More

    ನೀರಿಲ್ಲದಿದ್ದಕ್ಕೆ ಐದು ವರ್ಷ ಮೌನ

    ಚಳ್ಳಕೆರೆ: ಶಾಸಕ ಟಿ.ರಘುಮೂರ್ತಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತಾಡಲು ಬಿಜೆಪಿ ಮುಖಂಡರಿಗೆ ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.

    ವೇದಾವತಿ ನದಿಗೆ ನೀರು ಹರಿಸುವ ವಿಚಾರದಲ್ಲಿ ರಘುಮೂರ್ತಿ ಅವರ ಕಾರ್ಯದ ಬಗ್ಗೆ ಬಿಜೆಪಿ ಮುಖಂಡರು ಆರೋಪ ಮಾಡಿರುವುದು ಸರಿಯಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ವೇದಾವತಿ ನದಿಗೆ 0.25 ಟಿಎಂಸಿ ಅಡಿ ನೀರು ಹರಿಸಲು 2015ರಲ್ಲಿ ಆದೇಶ ಪಡೆದುಕೊಂಡಿದ್ದ ರಘುಮೂರ್ತಿ ಇಲ್ಲಿಯ ತನಕ ವಿಳಂಬ ಮಾಡಲು ಕಾರಣ ಏನು ಎಂದು ಬಿಜೆಪಿ ಮುಖಂಡರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖಂಡರು, ಇಲ್ಲಿಯವರೆಗೂ ಸುಮ್ಮನಿರಲು ವಿವಿ ಸಾಗರದಲ್ಲಿ ನೀರಿನ ಕೊರತೆ ಇತ್ತು ಎಂಬುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.

    ಹಿರಿಯೂರು ಜನರೇ ನೀರಿಗೆ ಪರಿತಪಿಸುವ ವೇಳೆ ನಮಗೆ ನೀರು ಕೊಡಿ ಎಂದು ಕೇಳುವುದು ಎಷ್ಟು ಸಮಂಜಸ. ಈ ಕಾರಣಕ್ಕೆ ಐದು ವರ್ಷ ಮೌನ ವಹಿಸಲಾಗಿತ್ತು. ಆದರೆ, ಪ್ರಸ್ತುತ 100 ಅಡಿಗೂ ಅಧಿಕ ನೀರು ಸಂಗ್ರಹವಾಗಿದ್ದರಿಂದ ವೇದಾವತಿ ನದಿಗೆ ನೀರು ಪಡೆಯಲಾಗಿದೆ ಎಂದು ಹೇಳಿದರು.

    ತಾಪಂ ಮಾಜಿ ಸದಸ್ಯ ಸಿ.ಟಿ.ಶ್ರೀನಿವಾಸ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಪ್ರಸನ್ನಕುಮಾರ್ ಮಾತನಾಡಿದರು.

    ಜಿಪಂ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ನಗರಸಭೆ ಸದಸ್ಯ ಕೆ.ವೀರಭದ್ರಯ್ಯ, ಮುಖಂಡರಾದ ಟಿ.ಪ್ರಭುದೇವ್, ಎಸ್.ಎಚ್.ಸೈಯದ್, ಪಿ.ತಿಪ್ಪೇಸ್ವಾಮಿ, ಕಿರಣ್ ಶಂಕರ್, ಖಾದರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts