More

    ಲಾಕ್​ಡೌನ್​ನಲ್ಲಿ ಇನ್ನಷ್ಟು ವಿನಾಯಿತಿ ನೀಡಿದ ಕೇಂದ್ರ ಸರ್ಕಾರ; ಆದರೆ ಷರತ್ತುಗಳು ಅನ್ವಯ

    ನವದೆಹಲಿ: ಕರೊನಾ ತಡೆಗಟ್ಟಲು ಕಳೆದ ಒಂದು ತಿಂಗಳಿಂದ ಹೇರಲಾಗಿರುವ ಲಾಕ್​ಡೌನ್​ನಿಂದ ಜನ-ಜೀವನ ಸ್ತಬ್ಧವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತೆ ಕೆಲ ವಿನಾಯಿತಿಗಳನ್ನು ನೀಡುವ ಮೂಲಕ ರಿಲೀಫ್​ ನೀಡಿದೆ. ಮಾಲ್​ ಹಾಗೂ ಥಿಯೇಟರ್​ಗಳನ್ನು ಹೊರತುಪಡಿಸಿ ಅಂಗಡಿ-ಮುಂಗಟ್ಟುಗಳನ್ನು ಕೆಲ ನಿರ್ಬಂಧಗಳೊಂದಿಗೆ ತೆರೆಯಲು ಸರ್ಕಾರದ ಅನುಮತಿಯನ್ನು ನೀಡಿದೆ.

    ಶುಕ್ರವಾರ ರಾತ್ರಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಆದೇಶದ ಪ್ರಕಾರ ಮಾಸ್ಕ್​, ಗ್ಲೋವ್ಸ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು, ಇದನ್ನು ಅನುಸರಿಸುವುದರೊಂದಿಗೆ ಅಂಗಡಿಗಳನ್ನು ತೆರೆಯಬಹುದಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಅಂಗಡಿಯವರಿಗೂ ಹಾಗೂ ಖರೀದಿದಾರರಿಗೂ ಬಿಗ್​ ರಿಲೀಫ್​ ನೀಡಿದೆ.

    ಆದೇಶದ ಪ್ರತಿಯೊಂದಿಗೆ ಟ್ವೀಟ್​ ಮಾಡಿರುವ ಗೃಹ ಸಚಿವಾಲಯದ ವಕ್ತಾರ, ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಅಂಗಡಿಗಳು ಮತ್ತು ಸ್ಥಾಪನೆ ಕಾಯ್ದೆಯಡಿ ನೋಂದಾಯಿತ ಅಂಗಡಿಗಳಿಗೆ ಲಾಕ್​ಡೌನ್​ ರಿಯಾಯಿತಿ ಅನ್ವಯವಾಗಲಿದೆ. ವಸತಿ ಸಂಕೀರ್ಣದಲ್ಲಿರುವ ಅಂಗಡಿಗಳು, ನೆರೆಹೊರೆ ಮತ್ತು ಸ್ವತಂತ್ರ ಅಂಗಡಿಗಳು ಇಂದಿನಿಂದ ಬಾಗಿಲು ತೆರೆಯಬಹುದಾಗಿದೆ. ಆದರೆ, ನಿರ್ಬಂಧಗಳು ಅನ್ವಯವಾಗಲಿದೆ ಎಂದು ಕಟ್ಟುನಿಟ್ಟಾಗಿ ತಿಳಿಸಿದೆ.

    ಮುನ್ಸಿಪಾಲ್​ ಕಾರ್ಪೊರೇಶನ್​ ಮತ್ತು ಮುನ್ಸಿಪಾಲಿಟಿ ಸಮೀಪ ಇರುವ ಮಾರುಕಟ್ಟೆ ಸಂಕೀರ್ಣಗಳು ಕೂಡ ಕಾರ್ಯ ನಿರ್ವಹಿಸಬಹುದಾಗಿದೆ. ಆದರೆ, ಶೇ 50 ರಷ್ಟು ಕಾರ್ಮಿಕರು ಮಾತ್ರ ಕೆಲಸ ಮಾಡಬೇಕು. ಅದರಲ್ಲೂ ಮಾಸ್​​ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದಿದ್ದಾರೆ. ಇನ್ನು ಲಾಕ್​ಡೌನ್​ ಹಾಟ್​ಸ್ಪಾಟ್​ ಮತ್ತು ಕಂಟೈನ್​ಮೆಂಟ್​ ಝೋನ್​ಗಳಲ್ಲಿ ಅನ್ವಯವಾಗುವುದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.

    ದೇಶಾದ್ಯಂತ 23 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಕರೊನಾ ವೈರಸ್​ ಸೋಂಕು ಕಾಣಿಸಿಕೊಂಡಿದ್ದು, 700ಕ್ಕೂ ಹೆಚ್ಚು ಮಂದಿ ಈವರೆಗೂ ಪ್ರಾಣವನ್ನು ಕಳೆದುಕೊಂಡಿದ್ದಾರೆ. (ಏಜೆನ್ಸೀಸ್​)

    ಹೆಚ್ಚುತ್ತಲೇ ಇದೆ ಸಾವು, ವಿಶ್ವಾದ್ಯಂತ 2 ಲಕ್ಷದ ಸನಿಹ ಬಲಿ; ಭಾರತವೇ ಸ್ವಲ್ಪ ಸೇಫ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts