More

    ಜಾತಿವಾರು ಸಮೀಕ್ಷಾ ವರದಿ ಸಿದ್ಧವಿದ್ದರೂ ಬಿಡುಗಡೆ ಮಾಡದಂತೆ ಕುಮಾರಸ್ವಾಮಿ ನನ್ನನ್ನು ಹೆದರಿಸಿದ್ದರು!

    ಚಾಮರಾಜನಗರ: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಾತಿವಾರು ಸಮೀಕ್ಷಾ ವರದಿ ಸಿದ್ಧವಾಗಿತ್ತು. ಆದರೆ ಅಂದಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವರದಿಯನ್ನು ಬಿಡುಗಡೆ ಮಾಡದಂತೆ ಹೆದರಿಸಿದ್ದರು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಆ ವೇಳೆ ಪುಟ್ಟರಂಗಶೆಟ್ಟಿ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದರು. ಇದೀಗ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸ್ವಗ್ರಾಮ ಉಪ್ಪಿನಮೋಳೆಯಲ್ಲಿ ಭಾನುವಾರ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ, ನಾನು ಸಚಿವನಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಜಾತಿವಾರು ಸಮೀಕ್ಷೆ ಮಾಡಿಸಿ ವರದಿ ಮಂಡಿಸಲು ಹೊರಟಿದ್ದೆ. ಆದರೆ ಕುಮಾರಸ್ವಾಮಿ ಕರೆ ಮಾಡಿ ವರದಿಯನ್ನು ಬಿಡುಗಡೆ ಮಾಡದೆ ರದ್ದುಗೊಳಿಸುವಂತೆ ಬೆದರಿಕೆ ಹಾಕಿದ್ದರು ಎಂದರು. ಇದನ್ನೂ ಓದಿರಿ ಯಾವ ಜಯಂತಿನ್ಲಾ? ಹನುಮ ಹುಟ್ಟಿದ ತಾರೀಖು‌‌ ನಿನಗೆ ಗೊತ್ತಾ? ಸುಮ್ನೆ ಚಿಕನ್​ ತಿನ್ಲಾ: ಸಿದ್ದರಾಮಯ್ಯ

    ಆ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಹಾಗೂ ಸದಸ್ಯರಾಗಿದ್ದ ಲಿಂಗಪ್ಪ ಅವರ ನೇತೃತ್ವದಲ್ಲಿ ಜಾತಿವಾರು ಸಮೀಕ್ಷೆ ಪೂರ್ಣಗೊಂಡಿತ್ತು. ಆದರೆ ಅದರ ಮಾಹಿತಿ ತಿಳಿದುಕೊಳ್ಳುವಷ್ಟರಲ್ಲಿ ಎಚ್​ಡಿಕೆ ತಡೆದರು. ಈಗಲೂ ಆ ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಪುಟ್ಟರಂಗಶೆಟ್ಟಿ ಹೇಳಿದರು.

    ಜಾತಿವಾರು ಸಮೀಕ್ಷಾ ವರದಿ ಸಿದ್ಧವಿದ್ದರೂ ಬಿಡುಗಡೆ ಮಾಡದಂತೆ ಕುಮಾರಸ್ವಾಮಿ ನನ್ನನ್ನು ಹೆದರಿಸಿದ್ದರು!ಜಾತಿವಾರು ಸಮೀಕ್ಷಾ ವರದಿಯನ್ನು ಮಂಡಿಸು. ಅದನ್ನು ಹೆಚ್ಚು ಪ್ರಚಾರಪಡಿಸಿ, ಜನಸಂಖ್ಯೆಗನುಗುಣವಾಗಿ ಅನುದಾನ ಬಿಡುಗಡೆ ಮಾಡಿಸಲು ಸಹಾಯವಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಅದಕ್ಕೆ ಎಚ್​ಡಿಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವರದಿ ಮಂಡನೆ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಲಿಂಗಾಯತರು ಒಂದೂವರೆ ಕೋಟಿ ಜನಸಂಖ್ಯೆ ಇದ್ದೀವಿ, ಒಕ್ಕಲಿಗರು ಒಂದು ಕೋಟಿ ಇದ್ದೀವಿ, ಉಪ್ಪಾರರು 30 ಲಕ್ಷ ಇದ್ದೀವಿ ಅಂಥ ಹೇಳುತ್ತಿರುವುದೆಲ್ಲ ಸುಳ್ಳು. ಲಿಂಗಾಯತರು ಇರುವುದೇ 65 ಲಕ್ಷ ಜನಸಂಖ್ಯೆ. ಅಂತೆಯೆ, ಉಪ್ಪಾರರು 14 ಲಕ್ಷ ಇದ್ದೀವಿ. ಒಕ್ಕಲಿಗರು ಅಂದಾಜು 48 ಲಕ್ಷ ಇರಬಹುದು. ಎಲ್ಲಕ್ಕಿಂತ ಮುಸ್ಲಿಂ ಸಮುದಾಯದ ಜನಸಂಖ್ಯೆಯೇ ಹೆಚ್ಚು ಎಂದು ತಿಳಿಸಿದರು.

    ಜಾತಿವಾರು ಸಮೀಕ್ಷೆಯ ವರದಿ ಸಿದ್ಧಪಡಿಸಿ, ಮಂಡನೆಗೆ ಮುಂದಾಗಿದ್ದ ವೇಳೆ ಎಚ್​ಡಿಕೆ ಕೆರೆ ಮಾಡಿ, ವರದಿಯನ್ನು ಮಂಡನೆ ಮಾಡಬಾರದು ಮತ್ತು ಆ ಕುರಿತ ಸಭೆಯನ್ನು ರದ್ದುಪಡಿಸಬೇಕೆಂದು ಹೇಳಿದ್ದರು. ಮುಖ್ಯಮಂತ್ರಿಯ ಮಾತಿಗೆ ಬೆಲೆ ಕೊಟ್ಟು ಸಭೆಯನ್ನು ರದ್ದುಪಡಿಸಿದ್ದೆ.
    | ಸಿ.ಪುಟ್ಟರಂಗಶೆಟ್ಟಿ ಮಾಜಿ ಸಚಿವ

    ಹೋಟೆಲ್​ ಬಿಲ್​ 2 ಸಾವಿರ ಆದ್ರೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಾನೆ ಈ ಭೂಪ!

    ಹೀಗಾದರೆ ರಾಜ್ಯದ ಉದ್ಧಾರ ಹೇಗೆ? ಯಾರು ವೀಕು, ಯಾರು ಫೇಕು?

    ರಾತ್ರಿಗಿಂತ ಹಗಲಿನಲ್ಲೇ ಕಾಂಡಂ ಮಾರಾಟ ಜಾಸ್ತಿ!

    ವಿಷ್ಣುದಾದಗೆ ಅಪಮಾನ: ದುಷ್ಕರ್ಮಿಗಳ ವಿರುದ್ಧ ಸಿಡಿದೆದ್ದ ದರ್ಶನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts