More

    ಟಾಕಿಂಗ್ ಟಾಮ್ ಒಳಗೆ ಡ್ರಗ್ಸ್​​ ಇಟ್ಟು ಸರಬರಾಜು!

    ಬೆಂಗಳೂರು: ಬರಬರುತ್ತಾ ಡ್ರಗ್ಸ್​​ ಜಾಲ, ಅದರ ಸಾಗಾಣಿಕೆ ಹೊಸ ಹೊಸ ದಾರಿಗಳನ್ನು ಹುಡುಕಿಕೊಳ್ಳುತ್ತಿವೆ. ಪೊಲೀಸ್​​ ಮತ್ತು ಎನ್​​ಸಿಬಿ (Narcotics Control Bureau) ತನಿಖಾ ತಂಡಗಳ ಕಣ್ಣು ತಪ್ಪಿಸಲು, ಡ್ರಗ್ಸ್​​​ ದಂಧೆಕೋರರು ರಹಸ್ಯ ಕಳ್ಳ ದಾರಿಗಳನ್ನು ಕಂಡುಕೊಂಡು, ಆ ಮೂಲಕ ಡ್ರಗ್ಸ್​​​ ಸಾಗಾಣಿಕೆಯನ್ನು ಮಾಡುತ್ತಿದ್ದಾರೆ.

    ಇಂಥದ್ದೇ ಒಂದು ಹೊಸ ಡ್ರಗ್ಸ್​​​ ಸಾಗಾಣಿಕೆಯ ಪ್ಲ್ಯಾನ್ ಅಂದರೆ, ಅದು ಕೊರಿಯರ್! ಕೊರಿಯರ್​​ನಲ್ಲಿ ಟಾಕಿಂಗ್ ಟಾಮ್ ಇಟ್ಟು, ಅದರೊಳಗೆ ಡ್ರಗ್ಸ್ ಇಡಲಾಗುತ್ತಿತ್ತು. ನಂತರ ಅದನ್ನು ಸರಬರಾಜು ಮಾಡಲಾಗುತ್ತಿತ್ತು. ಎಂಡಿಎಂಎ (MDMA- Methyl​enedioxy​methamphetamine) ಡ್ರಗ್ಸ್ ಎರಡು ವಿಧದಲ್ಲಿರುತ್ತದೆ. ಟ್ಯಾಬ್ಲೆಟ್​ ಫಾರ್ಮ್​​​​ ಅಥವಾ ಕ್ರಿಸ್ಟಲ್​​ ರೂಪದಲ್ಲಿರುತ್ತದೆ.

    ಸದ್ಯಕ್ಕೆ ಈ ರೀತಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರನ್ನು ವೈಟ್​​ಫೀಲ್ಡ್​​​ ಪೊಲೀಸರು ಬಂಧಿಸಿದ್ದಾರೆ. 15 ಲಕ್ಷ ರೂ. ಮೌಲ್ಯದ, 138 ಗ್ರಾಂ ಎಂಡಿಎಂಎ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಮಾರಾಟ ಮಾಡುತ್ತಿದ್ದ ಪವೀಶ್, ಅಭಿಜಿತ್, ಶರ್ಫುದ್ದೀನ್ ಬಂಧಿತ ಆರೋಪಿಗಳಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts