More

    ಸಭೆ, ಸಮಾರಂಭಕ್ಕೆ ಅನುಮತಿ; ಸೆ.7ರಿಂದ ಮೆಟ್ರೋ ಸಂಚಾರ; ಶಾಲಾ-ಕಾಲೇಜು ಬಂದ್​; ಅನ್​ಲಾಕ್​ 4.0 ಮಾರ್ಗಸೂಚಿ

    ನವದೆಹಲಿ: ಕರೊನಾ ಸಂಕಷ್ಟ ತಡೆಗಟ್ಟಲು ವಿಧಿಸಲಾಗಿದ್ದ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಹಂತಹಂತವಾಗಿ ತೆರವು ಗೊಳಿಸುತ್ತಿದೆ. ಅದರಂತೆ ಆಗಸ್ಟ್​ 31ರವರೆಗೆ ಹಲವು ನಿರ್ಬಂಧಗಳನ್ನು ತೆರವುಗೊಳಿಸಿ ಆದೇಶಿಸಿತ್ತು. ಈಗ ಅನ್​ಲಾಕ್​ 4 ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

    ಪ್ರಮುಖವಾಗಿ ಸೆ.7ರಿಂದ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಹಂತಹಂತವಾಗಿ ಮೆಟ್ರೋ ಪ್ರಯಾಣ ಆರಂಭವಾಗಲಿದೆ.

    ಇದನ್ನೂ ಓದಿ; ಪುನರಾರಂಭದವರೆಗೆ ಶಾಲೆಗಳು ವಾರ್ಷಿಕ, ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ; ದೆಹಲಿ ಹೈಕೋರ್ಟ್​ ಮಹತ್ವದ ಆದೇಶ

    ಇನ್ನೊಂದು ಮುಖ್ಯ ಸಂಗತಿ ಎಂದರೆ, ಧಾರ್ಮಿಕ, ರಾಜಕೀಯ ಹಾಗೂ ಇತರ ಸಭೆ- ಸಮಾರಂಭಗಳನ್ನು ಸೆ.21ರಿಂದ ನಡೆಸಬಹುದು. ಆದರೆ, ಇದರಲ್ಲಿ 100 ಜನರಷ್ಟೇ ಭಾಗವಹಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಆದರೆ, ಶಾಲಾ- ಕಾಲೇಜು ಹಾಗೂ ಸ್ವಿಮ್ಮಿಂಗ್​ ಪೂಲ್​, ಒಳಾಂಗಣ ಥಿಯೇಟರ್​ಗಳು ಬಂದ್​ ಇರಲಿವೆ. ಈ ನಿರ್ಬಂಧಗಳು ಸೆಪ್ಟಂಬರ್​ 30ರವರೆಗೆ ಅನ್ವಯಿಸಲಿವೆ.
    ಜತೆಗೆ, ಸಾರ್ವಜನಿಕ ಉದ್ಯಾನಗಳು, ಮನೋರಂಜನಾ ಕೇಂದ್ರಗಳು ಹಾಗೂ ಬೃಹತ್​ ಪ್ರಮಾಣದಲ್ಲಿ ಜನರು ಸೇರುವ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

    ಹಂದಿ ಮಿದುಳಿನಲ್ಲಿ ಕಂಪ್ಯೂಟರ್​ ಚಿಪ್​; ಶೀಘ್ರದಲ್ಲಿ ಮಾನವರಿಗೂ ಅಳವಡಿಕೆ; ಆಸಕ್ತರಿಗಾಗಿ ನಡೆದಿದೆ ಹುಡುಕಾಟ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts