More

    ದೆಹಲಿ ಅಬಕಾರಿ ನೀತಿ ಹಗರಣ: ಪಿಳ್ಳೈ ಬಂಧನಕ್ಕೆ ಇಡಿ ನಿಲುವು ಕೇಳಿದ ಹೈಕೋರ್ಟ್

    ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೈದರಾಬಾದ್ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ಬಂಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ಜಾರಿ ನಿರ್ದೇಶನಾಲಯದ (ಇಡಿ) ನಿಲುವನ್ನು ಕೋರಿದೆ.

    ಇದನ್ನ್ಯಾನೂ ಓದಿ: ನಮ್ಮ ಮೆಟ್ರೋ ಕಾಮಗಾರಿ; 4 ತಿಂಗಳವರೆಗೆ ಸೆಂಟ್ರಲ್ ಜಂಕ್ಷನ್ ಫ್ಲೈಓವರ್ ಬಂದ್…

    ಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರಿದ್ದ ನ್ಯಾಯಪೀಠ ಇಡಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ನಿತೇಶ್ ರಾಣಾ, ಮಾ.6 ರಂದು ಜಾರಿ ನಿರ್ದೇಶನಾಲಯದ ಮನವಿ ಮೇರೆಗೆ ವಿಚಾರಣಾ ನ್ಯಾಯಾಲಯವು ಅವರನ್ನು ಕಸ್ಟಡಿಗೆ ನೀಡಿತ್ತು. ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಆದೇಶಗಳು ಮನಿ ಲಾಂಡರಿಂಗ್ ತಡೆ ಕಾಯ್ದೆ(PMLA) ನಿಬಂಧನೆಗಳನ್ನು ಉಲ್ಲಂಘಿಸಿವೆ ಎಂದು ವಾದಿಸಿದರು.

    ಪಿಎಂಎಲ್‌ಎಯ ಸೆಕ್ಷನ್ 19(1) ಅಡಿ ಬಂಧನಕ್ಕೆ ಸಮರ್ಪಕ ಆಧಾರಗಳನ್ನು ಒದಗಿಸಲಾಗಿಲ್ಲ. ಇದು ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಇಡಿ ಪ್ರತೀಕಾರ ತೀರಿಸಿಕೊಳ್ಳುವಂತೆ ವರ್ತಿಸಿದೆ. ಬಲವಂತವಾಗಿ ಮಾಹಿತಿ ಪಡೆಯಲು ಯತ್ನಿಸಿದೆ. ಮೂರನೇ ದರ್ಜೆ ಟ್ರೀಟ್​ಮೆಂಟ್​ ಬಳಸಿದೆ ಎಂದು ವಾದಿಸಿದರು.

    ಅರ್ಜಿದಾರರ ಜಾಮೀನು ಅರ್ಜಿ ಸಹ ಪರಿಗಣಿಸುವಂತೆ ವಕೀಲರು ಕೋರಿದ್ದು, ನ್ಯಾಯಾಲಯವು ನ.3ಕ್ಕೆ ವಿಚಾರಣೆ ಮುಂದೂಡಿತು. ಜೂನ್ 8 ರಂದು ವಿಚಾರಣಾ ನ್ಯಾಯಾಲಯವು ಪಿಳ್ಳೈ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಜೈಲಿನಲ್ಲಿರುವ ಇತರ ಆರೋಪಿಗಳಿಗಿಂತ ಇವರ ಪಾತ್ರವು ಹೆಚ್ಚು ಗಂಭೀರವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ದೃಢಪಟ್ಟಿದೆ ಎಂದು ಇಡಿ ಹೇಳಿತ್ತು.

    ಪಿಳ್ಳೈ ಬಿಆರ್‌ಎಸ್ ಎಂಎಲ್‌ಸಿ ಕೆ.ಕವಿತಾ ಅವರ ಆಪ್ತರಾಗಿದ್ದು, ಇಡಿ ತನ್ನ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದೆ. ಪ್ರಕರಣ ಸಂಬಂಧ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್‌ಐಆರ್‌ ದಾಖಲಿಸಿ ತನಿಖೆಗೆ ಮುಂದಾಗಿದೆ.

    ನಕಲಿ ವೋಟರ್ ಐಡಿ ತಯಾರಿಕೆ ಆರೋಪ; ಸಚಿವ ಭೈರತಿ ಸುರೇಶ್​ ಆಪ್ತನನ್ನು ವಶಕ್ಕೆ ಪಡೆದ ಸಿಸಿಬಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts