More

    ಚೋಕ್ಸಿಯನ್ನು ಕರೆತರಲು ಡೊಮಿನಿಕಾದಲ್ಲಿ ಸಿಬಿಐ ತಂಡ ಸನ್ನದ್ಧ

    ನವದೆಹಲಿ : ಪಂಜಾಬ್​ ನ್ಯಾಷನಲ್ ಬ್ಯಾಂಕ್​ ವಂಚನೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಅವರನ್ನು ಡೊಮಿನಿಕಾ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದ ಪಕ್ಷದಲ್ಲಿ ಅವರನ್ನು ಕೂಡಲೇ ವಾಪಸ್​ ಕರೆತರಲು ಸಿಬಿಐ ತಂಡ ಸಿದ್ಧವಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿರುವ ಶಾರದಾ ರೌತ್​ ನೇತೃತ್ವದಲ್ಲಿ 6 ಸಿಬಿಐ ಅಧಿಕಾರಿಗಳು ಈಗಾಗಲೇ ಡೊಬಿನಿಕಾದಲ್ಲಿದ್ದಾರೆ.

    ಡೊಮಿನಿಕನ್ ಕೋರ್ಟ್​ ಹಸ್ತಾಂತರದ ಆದೇಶ ಹೊರಡಿಸಿದರೆ, ಚೋಕ್ಸಿಯನ್ನು ಖಾಸಗಿ ಜೆಟ್​ನಲ್ಲಿ, ಈ ಸಿಬಿಐ ತಂಡ ಭಾರತಕ್ಕೆ ಕರೆತರಲಿದೆ. ಭಾರತದಲ್ಲಿ ವಿಮಾನ ಇಳಿದ ಕೂಡಲೇ ಶಾರದಾ ರೌತ್​ ಅವರು, ಚೋಕ್ಸಿ ಅವರನ್ನು ಬಂಧನಕ್ಕೆ ಒಳಪಡಿಸಲಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ವೈದ್ಯರ ಮೇಲಿನ ಹಿಂಸಾಚಾರ ತಡೆಯಲು ಕಾನೂನು ತನ್ನಿ : ಐಎಂಎ

    ಚೋಕ್ಸಿಯ ಹಸ್ತಾಂತರದ ಬಗ್ಗೆ ಡೊಮಿನಿಕಾದ ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ಆತ ಭಾರತದ ನಾಗರೀಕನಾಗಿರುವ ಬಗ್ಗೆ, ಕ್ರಿಮಿನಲ್​ ಚಟುವಟಿಕೆಗಳಲ್ಲಿ ತೊಡಗಿದ್ದ ಬಗ್ಗೆ ಮತ್ತು 2018 ರ ಜನವರಿಯಿಂದ ಪರಾರಿಯಾಗಿರುವ ಬಗ್ಗೆ ಇಡಿ ಮತ್ತು ಸಿಬಿಐ ಪರವಾಗಿ ಡೊಮಿನಿಕಾದ ಸರ್ಕಾರಿ ವಕೀಲರು ವಾದ ಮಾಡಲಿದ್ದಾರೆ ಎನ್ನಲಾಗಿದೆ. (ಏಜೆನ್ಸಿಸ್)

    VIDEO | ಕರೊನಾ ರೋಗಿ ಸತ್ತಿದ್ದಕ್ಕೆ ವೈದ್ಯನನ್ನು ಹಿಗ್ಗಾಮುಗ್ಗಾ ಥಳಿಸಿದರು! ಹಲ್ಲೆ ಮಾಡಿದ 24 ಜನರು ಜೈಲಿಗೆ

    ಹೆಂಡತಿ ವಿರುದ್ಧ ಕೌಟುಂಬಿಕ ಹಿಂಸಾಚಾರ ಕಾನೂನು ಇಲ್ಲದ್ದು ದುರದೃಷ್ಟ : ಮದ್ರಾಸ್​ ಹೈಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts