More

    ಸಿಕಲ್ ಸೆಲ್ ಅನೀಮಿಯಾ ವಿರುದ್ಧ ಮಹತ್ವದ ಹೆಜ್ಜೆ; ತಜ್ಞರ ಅಭಿಪ್ರಾಯ

    ಸಿಕಲ್ ಸೆಲ್ ಅನೀಮಿಯಾ ವಿರುದ್ಧ ಮಹತ್ವದ ಹೆಜ್ಜೆ; ತಜ್ಞರ ಅಭಿಪ್ರಾಯಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಸಾಧಾರಣವಾಗಿದೆ. ಆದರೆ, ಸಿಕಲ್ ಸೆಲ್ ಅನೀಮಿಯಾ ತೊಡೆದುಹಾಕಲು ಕೈಗೊಂಡಿರುವ ನಿರ್ಧಾರ ಮಾತ್ರ ಸಾರ್ವಜನಿಕರ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ದೇಶದಲ್ಲಿ 7 ಕೋಟಿ ಬುಡಕಟ್ಟು ಜನರು ಸಿಕಲ್ ಸೆಲ್ ಅನೀಮಿಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೈದ್ಯಕೀಯ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ 2047ರ ವೇಳೆಗೆ ಈ ಸಮಸ್ಯೆಯನ್ನು ತೊಡೆದುಹಾಕುವ ಯೋಜನೆ ರೂಪಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಬಹುದು. ಇದಲ್ಲದೆ ವೈದ್ಯಕೀಯ ವಲಯ ಹಾಗೂ ಔಷಧೀಯ ವಲಯದಲ್ಲಿ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡಿರುವುದು ಹಾಗೂ ನರ್ಸಿಂಗ್ ಕಾಲೇಜುಗಳ ಸ್ಥಾಪನೆ ಮಾಡುವ ನಿರ್ಧಾರವೂ ಉತ್ತಮವಾಗಿದೆ. ಈ ನಿರ್ಧಾರಗಳಿಂದಾಗಿ ವೈದ್ಯಕೀಯ ವಲಯದಲ್ಲಿ ಅನುಭವಿ ಮಾನವ ಸಂಪನ್ಮೂಲ ದೊರೆಯಲಿದೆ. ಅಲ್ಲದೆ, ವೈದ್ಯಕೀಯ ಚಿಕಿತ್ಸೆ ಹಾಗೂ ಶುಶ್ರೂಷೆಗೆ ಅನುಕೂಲವಾಗಿದೆ. ಆದರೆ, ಒಟ್ಟಾರೆ ಬಜೆಟ್ ಗಮನಿಸಿದರೆ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದಂತೆ ಕಂಡು ಬಂದಿಲ್ಲ. ಅಭಿವೃದ್ದಿ ಹೊಂದಿರುವ ರಾಷ್ಟ್ರಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ಶೇ. 6 ರಿಂದ ಶೇ.8 ಜಿಡಿಪಿ ನೀಡಲಾಗುತ್ತದೆ. ಆದರೆ, ಭಾರತದಲ್ಲಿ ಆರೋಗ್ಯ ವಲಯದ ಜಿಡಿಪಿ ಇನ್ನೂ ಶೇ. 1.8ರಲ್ಲಿದೆ. ಇದು ಕನಿಷ್ಠ ಶೇ.2.5 ರವರೆಗಾದರೂ ಏರಬೇಕಾಗಿದೆ.

    ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿನ ಸಮಸ್ಯೆಗಳು ಹಾಗೂ ಸವಾಲುಗಳು ಏನು ಎಂಬುದು ಅರಿವಿಗೆ ಬಂದಿದೆ. ಹಾಗಾಗಿ ಬೆಂಕಿ ಬಿದ್ದಾಗ ಬಾವಿ ತೋಡುವ ಪ್ರಯತ್ನ ಮಾಡುವ ಬದಲು ಸಮಸ್ಯೆ ತಿಳಿದಿರುವಾಗಲೇ ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದು ಸೂಕ್ತ. ಈ ನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಅಗತ್ಯ ಇದೆ. ಬೇಕಾಗಿರುವಂತಹ ಎಲ್ಲ ಅಗತ್ಯ ವೈದ್ಯಕೀಯ ಉಪಕರಣಗಳನ್ನು ದೇಶದಲ್ಲಿ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಹೊರದೇಶಗಳಿಂದ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ, ವಿದೇಶಗಳಿಂದ ಆಮದು ಮಾಡಿಕೊಳ್ಳುವಂತಹ ವೈದ್ಯಕೀಯ ಉಪಕರಣಗಳಿಗೆ ವಿಧಿಸಲಾಗುತ್ತಿರುವ ಶೇ. 15 ರಿಂದ 30 ಕಸ್ಟಮ್ ಡ್ಯೂಟಿ ಹಾಗೂ ಶೇ.18 ಜಿಎಸ್​ಟಿ ಖಾಸಗಿ ಆಸ್ಪತ್ರೆಗಳಿಗೆ ಸಾಕಷ್ಟು ಹೊರೆಯಾಗುತ್ತಿದೆ. ಆದ್ದರಿಂದ ಕಸ್ಟಮ್ ಡ್ಯೂಟಿ ಹಾಗೂ ಜಿಎಸ್​ಟಿ ಪ್ರಮಾಣವನ್ನು ಕಡಿಮೆ ಮಾಡಬೇಕು ಎನ್ನುವುದು ನಮ್ಮ ಬಹುಕಾಲದ ಬೇಡಿಕೆಯಾಗಿದೆ. ಅನಗತ್ಯವಾಗಿ ಬೀಳುತ್ತಿರುವ ಈ ಹೊರೆಯನ್ನು ಖಾಸಗಿ ಆಸ್ಪತ್ರೆಗಳು ರೋಗಿಗಳ ಮೇಲೆ ವಿಧಿಸಲು ಸಾಧ್ಯವಿಲ್ಲ. ಹಾಗಾಗಿ ಇವುಗಳಿಂದ ವಿನಾಯಿತಿ ನೀಡಬೇಕಿದೆ. ಆದರೆ, ಈ ಮುಂಗಡಪತ್ರದಲ್ಲಿ ಅದೂ ಆದಂತೆ ಕಂಡು ಬಂದಿಲ್ಲ.

    ಮಿತಭಾಷಿ ನಿರ್ಮಲಾ: ಬಜೆಟ್​ ಮಂಡನೆಯಲ್ಲಿ ಕ್ರಮೇಣ ಕಡಿಮೆಯಾದ ಮಾತು; ಯಾವಾಗ ಎಷ್ಟು ಮಾತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts