More

    ‘ಪವರ್ ಆಫ್​ ಯೂಥ್​’ ಲಿರಿಕಲ್​ ವೀಡಿಯೋ ಬಿಡುಗಡೆ …

    ಬೆಂಗಳೂರು: ಪುನೀತ್​ ರಾಜಕುಮಾರ್​ ಅಭಿನಯದ ‘ಯುವರತ್ನ’ ಚಿತ್ರತಂಡದಿಂದ ಏನಾದರೂ ಬಿಡುಗಡೆಯಾಗಿ ಬಹಳ ಸಮಯವೇ ಆಗಿತ್ತು. ಇದೀಗ ‘ಪವರ್​ ಆಫ್​ ಯೂಥ್​’ ಎಂಬ ಹಾಡಿನ ಲಿರಿಕಲ್​ ವೀಡಿಯೋ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಸಾರಾ ಮೇಲೆ ಕೂಗಾಡಿದ್ದೇಕೆ ಹಿರಿಯ ನಿರ್ದೇಶಕ ಡೇವಿಡ್​ ಧವನ್​?

    ‘ಪವರ್​ ಆಫ್​ ಯೂಥ್​’ ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದು ಸಾರುವ ಹಾಡಾಗಿದ್ದು, ಇದನ್ನು ನಕಾಶ್​ ಅಜೀಜ್​ ಹಾಡಿದರೆ, ಎಸ್​.ಎಸ್. ಥಮನ್​ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದ್ದು, ಯೂಟ್ಯೂಬ್​ನ ಹೊಂಬಾಳೆ ಮ್ಯೂಸಿಕ್​ ಚಾನಲ್​ನಡಿ ಬಿಡುಗಡೆಯಾಗಿದೆ.

    ‘ಯುವರತ್ನ’ ಚಿತ್ರದ ಚಿತ್ರೀಕರಣವೂ ಈಗಾಗಲೇ ಮುಕ್ತಾಯವಾಗಿದ್ದು, ಸದ್ಯ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗಿವೆ. ಚಿತ್ರವು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರವು ಈ ವರ್ಷ ಡಾ. ರಾಜಕುಮಾರ್​ ಅವರ ಹುಟ್ಟುಹಬ್ಬದ ಸಂದರ್ಭದಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ ಚಿತ್ರವು ತಡವಾಗಿದ್ದು, ಒಂದು ವರ್ಷ ತಡವಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಇದನ್ನೂ ಓದಿ: ‘ಕೆಜಿಎಫ್ ಚಾಪ್ಟರ್ 2’ ಟೀಸರ್​ ಬಿಡುಗಡೆಗೆ ನಿಗದಿಯಾಯ್ತು ದಿನಾಂಕ!!

    ಈ ಚಿತ್ರದಲ್ಲಿ ಪುನೀತ್​ ರಾಜಕುಮಾರ್​ ಜೊತೆಗೆ ಧನಂಜಯ್​, ಸಯೇಷಾ ಸೆಹ್ಗಲ್​, ದಿಗಂತ್​, ಸೋನು ಗೌಡ ಮುಂತಾದವರು ಅಭಿನಯಿಸಿದ್ದು, ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ ಸಂತೋಷ್​ ಆನಂದರಾಮ್​. ಇನ್ನು ವಿಜಯ್​ಕುಮಾರ್​ ಕಿರಗಂದೂರು ಈ ಚಿತ್ರವನ್ನು ತಮ್ಮ ಹೊಂಬಾಳೆ ಫಿಲಂಸ್​ನಡಿ ನಿರ್ಮಾಣ ಮಾಡಿದ್ದಾರೆ.

    ಪ್ರಭಾಸ್​ ‘ಸಲಾರ್’ ಸಿನಿಮಾಕ್ಕೆ ಪ್ರಶಾಂತ್​ ನೀಲ್​ ಆ್ಯಕ್ಷನ್​ ಕಟ್; ಹೊಂಬಾಳೆ ಫಿಲಂಸ್ ನಿರ್ಮಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts