More

    ಬಯಲುಸೀಮೆಗೆ ನಿರಂತರ ಅನ್ಯಾಯ

    ಚಳ್ಳಕೆರೆ: ಪಾದಯಾತ್ರೆ ರೈತಪರ ಹೋರಾಟವಾಗಿದ್ದು, ಇದರಲ್ಲಿ ರಾಜಕೀಯ ದುರದ್ದೇಶ ಇಲ್ಲ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಹೇಳಿದರು.

    ತಾಲೂಕಿನ ವೇದಾವತಿ ನದಿಗೆ ಕುಡಿವ ನೀರು ಹರಿಸಬೇಕೆಂಬ ಬೇಡಿಕೆಯೊಂದಿಗೆ ಆರಂಭಗೊಂಡ ವೇದಾವತಿ ಸಂರಕ್ಷಣಾ ವೇದಿಕೆ ಪಾದಯಾತ್ರೆ ಭಾನುವಾರ ನಗರ ತಲುಪಿದ ಸಂದರ್ಭ ಮಾತನಾಡಿದರು.

    ರಾಜ್ಯವಾಳಿದ ಯಾವ ಸರ್ಕಾರವೂ ಬರಪೀಡಿತ ಜಿಲ್ಲೆಯ ಒಂದು ಎಕರೆ ಭೂಮಿಯನ್ನೂ ನೀರಾವರಿ ಆಗಿಸಿರುವ ಇತಿಹಾಸವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜಿಪಂ ಸದಸ್ಯ ಎನ್.ಓಬಳೇಶ, ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಬಾಳೆಕಾಯಿ ರಾಮದಾಸ್, ತಾಪಂ ಸದಸ್ಯ ಸಣ್ಣ ಸೂರಯ್ಯ, ಮುಖಂಡರಾದ ದಿನೇಶ್‌ರೆಡ್ಡಿ, ಪಗಡಲಬಂಡೆ ಎಂ.ನಾಗರಾಜ, ಬಿ.ತಿಪ್ಪೇಸ್ವಾಮಿ, ಶೈಲಪ್ಪ, ಗಿರೀಶ, ಆರ್.ಡಿ.ಮಂಜುನಾಥ, ಚೌಳೂರು ಗೌಡ, ಅಲ್ಲಾಪುರ ಬಸಣ್ಣ, ಎಬಿವಿಪಿ ಮಂಜು, ಪಂಚಾಕ್ಷರಿ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts