More

    ಬೆಂಗಳೂರಿನ ಲಾಡ್ಜ್​​​​​ನಲ್ಲಿ ಸೀಕ್ರೆಟ್​​ ರೂಂ! ಪೊಲೀಸರ ದಾಳಿ ಸಂದರ್ಭದಲ್ಲಿ ಬಯಲಾದ ರಹಸ್ಯ!

    ಬೆಂಗಳೂರು: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕಾಟನ್ ಪೇಟೆಯ ಲಾಡ್ಜ್​​​​ ಮೇಲೆ ಸಿಸಿಬಿ ರೇಡ್​​ ನಡೆದಿದೆ. ಈ ಹಿಂದೆ ಕೂಡ ದುರ್ಗಾ ಪ್ಯಾಲೆಸ್​​​ ಲಾಡ್ಜ್​​​ ಮೇಲೆ ಸಿಸಿಬಿ ರೇಡ್​ ನಡೆದಿತ್ತು. ಆಗೆಲ್ಲಾ ಪೊಲೀಸರು ಬರಿಗೈಲಿ ವಾಪಸ್ಸಾಗಿದ್ದರು. ಇದಕ್ಕೆ ಕಾರಣ… ಈ ಸೀಕ್ರೆಟ್​​ ರೂಂ..!

    ಸಿಸಿಬಿ ಪೊಲೀಸರು ದಾಳಿ ಮಾಡುತ್ತಾರೆ ಎಂಬ ವಾಸನೆ ಬಡಿದಾಕ್ಷಣ ದಂಧೆಕೋರರು ಹುಡುಗಿಯರನ್ನು ಈ ಸೀಕ್ರೆಟ್​​​ ರೂಂ ಒಳಗೆ ಕಳಿಸಿಬಿಡುತ್ತಿದ್ದರು. ರೂಮಿನಲ್ಲಿ ಯಾರೂ ಇಲ್ಲ ಎಂದು ಪೊಲೀಸರು ವಾಪಸ್​​ ಹೋದ ಮೇಲೆ, ಮತ್ತೆ ದಂಧೆ ಮುಂದುವರೆಸುತ್ತಿದ್ದರು.

    ಆದರೆ ಈ ಬಾರಿ ದಂಧೆಕೋರರ ಅದೃಷ್ಟ ನೆಟ್ಟಗೆ ಇರಲಿಲ್ಲ. ಹಾಗಾಗಿ ಬಯಲಾಗಿಬಿಟ್ಟಿತು ಸೀಕ್ರೆಟ್​ ರೂಂ ರಹಸ್ಯ. ಹುಡುಗಿಯರನ್ನು ಸೀಕ್ರೆಟ್ ರೂಮಿನಲ್ಲಿಟ್ಟಿದ್ದ ಆರೋಪಿಗಳನ್ನೂ ಬಂಧಿಸಲಾಗಿದೆ. ಉಸಿರಾಡೋದಕ್ಕೂ ಸಾಧ್ಯವಾಗದ ರೂಮ್‌ನಲ್ಲಿ ಹುಡುಗಿಯರನ್ನು ಕೂಡಿಹಾಕುತ್ತಿದ್ದ ವಿಷಯವೂ ಬಯಲಾಗಿದೆ. 6 ಆರೋಪಿಗಳನ್ನು ಬಂಧಿಸಿ, 7 ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ. ಸಿಸಿಬಿ ತನಿಖೆ ಮುಂದುವರೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts