More

    ಕೌಶಲ ಆಧಾರಿತ ಶಿಕ್ಷಣ ಪಡೆಯಿಡಿ

    ಚಳ್ಳಕೆರೆ: ಶಿಕ್ಷಣದಲ್ಲಿ ಪರಿಪೂರ್ಣವಾಗಿ ಸಾಧನೆ ಮಾಡದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೇವಲ ಪದವಿ ಮುಗಿಸಿಕೊಂಡು ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಮಾಕಂಸ್ ಶಾಲೆಯ ಶಿಕ್ಷಕ ಸಿದ್ದೇಶ್ ಯಾದವ್ ಹೇಳಿದರು.

    ನೆಹರು ಯುವ ಕೇಂದ್ರ, ವೀರ ಮದಕರಿ ನಾಯಕ ಗ್ರಾಮೀಣಭಿವೃದ್ಧಿ ಸಾಂಸ್ಕೃತಿಕ ಸಂಘದಿಂದ ನಗರದ ಎಎಂ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೆರೆಹೊರೆ ಯುವಜನ ಸಂಪತ್ತು ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿದ್ಯಾರ್ಥಿಗಳಲ್ಲಿ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳುವ ಗುರಿ ಇರಬೇಕು. ಗ್ರಾಮೀಣ ಭಾಗದಲ್ಲಿ ಪ್ರೌಢ ಮತ್ತು ಪದವಿ ಶಿಕ್ಷಣದವರೆಗೆ ಕಲಿತು ಸ್ಥಗಿತ ಮಾಡುವ ಪ್ರವೃತ್ತಿ ಬೆಳೆದಿದೆ. ವೃತ್ತಿ ತರಬೇತಿ ಶಿಕ್ಷಣಕ್ಕಾದರೂ ದಾಖಲಾಗಿ ಜೀವನ ರೂಪಿಸಿಕೊಳ್ಳಬೇಕು ಎಂದರು.

    ಪ್ರಾಚಾರ್ಯ ಸೈಯದ್ ಅಹಮ್ಮದ್ ಮಾತನಾಡಿ, ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಕೌಶಲ ಆಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

    ಉಪನ್ಯಾಸಕಿ ವಿಜಯಲಕ್ಷ್ಮೀ ಮಾತನಾಡಿ, ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ಕೃಷಿ, ಗುಡಿ ಕೈಗಾರಿಕೆಗಳು ಮರೆಯಾಗುತ್ತಿವೆ. ವೃತ್ತಿ ಶಿಕ್ಷಣದ ಮೂಲಕ ಜೀವನ ಭದ್ರತೆ ಕಾಪಾಡಿಕೊಳ್ಳಲು ಸಾಧ್ಯ ಎಂದರು.

    ಉಪನ್ಯಾಸಕ ಶಿವಣ್ಣ, ಐಟಿಐ ಕಾಲೇಜಿನ ಅಧ್ಯಕ್ಷ ಸೈಯದ್ ಮಸ್ತಾನ್, ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕ ವೀರೇಶ್ ಯಾದವ್, ಸೈಯದ್ ಮುಬಷೀರ್, ಲಕ್ಷ್ಮೀ, ಭವಾನಿ, ಸುನೀಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts