More

    ಲಿಂಗಾಯತರಿಗೆ ಸ್ಥಾನಮಾನ, ಕಾಂಗ್ರೆಸ್​ಗೆ ಕೇಂದ್ರ ಸಚಿವ ನಾರಾಯಣಸ್ವಾಮಿ ಸವಾಲು

    ಬೆಂಗಳೂರು: ವ್ಯವಸ್ಥಿತ ಅಪಪ್ರಚಾರದ ಮೂಲಕ ವೀರಶೈವ-ಲಿಂಗಾಯತರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟಲು ಪ್ರತಿಪಕ್ಷ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇದೇ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ನೀಡಲಿರುವ ಸ್ಥಾನಮಾನ ಏನೆಂಬುದು ಸ್ಪಷ್ಟಪಡಿಸಲಿ ಎಂದು ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಸವಾಲೆಸೆದರು.

    ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಶುಕ್ರವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಬಗ್ಗೆ ಕಾಂಗ್ರೆಸ್ ಆಂತರಿಕ, ಬಹಿರಂಗ ಚರ್ಚೆ ನಡೆಸಿದೆಯೇ ಹೊರತು ವೀರಶೈವ-ಲಿಂಗಾಯತರಿಗೆ ಈ ಹುದ್ದೆ ಕೊಡುವ ಬಗ್ಗೆ ಚರ್ಚಿಸಿಲ್ಲ, ಹೇಳಿಕೆಯನ್ನು ನೀಡಿಲ್ಲವೆಂದು ಕುಟುಕಿದರು.

    ಅಭಿವೃದ್ಧಿ ಕಾರ್ಯಗಳು, ಪಕ್ಷದ ಸಿದ್ಧಾಂತದಡಿ ಬಿಜೆಪಿ ಚುನಾವಣೆ ಎದುರಿಸಲಿದೆಯೇ ಹೊರತು ಜಾತಿ ಆಧಾರಿತವಾಗಿಯಲ್ಲ. ಮತ್ತೊಮ್ಮೆ ಅಧಿಕಾರಕ್ಕೆ ಬಂದ ನಂತರ ಶಾಸಕರು ಹಾಗೂ ವರಿಷ್ಠರು ಸೇರಿ ಮುಂದಿನ ಮುಖ್ಯಮಂತ್ರಿ ಯಾರೆಂದು ನಿರ್ಧರಿಸುತ್ತಾರೆ ಎಂದು ಹೇಳಿದರು.

    ಮೀಸಲು ಮೌನ

    ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಸ್ ಸಿ,‌ ಎಸ್ ಟಿ, ಲಿಂಗಾಯತ, ಒಕ್ಕಲಿಗರಿಗೆ ಮೀಸಲು ಪ್ರಮಾಣ ಹೆಚ್ಚಳ, ಎಸ್ ಸಿಗೆ ಒಳ ಮೀಸಲು ಕಲ್ಪಿಸಲು ಪ್ರಯತ್ನಿಸಲಿಲ್ಲ. ಲಂಬಾಣಿ ಸಮುದಾಯದ ಕುರಿತು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಬರೆದ ಪತ್ರಕ್ಕೆ ಸ್ಪಷ್ಟ ಉತ್ತರವನ್ನು ನೀಡಲಿಲ್ಲ.

    ಪ್ರತಿಪಕ್ಷ ಸ್ಥಾನದಲ್ಲಿದ್ದಾಗ ಇವೇ ಬೇಡಿಕೆಗಳು ಕುರಿತು ತನ್ನ ನಿಲುವು ಸ್ಪಷ್ಟಪಡಿಸದೆ ಮೌನವಹಿಸಿತು. ಬಿಜೆಪಿ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡು ಆದೇಶ ಹೊರಡಿಸಿದ ಮೀಸಲು ರದ್ದುಪಡಿಸುತ್ತೇವೆ ಎಂದು ಚುನಾವಣೆ ಗಿಮಿಕ್ ಮಾಡುತ್ತಿದೆ.

    ಯಾವ ಮೀಸಲು ರದ್ದುಪಡಿಸುತ್ತೇವೆ ಎಂಬುದನ್ನು ರಾಜ್ಯದ ಜನರಿಗೆ ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಬೇಕು. ಎಸ್ ಸಿ, ಎಸ್ ಟಿ, ವೀರಶೈವ-ಲಿಂಗಾಯತರು, ಒಕ್ಕಲಿಗರಿಗೆ ನೀಡಿದ ಮೀಸಲು ರದ್ದುಪಡಿಸುತ್ತೀರೋ ಒಳ ಮೀಸಲು ರದ್ದುಪಡಿಸುವಿರೊ ? ಯಾವುದು ಎಂದು ಸ್ಪಷ್ಟಪಡಿಸಲಿ ಎಂದು ಕಾಂಗ್ರೆಸ್ ಗೆ ಎ.ನಾರಾಯಣಸ್ವಾಮಿ ಸೆಡ್ಡು ಹೊಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts