More

    ಕರೊನಾದಿಂದ ವಿಶ್ವದೆದುರು ಚೀನಾ ವಿಲನ್:​ ಜಾಲತಾಣಗಳಲ್ಲಿ ಚೀನಾ ವಿರುದ್ಧ ಸಮರ ಸಾರಿದ ಪ್ರಸಿದ್ಧ ಹ್ಯಾಷ್​ಟ್ಯಾಗ್​ಗಳಿವು!

    ವುಹಾನ್​: ಕರೊನಾ ವೈರಸ್​ ಕಾರಣದಿಂದಾಗಿ ಚೀನಾ ಮತ್ತು ಚೀನಾ ಜನತೆ ಜಾಗತಿಕವಾಗಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಶೇ. 900ರಷ್ಟು ದ್ವೇಷದ ಮಾತುಗಳು ಚೀನಾ ವಿರುದ್ಧ ಟ್ವಿಟರ್​ನಲ್ಲಿ ಹರಿಡಾಡಿವೆ ಎಂಬುದು ಹೊಸ ವರದಿಯೊಂದು ಬಹಿರಂಗಪಡಿಸಿದೆ.

    ಆನ್​ಲೈನ್​ ದ್ವೇಷಪೂರಿತ ಮಾತುಗಳನ್ನು ಅಳೆಯುವುದರಲ್ಲಿ ಪರಿಣಿತಿ ಹೊಂದಿರುವ L1ght ಹೆಸರಿನ ಕಂಪನಿ ಟ್ವಿಟರ್​ನಲ್ಲಿ ಚೀನಾ ವಿರುದ್ಧ ಹೆಚ್ಚಾಗಿ ಹರಿದಾಡಿದ ಹ್ಯಾಷ್​ಟ್ಯಾಗ್​ಗಳನ್ನು ಪಟ್ಟಿ ಮಾಡಿದೆ. ಅವುಗಳಲ್ಲಿ #Kungflu (ಕುಂಗ್​ಫ್ಲೂ), #chinesevirus (ಚೀನಾ ವೈರಸ್​) ಮತ್ತು #communistvirus (ಕಮ್ಯೂನಿಸ್ಟ್​ ವೈರಸ್​) ಹ್ಯಾಷ್​ಟ್ಯಾಗ್​ಗಳು ಪ್ರಸಿದ್ಧಿಯಾಗಿವೆ.

    L1ght ಕಂಪನಿಯು ಲಕ್ಷಾಂತರ ವೆಬ್​ಸೈಟ್​, ಸಾಮಾಜಿಕ ಜಾಲತಾಣ, ಚಾಟಿಂಗ್​ ವೇದಿಕೆ ಮತ್ತು ಗೇಮಿಂಗ್​ ಸೈಟ್​ಗಳ ಕಳೆದ ಡಿಸೆಂಬರ್​ನಿಂದ ಈವರೆಗಿನ ಮಾಹಿತಿಯನ್ನು ಕಲೆಹಾಕಿ ವಿಶ್ಲೇಷಿಸಿದೆ. ಸಾಕಷ್ಟು ಫೋಟೋಗಳು, ವಿಡಿಯೋ ಮತ್ತು ವಾಯ್ಸ್​ ರೆಕಾರ್ಡಿಂಗ್ಸ್​ಗಳನ್ನು ಸಂಗ್ರಹಿಸಿದ್ದು, ಇವೆಲ್ಲವೂ ಚೀನಾ ವಿರುದ್ಧದ ದ್ವೇಷದ ಮಾತುಗಳು ಹೆಚ್ಚಾಗಿವೆ ಎಂಬುದಕ್ಕೆ ಆಧಾರವಾಗಿವೆ. ​

    ಕಳೆದ ಡಿಸೆಂಬರ್​ನಲ್ಲಿ ಚೀನಾದ ಹುಬೇ ಪ್ರಾಂತ್ಯದ ವುಹಾನ್​ ನಗರದಲ್ಲಿ ಕರೊನಾ ವೈರಸ್ ಸ್ಪೋಟಗೊಂಡಿತು. ಅಲ್ಲಿನ ಪ್ರಾಣಿ ಮಾರುಕಟ್ಟೆಯಿಂದ ಹರಡಿತು ಎಂದು ಹೇಳಲಾಗಿದೆ.​ ಇದೀಗ ವೈರಸ್​ ಜಾಗತಿಕವಾಗಿ ಹರಡಿದ್ದು 27 ಸಾವಿರಕ್ಕೂ ಹೆಚ್ಚು ಮಂದಿಯನ್ನು ಆಹುತಿ ಪಡೆದಿದೆ.

    ಮಹಾಮಾರಿ ಕರೊನಾ ವೈರಸ್​ ಮಟ್ಟಹಾಕಲು ಜಾಗತಿಕವಾಗಿ ಲಾಕ್​ಡೌನ್​ ಹೇರಲಾಗಿದ್ದು, ಜನ-ಜೀವನ ಮಾತ್ರವಲ್ಲದೇ ಆರ್ಥಿಕತೆಯ ಮೇಲೂ ಕರೊನಾ ಕೆಂಗಣ್ಣು ಬೀರಿದೆ. ಈ ಲಾಕ್​ಡೌನ್​ ಸಮಯದಲ್ಲಿ ಹೆಚ್ಚಿನ ಜನರು ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಕಳೆಯುತ್ತಿದ್ದು, ಚೀನಾ ಮತ್ತು ಚೀನಾ ಜನತೆಯನ್ನು ಮನಬಂದತೆ ಟೀಕಿಸುತ್ತಿದ್ದಾರೆ. ವಿಶೇಷವಾಗಿ ಚೀನಾದ ಜನಸಂಖ್ಯೆ ಮತ್ತು ಅವರ ಆಹಾರ ಹವ್ಯಾಸ ವಿರುದ್ಧ ಜಗತ್ತಿನ ಜನರು ವಾಗ್ದಾಳಿ ನಡೆಸಿದ್ದಾರೆ. (ಏಜೆನ್ಸೀಸ್​)

    ಕಿಲ್ಲರ್​ ಕರೊನಾ ವಿರುದ್ಧದ ಹೋರಾಟಕ್ಕೆ ಉದ್ಯಮಿ ರತನ್​ ಟಾಟಾರಿಂದ 500 ಕೋಟಿ ರೂ. ನೆರವು ಘೋಷಣೆ

    PHOTOS| ರೈಲಲ್ಲೂ ಸಿದ್ಧವಾಗಿದೆ ಕರೊನಾ ಐಸೋಲೇಷನ್ ವಾರ್ಡ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts