ್ತರಿಗೆ ಪ್ರಾಯೋಗಿಕ ತರಬೇತಿಯನ್ನು ಉಚಿತವಾಗಿ ನೀಡುತ್ತಿದೆ.

    ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈ ತಂಡವು ಜಾನಪದ ಭಕ್ತಿಗೀತೆಗಳ ಗಾಯನದ ಮೂಲಕ ಹೆಸರುವಾಸಿಯಾಗಿದೆ. ಆಕಾಶವಾಣಿಯ ಹಿರಿಯ ಜಾನಪದ ಕಲಾವಿದ ಮಾದಶೆಟ್ಟಿ ಹಾಗೂ ಅವರ ಮಗ ಎಂ.ಮಹದೇವಶಟ್ಟಿ ನೇತೃತ್ವದ ತಂಡ ತಂಬೂರಿ ಪದಗಳು, ಮಹದೇಶ್ವರರ ಭಕ್ತಿಗೀತೆಗಳನ್ನು ಹಾಡುವ ಮೂಲಕ ಭಕ್ತಿಯ ಸವಿಯನ್ನು ನೆರೆದಿದ್ದವರಿಗೆ ಉಣಬಡಿಸುತ್ತಾರೆ.

    ಮಾದಶೆಟ್ಟಿ ಕುಟುಂಬ ಹಾಗೂ ಸ್ನೇಹಿತರ ತಂಡ ಹಲವು ವರ್ಷಗಳಿಂದಲೂ ಜಾನಪದ ಗಾಯನ, ದೇವರ ತಂಬೂರಿ ಪದಗಳನ್ನು ಹಾಡಿಕೊಂಡೇ ಬದುಕು ಕಟ್ಟಿಕೊಂಡಿದೆ. ಮಾದಶೆಟ್ಟಿ ಅವರು 15ನೇ ವಯಸ್ಸಿನಲ್ಲಿ ಹುಲ್ಲೇಪುರದ ಮಾದಶೆಟ್ಟಿ ಎಂಬುವರ ಗರಡಿಯಲ್ಲಿ ಸಾಕಷ್ಟು ವರ್ಷಗಳ ಕಾಲ ಪಳಗಿದರು. ಬಳಿಕ ಕಂದಹಳ್ಳಿ ಶ್ರೀಮಹದೇಶ್ವರ ಜಾನಪದ ತಂಡ ಕಟ್ಟಿಕೊಂಡು ಗ್ರಾಮಗಳಲ್ಲಿ ದೇವರ ಪೂಜಾ ಕಾರ್ಯಕ್ರಮ, ಪುಣ್ಯಸ್ಮರಣೆ ಕಾರ್ಯಗಳಿಗೆ ಭಾಗವಹಿಸುತ್ತಾ ಕಲಾವಿದರಿಗೆ ಅವಕಾಶ ನೀಡುತ್ತಾ ಬಂದಿದ್ದಾರೆ. ಇವರಿಗೆ ಮೈಸೂರಿನ ಆಕಾಶವಾಣಿಯಲ್ಲಿ 2ರಿಂದ ಮೂರು ಬಾರಿ ಜಾನಪದ ಗೀತೆಗಳನ್ನು ಹಾಡಲು ಅವಕಾಶ ದೊರಕಿದೆ.

    ಶಿವಪುರಾಣ, ಮಾದಪ್ಪನ ಮಾಯೆ, ರಂಗಪ್ಪನ ತುಂಟಾಟ, ನಂಜುಂಡ-ಚಾಮುಂಡೇಶ್ವರಿ ಕಥೆಗಳನ್ನು ಹಗಲು, ಇರುಳೆನ್ನದೆ ಕಂಸಾಳೆಯ ಹಿಮ್ಮೇಳನದಲ್ಲಿ ಕಟ್ಟಿಕೊಡುತ್ತಾರೆ. ಇವರ ಬಳಗವು ಕಥೆಗಳನ್ನು ಹೇಳುವ ಸಂಗೀತಾ ಸುಧೆ ಹರಿಸುತ್ತದೆೆ. ದೇವರ ಕಲ್ಪನೆಯನ್ನು, ಆಯಾ ಸ್ಥಳನಾಮದ ಪರಿಚಯವನ್ನು ಸೊಗಸಾಗಿ ತಿಳಿಸುತ್ತಾರೆ. ಇಂದಿಗೂ ಗ್ರಾಮೀಣ ಭಾದಲ್ಲಿ ಮನೆ ದೇವರು, ಕಥೆಗಳು, ಪುಣ್ಯಸ್ಮರಣೆ ಸೇರಿದಂತೆ ಇತರ ವಿಶೇಷ ದಿನಗಳಲ್ಲಿ ಕಥಾ, ಕಾವ್ಯಗಳನ್ನು ಹಾಡುತಾ ಎಲ್ಲರನ್ನೂ ರಂಜಿಸುತ್ತಿದ್ದಾರೆ.

    ಮಕ್ಕಳಿಗೆ ಜನಪದ ಕಲೆ ಕಲಿಸಿ:
    ಪ್ರಸುತ್ತ ದಿನಗಳಲ್ಲಿ ಜನಪದ ಕಲೆ ಮತ್ತು ಕಲಾವಿದರ ಉಳಿವು ಅಳಿವು ದೇಶದ ಪಾರಂಪರಿಕ ಸಂಪತ್ತಿನ ಬೆಳವಣಿಗೆ ಮೇಲೆ ಅವಲಂಬಿಸಿದೆ. ಸಾಂಸ್ಕೃತಿಕವಾಗಿ ಕ್ರಿಯಾಶೀಲರಾಗುವುದರಿಂದ ಮಾನಸಿಕ ನೆಮ್ಮದಿ ಜತೆಗೆ ಸಂತೋಷ, ಕೀರ್ತಿ ಗಳಿಸಬಹುದು. ಟಿ.ವಿ ಮಾಧ್ಯಮದಿಂದ ಮೂಲ ಜನಪದ ಕಲೆ ಕಣ್ಮರೆಯಾಗುತ್ತಿದೆ. ಈ ರೀತಿಯ ಪರಿಸ್ಥಿತಿ ಮುಂದುವರಿದರೆ ಕಲಾವಿದರು, ಜನಪದ ಕಲೆ ಸಾಹಿತ್ಯ ಅಳಿಯಲಿದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಆಚಾರ-ವಿಚಾರಗಳನ್ನು ತಿಳಿಸಬೇಕು. ಇಂದಿಗೂ ಗ್ರಾಮಗಳಲ್ಲಿ ಮನೆ ದೇವರ ಕಥೆಗಳನ್ನು ರಾತ್ರಿ ಇಡೀ ಹಾಡಿಸುವುತ್ತಾರೆ. ಸಿದ್ದಪ್ಪಾಜಿ, ಚಾಮುಂಡೇಶ್ವರಿ, ಬಿಳಿಗಿರಿಗನಾಥಸ್ವಾಮಿ, ಮಹದೇಶ್ವರ ಕಥೆಗಳು ಸಮಾಜದಲ್ಲಿ ಇರಬೇಕಾದ ನೈತಿಕ ಮೌಲ್ಯ ತಿಳಿಸುತ್ತದೆ.

    ಆಸಕ್ತರಿಗೆ ಪ್ರಾಯೋಗಿಕ ತರಗತಿ:
    ಈ ತಂಡವು ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಆಸಕ್ತರನ್ನು ಕರೆದುಕೊಂಡು ಹೋಗಿ ಹಂತ ಹಂತವಾಗಿ ಜಾನಪದ ಗೀತೆಗಳನ್ನು ಕಲಿಸಲಾಗುತ್ತಿದೆ. ಜತೆಗೆ ಗ್ರಾಮದಲ್ಲಿ ಸಮಯ ಸಿಕ್ಕ ವೇಳೆ ತಂಡದವರು ಮಕ್ಕಳಿಗೆ ಜಾನಪದ ಗೀತೆಗಳ ಅಭ್ಯಾಸವನ್ನು ಮಾಡಿಸುತ್ತಿದ್ದಾರೆ. ಈ ಸೇವಾ ಕಾರ್ಯ ಉಚಿತವಾಗಿದೆ

    ಸನ್ಮಾನ:
    ತಾಲೂಕಿನ ಕಂದಹಳ್ಳಿ ಮಾದಶೆಟ್ಟಿ ಅವರ ಜಾನಪದ ಕಲೆಯನ್ನು ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳು ಅವಕಾಶ ನೀಡುವ ಮೂಲಕ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

    ಹಿರಿಯರ ಮರ್ಗದರ್ಶನ ಮೂಲಕ ಗ್ರಾಮೀಣ ಭಾಗದಲ್ಲಿ ತೆರಳಿ ಚಿಕ್ಕ ವಯಸ್ಸಿನಿಂದ ಈ ರೀತಿಯ ಜಾನಪದ ಕಥೆ, ಕಾವ್ಯ, ಗೀತೆಗಳನ್ನು ಹಾಡುವುದು ಸೇರಿದಂತೆ ಕಲೆಯನ್ನು ಕಲಿಯಲು ಆಸ್ತಕಿಯಿಂದ ಬರುವ ಜನರಿಗೆ ಮಾಹಿತಿ ನೀಡಿ ಕಳುಹಿಸುವ ಕೆಲಸ ಮಾಡಲಾಗುವುದು.
    ಮಾದಶೆಟ್ಟಿ
    ಕಂದಹಳ್ಳಿ ಕಲಾವಿದ, ಯಳಂದೂರು

    ಜಾನಪದ ಗೀತೆಗಳ ಹಾಡುಗಾರಿಕೆಯನ್ನು ಸಾಕಷ್ಟು ವರ್ಷಗಳ ಕಾಲ ಮಾಡುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗುರುತ್ತಿಸುತ್ತಿಲ್ಲ. ಅಲ್ಲದೆ 65 ವರ್ಷ ಮೇಲ್ಪಟ್ಟ ನಮ್ಮ ತಂದೆಯವರಿಗೆ ಮಾಸಾಶನ ಸಹ ದೊರಕಿಲ್ಲ. ಕೂಡಲೇ ಮಾಸಾಶನ ವ್ಯವಸ್ಥೆ ಕಲ್ಪಿಸಬೇಕಿದೆ.
    ಎಂ.ಮಹದೇವಶೆಟ್ಟಿ
    ಕಲಾವಿದ ಕಂದಹಳ್ಳಿ, ಯಳಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts