More

    ಧಾರ್ಮಿಕ ಕಾರ್ಯದಿಂದ ಪಾಪ ಪರಿಹಾರ : ಹರಿಪ್ರಸಾದ್ ಭಟ್ ಹೆರ್ಗ ಹೇಳಿಕೆ

    ಬ್ರಹ್ಮಾವರ: ಧರ್ಮ ಕಾರ್ಯದಲ್ಲಿ ತೊಡಗಿಸಿಕೊಂಡರೆ ಪಾಪ ಕಡಿಮೆಯಾಗುತ್ತದೆ ಎಂದು ವಿದ್ವಾನ್ ಹರಿಪ್ರಸಾದ್ ಭಟ್ ಹೆರ್ಗ ಹೇಳಿದರು.

    ಬಾರಕೂರು ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದ ವೆಂಕಟೇಶ್ವರ ಸಭಾಭವನದಲ್ಲಿ ಉಡುಪಿ ಜಿಲ್ಲಾ ಸೋಮಕ್ಷತ್ರೀಯ ಗಾಣಿಗ ಸಮಾಜ ಮೂಡುಕೇರಿ ಬಾರಕೂರು ವತಿಯಿಂದ ಮೇ 19ರಿಂದ 25ರ ತನಕ ನಡೆಯುವ ವಸಂತ ಶಿಬಿರ 2024 ಕಾರ್ಯಕ್ರಮದಲ್ಲಿ ಮಾನವ ಜನ್ಮ ಸಾರ್ಥಕತೆ ಕುರಿತು ಭಾನುವಾರ ಉಪನ್ಯಾಸ ನೀಡಿದರು.

    ದೇವಸ್ಥಾನದ ಆಡಳಿತ ಮಂಡಳಿ, ಮಹಿಳಾ ಮಂಡಳಿ, ಸೇವಾ ಸಮಿತಿ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಪ್ರತಿ ದಿನ ಸಂಜೆ 4.30 ರಿಂದ 6.30ರ ತನಕ ನಾನಾ ವಿಷಯದಲ್ಲಿ 7 ಮಂದಿ ವಿದ್ವಾಂಸರಿಂದ ಉಪನ್ಯಾಸ, ವಿಷಯದ ಕುರಿತು ಪ್ರಶ್ನೋತ್ತರ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts