More

    ಇಡೀ ದೇಶದ ಅಶ್ರುತರ್ಪಣದ ನಡುವೆ ಜನರಲ್​ ಬಿಪಿನ್​ ರಾವತ್​ ಅಂತ್ಯಕ್ರಿಯೆ

    ನವದೆಹಲಿ: ಭಾರತದ ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್​ ಬಿಪಿನ್​ ರಾವತ್​ ಅವರ ಅಂತ್ಯಸಂಸ್ಕಾರವು ಶುಕ್ರವಾರ ಸಂಜೆಯ ವೇಳೆಗೆ ದೆಹಲಿ ಕಂಟೋನ್​ಮೆಂಟಿನಲ್ಲಿರುವ ಬ್ರಾರ್​ ಸ್ಕ್ವೇರ್​ ಕ್ರೆಮೆಟೋರಿಯಂನಲ್ಲಿ ನಡೆಯಿತು. ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟ ಜನರಲ್​ ರಾವತ್​ ಮತ್ತು ಅವರ ಪತ್ನಿ ಮಧುಲಿಕಾ ರಾವತ್​ ಅವರ ಅಂತ್ಯಕ್ರಿಯೆಯನ್ನು ಒಂದೇ ಜಾಗದಲ್ಲಿ ನೆರವೇರಿಸಲಾಯಿತು. ಅವರ ಚಿತೆಗೆ ಪುತ್ರಿಯರಾದ ಕ್ರಿತಿಕಾ ಮತ್ತು ತಾರಿಣಿ ಅಗ್ನಿಶಾಸ್ತ್ರ ಮಾಡಿದರು.

    ಇಡೀ ದೇಶವೇ ಶೋಕದಲ್ಲಿ ಮುಳುಗಿ ಚೀಫ್​ ಆಫ್​ ಡಿಫೆನ್ಸ್​ ಸ್ಟಾಫ್​(ಸಿಡಿಎಸ್​) ಜನರಲ್​ ಬಿಪಿನ್​ ರಾವತ್​​ ಅವರಿಗೆ ಅಂತಿಮ ವಿದಾಯ ಸೂಚಿಸಿದೆ. ಇಂದು ಮಧ್ಯಾಹ್ನ ಅವರ ನಿವಾಸದಿಂದ ರಾವತ್​​ ದಂಪತಿಗಳ ಪಾರ್ಥಿವ ಶರೀರಗಳನ್ನು ಸಕಲ ಸರ್ಕಾರಿ ಗೌರವದೊಂದಿಗೆ, ಮೆರವಣಿಗೆಯಲ್ಲಿ ಬ್ರಾರ್​ ಸ್ಕ್ವೇರ್​​ ಸ್ಮಶಾನಕ್ಕೆ ತರಲಾಯಿತು. ಅಂತ್ಯಕ್ರಿಯೆಯ ಸಮಯಕ್ಕೆ ದೇಶದ ವೀರ ಸೇನಾನಿ ಜ.ರಾವತ್​ಗೆ​ ಸೇನೆಯ ಪರವಾಗಿ 17 ತೋಪುಗಳ ಸಲ್ಯೂಟ್​​(ಕುಶಾಲತೋಪು) ನೀಡಿ ಗೌರವ ಅರ್ಪಿಸಲಾಯಿತು.

    ದಿವಂಗತ ರಾವತ್​ ಅವರ ಚಿತಾಭಸ್ಮವನ್ನು ಅವರ ಕುಟುಂಬಸ್ಥರು ಶನಿವಾರದಂದು ಹರಿದ್ವಾರಕ್ಕೆ ತೆಗೆದುಕೊಂಡು ಹೋಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಶಾಲೆಯಲ್ಲಿ ಮೊಟ್ಟೆ ಕೊಡುವುದಕ್ಕೆ ವಿರೋಧ: ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದೇನು?

    ಓ ವಿಧಿಯೇ ನೀನೆಷ್ಟು ಕ್ರೂರಿ… ಶವಪೆಟ್ಟಿಗೆಗೆ ಮುತ್ತಿಟ್ಟು ಕಣ್ಣೀರಿಟ್ಟ ಬ್ರಿಗೇಡಿಯರ್​ ಲಿಡ್ಡರ್​ ಪತ್ನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts