More

    ಹ್ಯಾಪಿ ಬರ್ಥ್​ಡೇ ತಲೈವಾ … ರಜನಿಕಾಂತ್​ಗೆ ಗಣ್ಯರ ಶುಭಾಶಯಗಳು

    ಮುಂಬೈ: ಬಾಕ್ಸ್​ ಆಫೀಸ್​ ಕಿಂಗ್​ ರಜನಿಕಾಂತ್​ ಅವರು ಇಂದು 70 ವರ್ಷಗಳನ್ನು ಮುಗಿಸಿ, 71ಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿಯ ಹುಟ್ಟುಹಬ್ಬಕ್ಕೆ ರಜನಿಕಾಂತ್​ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

    ಇದನ್ನೂ ಓದಿ: ರಾಮಾಂಜನೇಯ ಅವತಾರದಲ್ಲಿ ದರ್ಶನ್​, ಸುದೀಪ್​; ಕರಣ್ ಕುಂಚದಲ್ಲಿ ಕಮಾಲ್

    ಪ್ರಧಾನಿ ನರೇಂದ್ರ ಮೋದಿ, ಎ.ಆರ್​. ರೆಹಮಾನ್​, ಸುಮಲತಾ ಅಂಬರೀಶ್​, ಸುನೀಲ್​ ಶೆಟ್ಟಿ, ದುಲ್ಕರ್​ ಸಲ್ಮಾನ್​, ಅದಿತಿ ರಾವ್​ ಹೈದರಿ ಸೇರಿದಂತೆ ಹಲವರು ರಜನಿಕಾಂತ್​ ಅವರಿಗೆ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭಕೋರಿದ್ದಾರೆ. ಇನ್ನು ರಜನಿಕಾಂತ್​ ಅವರ ಅಭಿಮಾನಿಗಳು ಕಾಮನ್​ ಡಿಸ್​​ಪ್ಲೇ ಪಿಕ್ಚರ್​ (ಸಿಡಿಪಿ) ಮೂಲಕ ಸೋಷಿಯಲ್​ ಮೀಡಿಯಾ ಮೂಲಕ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇನ್ನು ಎ.ಆರ್​. ರೆಹಮಾನ್​ ಅವರು ಈ ಸಿಡಿಪಿಯನ್ನು ಬಿಡುಗಡೆ ಮಾಡಿದ್ದಾರೆ.

    ಇತ್ತೀಚೆಗಷ್ಟೇ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿಕೊಂಡಿರುವ ರಜನಿಕಾಂತ್​, ಡಿಸೆಂಬರ್​ 31ರಂದು ತಮ್ಮ ಪಕ್ಷದ ಹೆಸರನ್ನು ಅಧಿಕೃತವಾಗಿ ತಿಳಿಸುವುದಾಗಿ ಹೇಳಿದ್ದಾರೆ. ಇನ್ನು ಮುಂದಿನ ವರ್ಷ ಅವರ ಹೊಸ ರಾಜಕೀಯ ಪಕ್ಷ ಅಸ್ತಿತ್ವಕ್ಕೆ ಬರಲಿದ್ದು, 2021ರಲ್ಲಿ ನಡೆಯಲಿರುವ ತಮಿಳು ನಾಡು ವಿಧಾನಸಭೆಯ ಚುನಾವಣೆಗಳಲ್ಲಿ ರಜನಿಕಾಂತ್​ ಅವರ ಪಕ್ಷ ಸ್ಪರ್ಧಿಸುವುದಷ್ಟೇ ಅಲ್ಲ, ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಲಾಗುತ್ತಿದೆ.

    ಇನ್ನು, ‘ಅಣ್ಣಾತ್ತೈ’ ಎಂಬ ಚಿತ್ರದಲ್ಲಿ ರಜನಿಕಾಂತ್​ ಅವರು ಸದ್ಯ ನಟಿಸುತ್ತಿದ್ದು, ಆ ಚಿತ್ರದ ನಂತರ ಅವರು ನಟನೆ ಮುಂದುವರೆಸುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಉದ್ಭವವಾಗಿದೆ. ರಜನಿಕಾಂತ್​ ಅವರ ಪಕ್ಷ ಅಧಿಕಾರಕ್ಕೆ ಬಂದರೆ ಅವರು ಚಿತ್ರರಂಗದಲ್ಲಿ ಮುಂದುವರೆಯುವುದು ಕಷ್ಟವಾಗುತ್ತದೆ. ಆ ನಂತರವೂ ರಜನಿಕಾಂತ್​ ಅವರು ನಟನೆ ಮುಂದುವರೆಸುತ್ತಾರಾ ಅಥವಾ ‘ಅಣ್ಣಾತ್ತೈ’ ಅವರ ಕೊನೆಯ ಚಿತ್ರವಾಗುತ್ತದಾ ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲೂ ಇದೆ.

    ಇದನ್ನೂ ಓದಿ: ‘ಮಾರಿ ಗೋಲ್ಡ್​’ ಚಿತ್ರದ ಚಿತ್ರೀಕರಣ ಮುಗೀತು …

    ಆದರೆ, ರಜನಿಕಾಂತ್​ ಈ ಬಗ್ಗೆ ಯಾವುದೇ ನಿರ್ಧಾರವನ್ನೂ ತೆಗೆದುಕೊಂಡಿಲ್ಲ. ಮೊದಲಿಗೆ ಮುನ್ನ ‘ಅಣ್ಣಾತ್ತೈ’ ಚಿತ್ರವನ್ನು ಅಚ್ಚುಕಟ್ಟಾಗಿ ಮುಗಿಸಿಕೊಡಬೇಕು ಎಂಬುದು ಅವರ ಯೋಚನೆ. ಈ ನಿಟ್ಟಿನಲ್ಲಿ ಅವರು ಹೆಜ್ಜೆ ಇಟ್ಟಿದ್ದು, ಆದಷ್ಟು ಬೇಗ ಚಿತ್ರದಲ್ಲಿನ ತಮ್ಮ ಕೆಲಸಗಳನ್ನು ಮುಗಿಸುವುದಕ್ಕೆ ಮುಂದಾಗಿದ್ದಾರೆ.

    ‘ಯುವರತ್ನ’ ಪ್ರಾರಂಭವಾಗಿ ಎರಡು ವರ್ಷ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts