More

    ಹೆಚ್ಚಿನ ಪರಿಹಾರ ಕೊಡಲು ಸಾಧ್ಯವಿಲ್ಲ, ಆರ್ಥಿಕ ನೀತಿಯಲ್ಲಿ ಹಸ್ತಕ್ಷೇಪ ಮಾಡಬಾರದು: ಸುಪ್ರೀಂಗೆ ಕೇಂದ್ರದ ಅಫಿಡವಿಟ್

    ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಸಾಂಕ್ರಾಮಿಕ ನಡುವೆ ವಿವಿಧ ವಲಯಗಳಿಗೆ ಇನ್ನು ಹೆಚ್ಚಿನ ಪರಿಹಾರ ನೀಡಲು ಸಾಧ್ಯವೇ ಇಲ್ಲ ಎಂದು ಸುಪ್ರೀಂಕೋರ್ಟ್​ಗೆ ತಿಳಿಸಿರುವ ಕೇಂದ್ರ ಸರ್ಕಾರ ಆರ್ಥಿಕ ನೀತಿಯಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸಬಾರದು ಎಂದು ಒತ್ತಿ ಹೇಳಿದೆ.

    ಇತ್ತೀಚೆಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ನೀತಿಗಳು ಸರ್ಕಾರದ ಸ್ವತ್ತು ಮತ್ತು ನಿರ್ದಿಷ್ಟ ಆರ್ಥಿಕ ಪರಿಹಾರ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸಬಾರದು. 2 ಕೋಟಿ ರೂ. ಸಾಲದ ಮೇಲಿ ಚಕ್ರಬಡ್ಡಿ ಮನ್ನಾ ಹೊರತುಪಡಿಸಿ, ಹೆಚ್ಚುವರಿ ಪರಿಹಾರ ನೀಡಿದ್ದೇ ಆದಲ್ಲಿ ರಾಷ್ಟ್ರೀಯ ಆರ್ಥಿಕ ಮತ್ತು ಬ್ಯಾಂಕಿಂಗ್​ ವಲಯಗಳ ಮೇಲೆ ಹಾನಿಯಾಗುತ್ತದೆ ಎಂದು ಸಮರ್ಥನೆ ನೀಡಿದೆ.

    ಇದನ್ನೂ ಓದಿ: ದಲಿತ ಶಾಸಕನ ಅಂತರ್ಜಾತಿ ವಿವಾಹ ಪ್ರಕರಣ: ಮಹತ್ವದ ತೀರ್ಪು ನೀಡಿದ ಮದ್ರಾಸ್​ ಹೈಕೋರ್ಟ್​!

    ಕರೊನಾ ವೈರಸ್ ಲಾಕ್​ಡೌನ್​ ಸಮಯದಲ್ಲಿ ಹೊರೆಯಾಗದಿರಲೆಂದು ಮಾರ್ಚ್​ ತಿಂಗಳಿಂದ ಆಗಸ್ಟ್​ವರೆಗಿನ ಆರು ತಿಂಗಳ ಮೊರಟೋರಿಯಂ ಅವಧಿಯಲ್ಲಿ ಸಾಲ ಮರುಪಾವತಿಸದೇ ಇರುವಂಥವರ ಬಡ್ಡಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಕೇಂದ್ರ ಸರ್ಕಾರ ಕಳೆದವಾರ ಸುಪ್ರೀಂ ಕೋರ್ಟ್​ಗೆ ತಿಳಿಸಿತ್ತು.

    ಆದರೆ, ಚಕ್ರಬಡ್ಡಿ ಮನ್ನಾ ಮಾಡುವ ಕುರಿತು ಕಳೆದ ಸೋಮವಾರ ಸುಪ್ರೀಂಕೋರ್ಟ್​ ಅಸಮಾಧಾನ ಹೊರಹಾಕಿ, ಬೇರೆ ಏನಾದರೂ ಉತ್ತಮವಾದುದ್ದನ್ನು ಮಾಡಿ ಒಂದು ವಾರದೊಳಗೆ ಅಫಿಡೆವಿಟ್​ ಸಲ್ಲಿಸಲು ಹೇಳಿತ್ತು. ಅರ್ಜಿದಾರರು ಉಲ್ಲೇಖಿಸಿರುವ ಅನೇಕ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಕೇಂದ್ರ ಅಫೆಡಿವಿಟ್​ ವಿಫಲವಾಗಿದೆ ಎಂದು ಹೇಳಿ ರಿಯಲ್ ಎಸ್ಟೇಟ್ ಮತ್ತು ವಿದ್ಯುತ್ ಉತ್ಪಾದಕರ ಕಳವಳವನ್ನು ಹೊಸ ಅಫಿಡವಿಟ್‌ಗಳಲ್ಲಿ ಪರಿಗಣಿಸಲು ಸರ್ಕಾರವನ್ನು ಕೇಳಲಾಗಿತ್ತು. (ಏಜೆನ್ಸೀಸ್​)

    ಇಎಂಐ ಕಟ್ಟಿದವರಿಗೆ ಕ್ಯಾಷ್​ಬ್ಯಾಕ್? : ಮಾರಟೋರಿಯಂ ಪಡೆಯದವರಿಗೂ ಸಿಗಲಿದೆ ಕೇಂದ್ರದ ಸವಲತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts