More

    ಭಾರತದಲ್ಲಿ ವೀಸಾ ಸೇವೆ ಸ್ಥಗಿತಗೊಳಿಸಿದ ಕೆನಡಾ

    ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಮತ್ತಷ್ಟು ಹದಗೆಡುತ್ತಿದ್ದು, ಭಾರತದಿಂದ 41 ರಾಜತಾಂತ್ರಿಕರನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ಕೆನಡಾ ಚಂಡೀಗಢ, ಮುಂಬೈ ಮತ್ತು ಬೆಂಗಳೂರಿನಲ್ಲಿ ವೀಸಾ ಸೇವೆ ಸ್ಥಗಿತಗೊಳಿಸಿದೆ.

    ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ: ಪಿಳ್ಳೈ ಬಂಧನಕ್ಕೆ ಇಡಿ ನಿಲುವು ಕೇಳಿದ ಹೈಕೋರ್ಟ್

    ಇದನ್ಕೆನೂ ಓದಿ: ನಡಾದಲ್ಲಿ ಖಲಲೀಸ್ತಾನ್​ ಉಗ್ರ ನಿಜ್ಜರ್ ಹತ್ಯೆ ನಂತರ ಎರಡೂ ದೇಶಗಳ ನಡುವೆ ಸಂಬಂಧ ಸುಧಾರಿಸಿಲ್ಲ. ಭಾರತವು ಕೆನಡಾ ರಾಜತಾಂತ್ರಿಕ ಸಿಬ್ಬಂದಿಗೆ ಒದಗಿಸಿದ್ದ ಭದ್ರತೆ ಹಿಂಪಡೆಯುವುದಾಗಿ ಘೋಷಿಸಿದ ನಂತರ ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ವಾಪಸ್​ ಕರೆಸಿಕೊಂಡಿದ್ದ ಕೆನಡಾ ಬೆಂಗಳೂರು, ಚಂಡೀಗಢ, ಮುಂಬೈ ಮತ್ತು ದೆಹಲಿಯಲ್ಲಿ ಸಂಚರಿಸುವ ವೇಳೆ ಎಚ್ಚರದಿಂದ ಇರುವಂತೆ ತನ್ನ ರಾಯಭಾರ ಸಿಬ್ಬಂದಿ ಮತ್ತು ನಾಗರಿಕರಿಗೆ ಸೂಚನೆ ನೀಡಿದೆ.

    ಅಲ್ಲದೆ, ಬೆಂಗಳೂರು, ಮುಂಬೈ ಮತ್ತು ಚಂಡೀಗಢದಲ್ಲಿನ ದೂತಾವಾಸ ಕಚೇರಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಅವುಗಳ ಕಾರ್ಯನಿರ್ವಹಣೆಯನ್ನು ದೆಹಲಿಯ ಕೇಂದ್ರದ ಮೂಲಕವೇ ನಿರ್ವಹಿಸಲಾಗುವುದು

    ದೆಹಲಿಯಲ್ಲಿನ ಕೆನಡಾ ರಾಯಭಾರ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಇತ್ತೀಚಿನ ಕೆಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆನಡಾ ಪ್ರಜೆಗಳಿಗಳ ಬಗ್ಗೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜತೆಗೆ ಕೆನಡಾ ವಿರೋಧಿ ಪ್ರತಿಭಟನೆಗೆ ಕರೆ ನೀಡುವ ಮತ್ತು ಕೆನಡಾದವರಿಗೆ ಬೆದರಿಕೆ ಹಾಕುವ ಅಥವಾ ತೊಂದೆ ನೀಡುವ ಸಾಧ್ಯತೆಗಳಿವೆ. ಹೀಗಾಗಿ ಅಪರಿಚತರ ಜೊತೆ ಅನಗತ್ಯ ಸ್ನೇಹ ಹಾಗೂ ವಿಚಾರ-ವಿನಿಮಯ ಮತ್ತು ಮಾಹಿತಿ ಹಂಚಿಕೊಳ್ಳಬಾರದು. ಯಾವುದೇ ಸಮಸ್ಯೆಯಾದಲ್ಲಿ ದೆಹಲಿಯ ರಾಯಭಾರ ಕೇಚಿಯನ್ನು ಸಂಪರ್ಕಿಸಬೇಕು ಎಂದು ತಿಳಿಸಿದೆ.

    ಭಾರತ ತಿರುಗೇಟು: ರಾಯಭಾರ ಕಚೇರಿಗಳಲ್ಲಿನ ಹೆಚ್ಚುವರಿ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಬೇಕೆಂದು ತಿಳಿಸಿದ್ದು, ವಿಯೆನ್ನಾ ಒಪ್ಪಂದದ 11.1ನೇ ಕಾಯ್ದೆಯೂ ಅದನ್ನೇ ತಿಳಿಸುತ್ತದೆ. ಯಾವುದೇ ನಿಯಮವನ್ನು ಉಲ್ಲಂಘನೆ ಮಾಡಿಲ್ಲ. ಒಂದು ವೇಳೆ ಅಂತಹ ಅಂತರಾಷ್ಟ್ರೀಯ ನಿಯಮಗಳು ಇದ್ದರೂ, ನಾವು ಸಮಾನತೆಗೆ ಮೊದಲ ಆದ್ಯತೆ ಕೊಡುತ್ತೇವೆಯೇ ಹೊರತು ಒಪ್ಪಂದಕ್ಕಲ್ಲ ಎಂದು ಭಾರತ ವಿದೇಶಾಗ ಸಚಿವಾಲಯ ಸ್ಪಷ್ಟಪಡಿಸಿದೆ.

    ಭಾರತ ತನ್ನ ಕ್ರಮದಿಂದ ಲಕ್ಷಾಂತರ ಮಂದಿಯ ಸಹಜ ಜೀವನವನ್ನು ಕಷ್ಟಕ್ಕೆ ದೂಡಿದೆ: ಕೆನಡಾ ಪ್ರಧಾನಿ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts