More

    ಸಮುದ್ರದೊಳಕ್ಕೇ ಹೊಕ್ಕಿದ್ದ ಕಾರು; ನಾಪತ್ತೆಯಾಗಿದ್ದವನ ಶವ ಇಂದು ಪತ್ತೆ

    ಉಡುಪಿ: ಕುಂದಾಪುರ ಸಮೀಪದ ಮರವಂತೆಯಲ್ಲಿ ಸ್ವಿಫ್ಟ್​ ಕಾರು ಸಮುದ್ರದೊಳಕ್ಕೇ ಹೊಕ್ಕು, ಒಬ್ಬ ಸಾವಿಗೀಡಾಗಿ ಇನ್ನಿಬ್ಬರು ಗಾಯಗೊಂಡಿದ್ದ ಪ್ರಕರಣದಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದವನ ಶವ ಇಂದು ಪತ್ತೆಯಾಗಿದೆ.

    ಶನಿವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಮರವಂತೆ ಕಡಲ ತೀರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರೊಂದು ಸಮುದ್ರದಂಚಿನಲ್ಲಿ ಹಾಕಿದ್ದ ಕಲ್ಲುಗಳ ರಾಶಿಯನ್ನೂ ಹಾದು ಸಮುದ್ರದೊಳಕ್ಕೇ ಹೊಕ್ಕಿತ್ತು.

    ಈ ಕಾರಿನಲ್ಲಿ ನಾಲ್ವರಿದ್ದು, ಆ ಪೈಕಿ ಒಬ್ಬ ಸ್ಥಳದಲ್ಲೇ ಸಾವಿಗೀಡಾಗಿದ್ದ. ಕೋಟೇಶ್ವರ ನಿವಾಸಿ ವೀರಾಜ್ ಆಚಾರ್ಯ(28) ಮೃತಪಟ್ಟಿದ್ದು, ಈತನ ಸಂಬಂಧಿಕರಾದ ಕಾರ್ತಿಕ್​, ಸಂದೀಪ್ ಗಾಯಗೊಂಡಿದ್ದು, ಮತ್ತೊಬ್ಬ ಸಂಬಂಧಿ ರೋಶನ್​ ಆಚಾರ್ಯ ನಾಪತ್ತೆಯಾಗಿದ್ದ.

    ಇದನ್ನೂ ಓದಿ: ಉಡುಪಿಯ ಮರವಂತೆ ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿ ಹೋದ ಕಾರು: ಓರ್ವನ ಬಲಿ, ಇನ್ನೋರ್ವ ನಾಪತ್ತೆ

    ಅಲೆಗಳ ಹೊಡೆತಕ್ಕೆ ಸಿಕ್ಕು ಕಾರು ಸಮುದ್ರದೊಳಕ್ಕೆ ಸೇರಿತ್ತು. ಸ್ವಲ್ಪ ತೇಲುತ್ತಿದ್ದಂತೆ ಕಾಣಿಸುತ್ತಿದ್ದ ಕಾರನ್ನು ಸಾರ್ವಜನಿಕರು ಹಗ್ಗ ಕಟ್ಟಿ ತೀರಕ್ಕೆ ಎಳೆದುಕೊಂಡುಬಂದಿದ್ದರು. ಅಪಘಾತ ತೀವ್ರತೆಗೆ ಕಾರು ನಜ್ಜುಗುಜ್ಜಾಗಿತ್ತು.

    ಈ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ರೋಶನ್ ಆಚಾರ್ಯ ಶವ ಇಂದು ಹೊಸಾಡು ಬಳಿಯ ಕಂಚುಗೋಡು ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಈ ಅಪಘಾತಕ್ಕೆ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

    ಸಮುದ್ರದೊಳಕ್ಕೇ ಹೊಕ್ಕಿದ್ದ ಕಾರು; ನಾಪತ್ತೆಯಾಗಿದ್ದವನ ಶವ ಇಂದು ಪತ್ತೆ
    ಅಪಘಾತ ಸಂಭವಿಸಿದ್ದ ದಿನ ಕಾರನ್ನು ಸಮುದ್ರದಿಂದ ಹೊರತೆಗೆದಿರುವುದು

    ಸಮುದ್ರದೊಳಕ್ಕೇ ಹೊಕ್ಕಿದ್ದ ಕಾರು; ನಾಪತ್ತೆಯಾಗಿದ್ದವನ ಶವ ಇಂದು ಪತ್ತೆ

    ವಿದ್ಯುತ್​ ಟ್ರಾನ್ಸ್​ಫಾರ್ಮರ್​ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು; ಒಬ್ಬ ಸ್ಥಳದಲ್ಲೇ ಸಾವು..

    ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಐಎಎಸ್​ ಅಧಿಕಾರಿ ಮಂಜುನಾಥ್ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts