More

    ಹಿಟ್ ಆ್ಯಂಡ್ ರನ್ ಸೆಕ್ಷನ್ ತಿದ್ದುಪಡಿ ರದ್ದುಪಡಿಸಲು ಆಗ್ರಹ

    ರಾಣೆಬೆನ್ನೂರ: ಲಾರಿ ಚಾಲಕರಿಗೆ ಮತ್ತು ಮಾಲೀಕರಿಗೆ ಕೇಂದ್ರ ಸರ್ಕಾರ ಹೊಸದಾಗಿ ಆದೇಶಿಸಿರುವ ಹಿಟ್ ಆ್ಯಂಡ್ ರನ್ ಪ್ರಕರಣಗಳ ಸೆಕ್ಷನ್ ರದ್ದುಪಡಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಬುಧವಾರ ರಾಣೆಬೆನ್ನೂರ ಗೂಡ್ಸ್ ಶೆಡ್ ಲಾರಿ ಮಾಲಕರ ಸಂಘದ ನೇತೃತ್ವದಲ್ಲಿ ಪ್ರತಿಭಟಿಸಿ ತಹಸೀಲ್ದಾರ್ ಗುರುಬಸವರಾಜ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಇಲ್ಲಿನ ಎಪಿಎಂಸಿ ವಿನಾಯಕ ದೇವಸ್ಥಾನ ಬಳಿಯಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಪೋಸ್ಟ್ ಸರ್ಕಲ್, ಬಸ್ ನಿಲ್ದಾಣ ರಸ್ತೆ, ಹಲಗೇರಿ ಕ್ರಾಸ್, ಕುರುಬಗೇರಿ ಕ್ರಾಸ್ ಮಾರ್ಗವಾಗಿ ತಹಸೀಲ್ದಾರ ಕಚೇರಿ ತಲುಪಿದರು.
    ಈ ಸಮಯದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ ಗುಜ್ಜರ ಮಾತನಾಡಿ, ಲಾರಿ ಚಾಲಕರು ಮತ್ತು ಮಾಲೀಕರು ಸಾರ್ವಜನಿಕರ ಸೇವೆ ಮಾಡುತಿದ್ದೇವೆ. ಆದರೆ, ಕೇಂದ್ರ ಸರ್ಕಾರ ದಿಢೀರನೆ ಜಾರಿಗೆ ತಂದಿರುವ ಹೊಸ ಕಾನೂನು ಪ್ರಕಾರ ಅಪಘಾತವಾದಲ್ಲಿ ಮೃತ ಪಟ್ಟರೆ ಚಾಲಕನಿಗೆ 5ರಿಂದ 10 ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು 7 ಲಕ್ಷ ರೂ. ದಂಡ ತೆರಬೇಕಾಗುತ್ತದೆ. ಹಳೆಯ ಕಾನೂನಿನಡಿ ಇದಕ್ಕೆ 2 ವರ್ಷದವರೆಗೆ ಮಾತ್ರ ಜೈಲುಶಿಕ್ಷೆ ಇತ್ತು. ಹೀಗಾಗಿ ಹೊಸ ಕಾನೂನು ಲಾರಿ ಮಾಲೀಕರು ಮತ್ತು ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ತನ್ನ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
    ಪ್ರಮುಖರಾದ ಸಲೀಂ ಅಹ್ಮದ್, ಮಹಮ್ಮದಲಿ ರಬ್ಬಾನಿ, ಸನಾವುಲ್ಲಾ ಕಂಚರಗಟ್ಟಿ, ಯಾಸಿಂ ಕಿಲ್ಲೆದಾರ, ಹನಿಫ ಹೊನ್ನೂರ, ಅಶಪಾಕ ಚಿನವಾಲ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts