More

    ಬಿಪಿನ್​ ರಾವತ್​ ಪ್ರಯಾಣಿಸುತ್ತಿದ್ದ ಕಾಪ್ಟರ್​ Mi-17V5 ಗೆ ಉಂಟು ವಿಶಿಷ್ಟ ಹಿನ್ನೆಲೆ: ಆದರೂ ಹೆಲಿಕಾಪ್ಟರ್​ ಪತನ ಆಗಿದ್ದೇಕೆ?

    ದೆಹಲಿ: ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್​ ರಾವತ್​ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್​ ತಮಿಳುನಾಡಿನ ಕನೂಲ್​ ಬಳಿ ಪತನಗೊಂಡು, ಸಿಡಿಎಸ್​ ಬಿಪಿನ್​ ರಾವತ್​ ದಂಪತಿ ಸೇರಿ 13 ಮಂದಿ ಮೃತಪಟ್ಟ ಆಘಾತಕಾರಿ ಸುದ್ದಿ ದೇಶಕ್ಕೆ ಬರಸಿಡಿಲಿನಂತೆ ಬಂದೆರಗಿದೆ. ಭೂಸೇನೆ, ವಾಯು ಸೇನೆ, ನೌಕಾ ಸೇನೆ ಸೇರಿ ಮೂರೂ ಸೇನಾಪಡೆಗಳ ದಂಡನಾಯಕ ಬಿಪಿನ್​ ರಾವತ್​ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​(Mi-17V-5) ಸಾಮಾನ್ಯವಾದದ್ದಲ್ಲ. ಎಲ್ಲ ರೀತಿಯ ಪ್ರತಿಕೂಲ ಹವಾಮಾನದಲ್ಲೂ, ಹಗಲು-ರಾತ್ರಿಯಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲ ವಿಮಾನವೇ ಆಗಿತ್ತು. ಆದರೂ ಪತನಗೊಂಡಿದ್ದೇಕೆ? ಎಂಬುದಕ್ಕೆ ತನಿಖೆ ಬಳಿಕವೇ ಸ್ಪಷ್ಟತೆ ಸಿಗಲಿದೆ. ಈ ವೇಳೆ ಅಪಘಾತಕ್ಕೀಡಾದ ಹೆಲಿಕಾಪ್ಟರ್​ನ ಹಿನ್ನೆಲೆ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

    Mi-17V-5 ಹೆಲಿಕಾಪ್ಟರ್​ ರಷ್ಯಾ ದೇಶದ ಸಂಸ್ಥೆಯೊಂದು ತಯಾರಿಸಿದ ಮಿಲಿಟರಿ ಸಾರಿಗೆ ಹೆಲಿಕಾಪ್ಟರ್. ಇದನ್ನು ಅತ್ಯಾಧುನಿಕ ಮಿಲಿಟರಿ ಸಾರಿಗೆಗಳಲ್ಲಿ ಒಂದು. ಸಿಬ್ಬಂದಿ, ಸರಕು ಮತ್ತು ಉಪಕರಣಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಹೆಲಿಕಾಪ್ಟರ್​ನ ಗರಿಷ್ಠ ವೇಗ ಗಂಟೆಗೆ 250 ಕಿಮೀ. ಗರಿಷ್ಠ 6,000 ಮೀಟರ್​ ಎತ್ತರದಲ್ಲಿ ಹಾರಬಲ್ಲದು. ಉಷ್ಣವಲಯ, ಸಾಗರವಲಯ, ಮರುಭೂಮಿ, ಪರ್ವತ ವಲಯ ಸೇರಿದಂತೆ ಎಲ್ಲ ಪ್ರತಿಕೂಲ ವಾತಾವರಣದಲ್ಲೂ, ಭಾರೀ ರಕ್ಷಾಕವಚ ರಕ್ಷಣೆಯೊಂದಿಗೆ ಹಗಲು-ರಾತ್ರಿ ಕಾರ್ಯನಿರ್ವಹಿಸಬಲ್ಲದು.

    ಬಿಪಿನ್​ ರಾವತ್​ ಪ್ರಯಾಣಿಸುತ್ತಿದ್ದ ಕಾಪ್ಟರ್​ Mi-17V5 ಗೆ ಉಂಟು ವಿಶಿಷ್ಟ ಹಿನ್ನೆಲೆ: ಆದರೂ ಹೆಲಿಕಾಪ್ಟರ್​ ಪತನ ಆಗಿದ್ದೇಕೆ?
    ಬಿಪಿನ್​ ರಾವತ್​ ದಂಪತಿ

    2008ರ ಡಿಸೆಂಬರ್​ನಲ್ಲಿ ರಷ್ಯಾದ ಹೆಲಿಕಾಪ್ಟರ್​ ತಯಾರಿಕಾ ಸಂಸ್ಥೆ ರೋಸೊಬೊರಾನ್​ ಎಕ್ಸ್​ಪೋರ್ಟ್(Rosoboronexport)​ ಜತೆ ಒಟ್ಟು 80 Mi-17V-5 ಹೆಲಿಕಾಪ್ಟರ್​ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ರಷ್ಯಾದ ಅಂಗಸಂಸ್ಥೆಯಾದ ಕಜನ್ ಹೆಲಿಕಾಪ್ಟರ್​ಗಳನ್ನು ತಯಾರಿಸಿ ಕೊಟ್ಟಿದೆ. ಇದು 2013ರಲ್ಲಿ ಪೂರ್ಣಗೊಂಡಿತ್ತು. ಹೆಲಿಕಾಪ್ಟರ್​ನಲ್ಲಿ ಭಾರೀ ಶಸ್ತ್ರಸಜ್ಜಿತ ಕಾಕ್​ಪಿಟ್​ ಮತ್ತು ಶಾಖವನ್ನು ಹುಡುಕುವ ಕ್ಷಿಪಣಿಗಳ ವಿರುದ್ಧ ಆತ್ಮರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. Mi-17V-5 ಹೆಲಿಕಾಪ್ಟರ್​ನ ಗರಿಷ್ಠ ಟೇಕ್​-ಆಫ್​ ತೂಕ 13,000 ಕೆಜಿ. 36 ಸಶಸ್ತ್ರ ಸೈನಿಕರನ್ನು ಸಾಗಿರುವ ಸಾಮಾರ್ಥ್ಯ ಇದಕ್ಕಿದೆ. ಇದು ಮಾರ್ಗದರ್ಶನವಿಲ್ಲದ ರಾಕೆಟ್​, ಫಿರಂಗಿಗಳು ಮತ್ತು ಸಣ್ಣ ಶಸ್ತ್ರಾಸ್ತ್ರಗಳನ್ನು ಸಾಗಿಸಬಲ್ಲದು. ಆನ್​ಬೋರ್ಡ್​ನಲ್ಲಿರುವ ಶಸ್ತ್ರಾಸ್ತ್ರವು ಶತ್ರು ಸಿಬ್ಬಂದಿ, ಶಸ್ತ್ರಸಜ್ಜಿತ ವಾಹನ, ಭೂ ಆಧಾರಿತ ಗುರಿಗಳನ್ನು ತೆಗೆದುಕೊಳ್ಳಲು ಅನುಮತಿಸುತ್ತದೆ. ಈ ಹೆಲಿಕಾಪ್ಟರ್​ಗಳಿಗೆ ಸ್ಟಾರ್​ಬೋರ್ಡ್​ ಸ್ಲೈಡಿಂಗ್​ ಡೋರ್​, ಪ್ಯಾರಾಚೂಟ್​ ಉಪಕರಣಗಳು, ಸರ್ಚ್​ಲೈಟ್​ ಮತ್ತು ತುರ್ತು ಫ್ಲೋಟೇಶನ್​ ವ್ಯವಸ್ಥೆಯೂ ಇದೆ.

    ಬಿಪಿನ್​ ರಾವತ್​ ಪ್ರಯಾಣಿಸುತ್ತಿದ್ದ ಕಾಪ್ಟರ್​ Mi-17V5 ಗೆ ಉಂಟು ವಿಶಿಷ್ಟ ಹಿನ್ನೆಲೆ: ಆದರೂ ಹೆಲಿಕಾಪ್ಟರ್​ ಪತನ ಆಗಿದ್ದೇಕೆ?

    ವಿಐಪಿಗಳು ಪ್ರಯಾಣಿಸುವ ಹೆಲಿಕಾಪ್ಟರ್​​ ಮೇಲೆ ಭದ್ರತೆ ದೃಷ್ಟಿಯಿಂದ ಹದ್ದಿನ ಕಣ್ಣಿಟ್ಟಿರಲಾಗುತ್ತೆ. ದಟ್ಟ ಮಂಜು ಆವರಿಸಿದ್ದರೂ ಮೊದಲೇ ಪರಿಶೀಲನೆ ನಡೆಸಿರಲಾಗುತ್ತೆ. ಪ್ರತಿಕೂಲ ಹವಮಾನ ಇದ್ದಾಗ ಹೆಲಿಕಾಪ್ಟರ್​ ಹೋಗೋಕೆ ಅವಕಾಶ ಕೊಡುವ ಸಾಧ್ಯತೆ ಕಡಿಮೆ. ಹಾರಟಕ್ಕೂ ಮುನ್ನವೇ ಏರ್​ಪೋರ್ಟ್​ ಇಂಜಿನಿಯರ್​ಗಳು ಹೆಲಿಕಾಪ್ಟರ್​ ಅನ್ನು ಪರಿಶೀಲನೆ ನಡೆಸಿರುತ್ತಾರೆ. ಆದರೂ ಹೆಲಿಕಾಪ್ಟರ್​ ಏಕಾಏಕಿ ಪತನ ಆಗಿದ್ದೇಕೆ? ತಾಂತ್ರಿಕ ದೋಷ ಏನಾದರೂ ಸಂಭವಿಸಿತ್ತೇ? ಪೈಲಟ್​ನ ನಿರ್ಲಕ್ಷವೇ? ದಟ್ಟಮಂಜು ಆವರಿಸಿತ್ತೇ? ಎಂಬುದಕ್ಕೆಲ್ಲ ತನಿಖೆ ಬಳಿಕವಷ್ಟೇ ಉತ್ತರ ಸಿಗಬೇಕಿದೆ.

    ಹೆಲಿಕಾಪ್ಟರ್​ ಪತನ: ಫಲಿಸಲಿಲ್ಲ ಭಾರತೀಯರ ಪ್ರಾರ್ಥನೆ, ಭಾರತೀಯ ಸೇನಾಪಡೆಯ ಮುಖ್ಯಸ್ಥ ಬಿಪಿನ್​ ರಾವತ್​ ವಿಧಿವಶ

    ಮಂಗಳೂರಲ್ಲಿ ಮತಾಂತರ ಕಿರುಕುಳಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ! ಡೆತ್​ನೋಟ್​ನಲ್ಲಿ ಕಣ್ಣೀರ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts