More

    ‘ಯುವರತ್ನ’ ಪ್ರಾರಂಭವಾಗಿ ಎರಡು ವರ್ಷ…

    ಬೆಂಗಳೂರು: ಪುನೀತ್​ ರಾಜಕುಮಾರ್​ ಅಭಿನಯದ ‘ಯುವರತ್ನ’ ಚಿತ್ರವು ಪ್ರಾರಂಭವಾಗಿ ಇಂದಿಗೆ (ಡಿಸೆಂಬರ್​ 12) ಎರಡು ವರ್ಷಗಳಾಗಿವೆ. ಸರಿಯಾಗಿ ಎರಡು ವರ್ಷಗಳ ಹಿಂದೆ ಅಂದರೆ 2018ರಲ್ಲಿ ಇದೇ ದಿನ ಚಿತ್ರದ ಮುಹೂರ್ತವಾಗಿತ್ತು. ಆಗ ಶುರುವಾದ ಚಿತ್ರ, ಈಗ ಮುಕ್ತಾಯದ ಹಂತಕ್ಕೆ ಬಂದಿದೆ.

    ಇದನ್ನೂ ಓದಿ: ‘ಮಾರಿ ಗೋಲ್ಡ್​’ ಚಿತ್ರದ ಚಿತ್ರೀಕರಣ ಮುಗೀತು …

    ಚಿತ್ರ ಎರಡು ವರ್ಷಗಳ ಹಿಂದೆ ಇದೇ ದಿನ ಪ್ರಾರಂಭವಾಗಿತ್ತು ಎಂದು ನಿರ್ದೇಶಕ ಸಂತೋಷ್​ ಆನಂದರಾಮ್​ ನೆನಪಿಸಿಕೊಂಡಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, ಇದೊಂದು ಅದ್ಭುತ ಜರ್ನಿ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಚಿತ್ರವು ಅದ್ಭುತವಾಗಿ ಮೂಡಿಬಂದಿದ್ದು, ಇಡೀ ಕುಟುಂಬಕ್ಕೆ ರಸದೌತಣವಾಗಲಿದೆ ಎಂದು ಹೇಳಿಕೊಂಡಿದ್ದಾರೆ.

    ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ವರ್ಷ ಏಪ್ರಿಲ್​ 24ರ ಹೊತ್ತಿಗೆ ಡಾ. ರಾಜಕುಮಾರ್​ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಯುವರತ್ನ’ ಚಿತ್ರವು ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರದ ಬಿಡುಗಡೆ ಅನಿರ್ಧಿಷ್ಟವಾಗಿ ಮುಂದಕ್ಕೆ ಹೋಯಿತು.

    ಕಳೆದ ತಿಂಗಳು ಚಿತ್ರದ ಹಾಡುಗಳ ಚಿತ್ರೀಕರಣ ಸಂಪೂರ್ಣವಾಗಿದ್ದು, ಇದೀಗ ಚಿತ್ರವು ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ, ‘ಒಂದೂರಲ್ಲೊಬ್ಬ ರಾಜ ಇದ್ದ …’ ಎಂಬ ಹಾಡಿಗೆ ಪುನೀತ್​ ಧ್ವನಿಯಾಗಿದ್ದಾರೆ. ಮಿಕ್ಕಂತೆ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರದ ಮೊದಲ ಪ್ರಿಂಟ್​ ಹೊರಬರಲಿದೆ. ಇನ್ನು ಚಿತ್ರವನ್ನು ಸೆನ್ಸಾರ್​ ಮಾಡಿಸಿ, ಮುಂದಿನ ಯುಗಾದಿ ವೇಳೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಡಿ. 21ಕ್ಕೆ ಐರಾವನ್ ಚಿತ್ರದ ಟೀಸರ್; ಜೆಕೆ ಸಿನಿಮಾಕ್ಕೆ ಕಿಚ್ಚ ಸುದೀಪ್ ಸಾಥ್​

    ಈ ಚಿತ್ರದಲ್ಲಿ ಪುನೀತ್​ ರಾಜಕುಮಾರ್​ ಜೊತೆಗೆ ಧನಂಜಯ್​, ಸಯೇಷಾ ಸೆಹ್ಗಲ್​, ದಿಗಂತ್​, ಸೋನು ಗೌಡ ಮುಂತಾದವರು ಅಭಿನಯಿಸಿದ್ದು, ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ ಸಂತೋಷ್​ ಆನಂದರಾಮ್​. ಇನ್ನು ವಿಜಯ್​ಕುಮಾರ್​ ಕಿರಗಂದೂರು ಈ ಚಿತ್ರವನ್ನು ತಮ್ಮ ಹೊಂಬಾಳೆ ಫಿಲಂಸ್​ನಡಿ ನಿರ್ಮಾಣ ಮಾಡಿದ್ದಾರೆ.

    ರಾಮಾಂಜನೇಯ ಅವತಾರದಲ್ಲಿ ದರ್ಶನ್​, ಸುದೀಪ್​; ಕರಣ್ ಕುಂಚದಲ್ಲಿ ಕಮಾಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts