More

    ಆರ್​ಸಿಬಿ ಗೆಲುವಿನ ಲಯ ಕಾಯ್ದುಕೊಳ್ಳುವ ವಿಶ್ವಾಸದಲ್ಲಿ ನಾಯಕ ಡು ಪ್ಲೆಸಿಸ್​

    ಬೆಂಗಳೂರು: ಐಪಿಎಲ್-17ರಲ್ಲಿ ಬಹುತೇಕ ನಿರ್ಗಮನ ಬಾಗಿಲಿನತ್ತ ತೆರಳಿದ ಬಳಿಕ ಹ್ಯಾಟ್ರಿಕ್​ ಗೆಲುವು ಸಾಧಿಸಿರುವ ಆರ್​ಸಿಬಿ ತಂಡದ ಪ್ಲೇಆ್​ ಆಸೆಗೆ ಮರುಜೀವ ಬಂದಿದೆ. ಟೂರ್ನಿಯ ಉಳಿದ 3 ಲೀಗ್​ ಪಂದ್ಯಗಳಲ್ಲೂ ಗೆಲುವಿನ ವಿಶ್ವಾಸವನ್ನು ನಾಯಕ ಫಾಫ್​ ಡು ಪ್ಲೆಸಿಸ್​ ವ್ಯಕ್ತಪಡಿಸಿದ್ದಾರೆ.
    “ಗುಜರಾತ್​ ಎದುರು ನಮ್ಮ ನಿರ್ವಹಣೆ ಅಮೋವಾಗಿತ್ತು. ಇಂಥ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಇದೇ ಶೈಲಿಯ ಆಟವನ್ನು ನಾವು ಮುಂದುವರಿಸಲು ಬಯಸಿದ್ದೇವೆ’ ಎಂದು ಪ್ಲೆಸಿಸ್​ ಗುಜರಾತ್​ ಟೈಟಾನ್ಸ್​ ವಿರುದ್ಧದ 4 ವಿಕೆಟ್​ ಗೆಲುವಿನ ಬಳಿಕ ಹೇಳಿದ್ದಾರೆ.

    ಗುಜರಾತ್​ ತಂಡವನ್ನು 147 ರನ್​ಗಳಿಗೆ ನಿಯಂತ್ರಿಸಿದ ಆರ್​ಸಿಬಿ, 13.4 ಓವರ್​ಗಳಲ್ಲೇ 6 ವಿಕೆಟ್​ಗೆ 152 ರನ್​ ಗಳಿಸಿ ಜಯಭೇರಿ ಬಾರಿಸಿತು. ಪ್ಲೆಸಿಸ್​ (64) ಮತ್ತು ವಿರಾಟ್​ ಕೊಹ್ಲಿ (42) ಸ್ಫೋಟಕ ಆರಂಭ ಒದಗಿಸಿದರು. ಇದರಿಂದ ಮಧ್ಯಮ ಕ್ರಮಾಂಕಕ್ಕೆ ಜೋಶ್​ ಲಿಟಲ್​ (45ಕ್ಕೆ 4) ನೀಡಿದ ಹೊಡೆತವೂ ಆರ್​ಸಿಬಿ ಗೆಲುವಿಗೆ ಅಡ್ಡಿಯಾಗಲಿಲ್ಲ.

    “ಬ್ಯಾಟಿಂಗ್​ನಲ್ಲಿ ನಮ್ಮ ನಿರ್ವಹಣೆ ಅತ್ಯುತ್ತಮವಾಗಿರಲಿಲ್ಲ. ಆದರೆ ಬೌಲಿಂಗ್​ ನಿರ್ವಹಣೆ ಖುಷಿ ನೀಡಿದೆ. ಸತತ 3 ಗೆಲುವಿನೊಂದಿಗೆ ಪುಟಿದೆದ್ದಿರುವುದು ನಮ್ಮ ಪರಿಶ್ರಮಕ್ಕೆ ಸಿಕ್ಕ ಲವಾಗಿದೆ’ ಎಂದು ಪ್ಲೆಸಿಸ್​ ಹೇಳಿದ್ದಾರೆ. ಪ್ಲೆಸಿಸ್​ 18 ಎಸೆತಗಳಲ್ಲೇ ಅರ್ಧಶತಕ ಬಾರಿಸಿ ಆರ್​ಸಿಬಿ ಪರ 2ನೇ ಅತಿವೇಗದ ಸಾಧಕ ಎನಿಸಿದರು. ಕ್ರಿಸ್​ ಗೇಲ್​ 17 ಎಸೆತಗಳಲ್ಲೇ ಅರ್ಧಶತಕ ಬಾರಿಸಿದ್ದು ಅಗ್ರಸ್ಥಾನದಲ್ಲಿದೆ.

    ಇಂಪ್ಯಾಕ್ಟ್​ ಪ್ಲೇಯರ್​ ನಿಯಮವನ್ನು ಟೀಕಿಸಿದ್ದ ರೋಹಿತ್ ಶರ್ಮ ಅದೇ ಪಾತ್ರದಲ್ಲಿ ಕಣಕ್ಕಿಳಿಯಲು ಕಾರಣ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts