More

    ಬೆಕ್ಕಿಗೂ ಬಂತೂ ಕಿಲ್ಲರ್​ ಕರೊನಾ!

    ಬ್ರುಸ್ಸೆಲ್ಸ್​: ಬೆಲ್ಜಿಯಂ ರಾಜಧಾನಿ ಬ್ರುಸ್ಸೆಲ್ಸ್​ನಲ್ಲಿರುವ ಸಾಕು ಬೆಕ್ಕೊಂದಕ್ಕೆ ಕರೊನಾ ವೈರಸ್ ಪಾಸಿಟಿವ್​ ಫಲಿತಾಂಶ​ ಬಂದಿರುವುದಾಗಿ ವರದಿಯಾಗಿದೆ.

    ಲಿಯಾಜ್​ ಹೆಸರಿನ ಸಾಕು ಬೆಕ್ಕಿನಲ್ಲಿ ಕರೊನಾ ಸೋಂಕಿತರ ರೋಗ ಲಕ್ಷಣಗಳು ಕಂಡುಬಂದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬೆಕ್ಕಿನ ಮಾಲೀಕನ ಮೂಲಕ ಸೋಂಕು ತಗುಲಿರಬಹುದೆಂಬ ಅಧಿಕಾರಿಗಳು ನಂಬಿದ್ದಾರೆ. ಮಾಲೀಕನಿಗೆ ಒಂದು ವಾರದ ಮುಂಚೆಯೇ ಕರೊನಾ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು.

    ಬೆಕ್ಕಿಗೆ ಉಸಿರಾಟದ ತೊಂದರೆ, ವಾಂತಿ ಮತ್ತು ಅತಿಸಾರದಂತ ರೋಗ ಲಕ್ಷಣಗಳು ಇವೆ ಎಂದು ಬ್ರುಸ್ಸೆಲ್ಸ್​ನ ಘೆಂಟ್ ವಿಶ್ವವಿದ್ಯಾಲಯದ ಪಶುವೈದ್ಯಕೀಯ ಔಷಧ ವಿಭಾಗದ ಡಾಕ್ಟರಲ್ ಸಂಶೋಧಕ ಪ್ರೊಫೆಸರ್ ಸ್ಟೀವನ್ ವ್ಯಾನ್ ಗುಚ್ಟ್ ತಿಳಿಸಿದ್ದಾರೆ.

    ಬೆಕ್ಕಿನ ಮಲವನ್ನು ಪರೀಕ್ಷಿಸಿದಾಗ ವೈರಸ್​ ಪತ್ತೆಯಾಗಿದೆ. ಸದ್ಯದ ಬೆಕ್ಕಿ ಪರಿಸ್ಥಿತಿ ತಿಳಿದುಬಂದಿಲ್ಲ. ಪ್ರತ್ಯೇಕ ಪ್ರಕರಣದ ಬಗ್ಗೆ ತಿಳಿಸಿರುವ ವ್ಯಾನ್ ಗುಚ್ಟ್ ಪ್ರಾಣಿಗಳಿಂದ ಮಾನವರಿಗೆ ಹರಡುವ ಸೋಂಕಿನ ತೊಂದರೆ ಪ್ರಮಾಣ ಕಡಿಮೆಯಾಗಿರುತ್ತದೆ ಎಂದಿದ್ದಾರೆ.

    ಇತರೆ ಬೆಕ್ಕುಗಳಲ್ಲಿ ಕರೊನಾ ವೈರಸ್​ ಸೋಂಕು ಪ್ರಕರಣ ವರದಿಯಾಗಿಲ್ಲ. ಒಂದೇ ಒಂದು ಶ್ವಾನಕ್ಕೆ ಕಿಲ್ಲರ್​ ಕರೊನಾ ವೈರಸ್​ ತಗುಲಿದ್ದಾಗಿ ಈ ಹಿಂದೆ ವರದಿಯಾಗಿತ್ತು. ಸದ್ಯ ಗುಣಮುಖವಾಗಿರುವ ಶ್ವಾನವನ್ನು ಕ್ವಾರಂಟೈನ್​ನಿಂದ ಬಿಡುಗಡೆ ಮಾಡಲಾಗಿದೆ. (ಏಜೆನ್ಸೀಸ್​)

    ಕರೊನಾದಿಂದ ವಿಶ್ವದೆದುರು ಚೀನಾ ವಿಲನ್:​ ಜಾಲತಾಣಗಳಲ್ಲಿ ಚೀನಾ ವಿರುದ್ಧ ಸಮರ ಸಾರಿದ ಪ್ರಸಿದ್ಧ ಹ್ಯಾಷ್​ಟ್ಯಾಗ್​ಗಳಿವು!

    ಕಿಲ್ಲರ್​ ಕರೊನಾ ವಿರುದ್ಧದ ಹೋರಾಟಕ್ಕೆ ಉದ್ಯಮಿ ರತನ್​ ಟಾಟಾರಿಂದ 500 ಕೋಟಿ ರೂ. ನೆರವು ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts