More

    ಚೈತ್ರಾ ಕುಂದಾಪುರ ಪ್ರಕರಣ; ಬಂಧಿತ ಗಗನ್​ಗೂ ನಮಗೂ ಯಾವುದೇ ಸಂಬಂಧವಿಲ್ಲ: ಸಾಲುಮರದ ತಿಮ್ಮಕ್ಕ

    ಹಾಸನ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಉದ್ಯಮಿಯೊಬ್ಬರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್​ ಕೊಡಿಸುವುದಾಗಿ ಹೇಳಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವ ಗಗನ್​ ಕುಮಾರ್​ಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಸ್ಪಷ್ಟಪಡಿಸಿದ್ದಾರೆ.

    ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು ಮಾಧ್ಯಮಗಳಲ್ಲಿ ನಮ್ಮ ಬಗ್ಗೆ ಏನೇನೋ ಸುದ್ದಿ ಬರ್ತಾ ಇದೆ. ನಾವು ಗಿಡ ನೆಡ್ತಾ ಹೇಗೋ ಜೀವನ ಸಾಗಿಸುತ್ತಿದ್ದೇವೆ. ನಾವು ಸರ್ಕಾರಕ್ಕೆ ಹೆದರಿ ಜೀವನ ನಡೆಸುವವರು. ನಾವು ಇಂತಹ ವಿಚಾರ ಹಾಗೂ ಗಲಾಟೆಗೆ ಹೋಗುವವರಲ್ಲಾ ಇದೆಲ್ಲಾ ನನಗೆ ಏನೂ ಗೊತ್ತಿಲ್ಲಾ ಎಂದು ಹೇಳಿದ್ಧಾರೆ.

    ಯಾವುದೇ ಸಂಬಂಧವಿಲ್ಲ

    ಸಾಲುಮರದ ತಿಮ್ಮಕ್ಕ ಅವರ ದತ್ತು ಪುತ್ರ ಬಳ್ಳೂರು ಉಮೇಶ್​ ಮಾತನಾಡಿ, ನಾವು ಗಗನ್​ ಕಡೂರು ಅವರ ಮದುವೆಗೆ ಹೊಗಿದ್ದು ನಿಜ. ದೇಶದಲ್ಲಿ ತಿಮ್ಮಕ್ಕನವರ ಅಭಿಮಾನಿಗಳು ಕೋಟ್ಯಂತರ ಸಂಖ್ಯೆಯಲ್ಲಿದ್ದಾರೆ. ಅವರು ಬಂದು ಫೋಟೋ ತೆಗೆಸಿಕೊಳ್ಳುತ್ತಾರೆ. ನಾವು ಬೇಡ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಮದುವೆಗೆ ಬಂದು ಕರೆದಿರುತ್ತಾರೆ. ಅದೇ ರೀತಿ ಗಗನ್​ ಮದುವೆಗೆ ಹೋಗಿದ್ದೇವೆ ಅಷ್ಟೇ.

    ಗಗನ್​ ಭಾರತೀಯ ಅಯ್ಯಪ್ಪಸ್ವಾಮಿ ಸೇನಾ ಸಮಿತಿಯ ಸದಸ್ಯ. ನಾನು ಅದರ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ. ಪ್ರತಿಷ್ಠಿತ ಸುದ್ದಿವಾಹಿನಿಯೊಂದು ಗಗನ್​ ಅವರು ತಿಮ್ಮಕ್ಕನವರ ಕಾರನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ವಿಧಾನಸೌಧದಲ್ಲಿರುವ ತಿಮ್ಮಕ್ಕನವರ ಕೊಠಡಿಯನ್ನು ನವೀಕರಣ ಮಾಡಿಕೊಟ್ಟಿರುವ ಸಾಧ್ಯತೆ ಇದೆ ಎಂದು ಪ್ರಸಾರ ಮಾಡಲಾಗಿದೆ. ಆದರೆ, ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಅವರು ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಆದರೆ, ನಮ್ಮ ಹೆಸರನ್ನು ಪ್ರಸ್ತಾಪಿಸಿರುವುದು ತಪ್ಪು.

    Salumarada Thimmakka

    ಇದನ್ನೂ ಓದಿ: ಏಷ್ಯಾಕಪ್​ 2023| ಸಿರಾಜ್​-ಪಾಂಡ್ಯ ದಾಳಿಗೆ ನಲುಗಿದ ಶ್ರೀಲಂಕಾ; 50ರನ್​ಗಳಿಗೆ ಆಲೌಟ್​

    ಮಾನನಷ್ಟ ಮೊಕದ್ದಮೆ ಹೂಡಲಾಗುವುದು

    ತಿಮ್ಮಕ್ಕನವರ ಕೊಠಡಿಯನ್ನು ಸರ್ಕಾರ ನವೀಕರಣ ಮಾಡಿಕೊಡುತ್ತದೆ. ಅದನ್ನು ನವೀಕರಣ ಮಾಡಲು ಗಗನ್​ ಯಾರು. ಒಂದು ವೇಳೆ ಗಗನ್​ ಅವರು ತಿಮ್ಮಕ್ಕನವರ ಕಾರು ದುರ್ಬಳಕೆ ಮಾಡಿಕೊಂಡಿದ್ದರೆ ಅದಕ್ಕೆ ಸಂಬಂಧಸಿದ ದಾಖಲೆಗಳನ್ನು ಕೊಡಿ. ನಾವು ಸಮಾಜಕ್ಕಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಅಷ್ಟೇ ಹೊರತು ದ್ರೋಹ ಬಗೆಯುವ ಕೆಲಸ ಮಾಡುವುದಿಲ್ಲ. ಸಂಕಷ್ಟದ ದಿನಗಳಲ್ಲೇ ನಾವು ತಪ್ಪು ಮಾಡಿಲ್ಲ.

    ಈಗ ಸರ್ಕಾರ ತಿಮ್ಮಕ್ಕನವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಗೌರವಿಸುತ್ತಿದೆ. ಇಡೀ ಸಮಾಜ ನಮ್ಮನ್ನು ಗೌರವಿಸುತ್ತಿದೆ. ಈಗ ನಾವು ತಪ್ಪು ಮಾಡುತ್ತೀವಾ. ಗಗನ್​ ಜೊತೆ ಸಂಬಂಧ ಬೆಸೆದು ಸುದ್ದಿ ಪ್ರಸಾರ ಮಾಡಿರುವ ವಾಹಿನಿಯ ನಿರೂಪಕನ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗುವುದು.

    ತಿಮ್ಮಕ್ಕನವರಿಗೆ ಸರ್ಕಾರ ಸಂಪುಟ ದರ್ಜೆ ಸ್ಥಾನಮಾನ ನೀಡಿರುವುದನ್ನ ಸಹಿಸದ ಕೆಲವರು ನಮ್ಮ ಹೆಸರಿಗೆ ಕಳಂಕ ತರಲು ಈ ರೀತಿ ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಪರಮೇಶ್ವರ್​ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಸಾಲುಮರದ ತಿಮ್ಮಕ್ಕನವರ ದತ್ತು ಪುತ್ರ ಬಳ್ಳೂರು ಉಮೇಶ್​ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts