More

    ಪರಿಶಿಷ್ಟ ಜಾತಿಯವರ ಪೋಸ್ಟ್ ಮೆಟ್ರಿಕ್ ಸ್ಕಾಲರ್​ಷಿಪ್​ಗೆ 59,000 ಕೋಟಿ ರೂ. ಹೂಡಿಕೆ: ಸಚಿವ ಸಂಪುಟ ಒಪ್ಪಿಗೆ

    ನವದೆಹಲಿ: ನಾಲ್ಕು ಕೋಟಿಗೂ ಅಧಿಕ ಎಸ್​ಸಿ ವಿದ್ಯಾರ್ಥಿಗಳಿಗೆ ನೆರವಾಗುವ ಕೇಂದ್ರ ಸರ್ಕಾರ ಪ್ರಾಯೋಜಿತ ಪೋಸ್ಟ್​ ಮೆಟ್ರಿಕ್ ಸ್ಕಾಲರ್​ಷಿಪ್​ಗೆ ಮುಂದಿನ 5 ವರ್ಷಗಳ ಅವಧಿಯಲ್ಲಿ 59,000 ಕೋಟಿಗೂ ಅಧಿಕ ಹೂಡಿಕೆ ಮಾಡುವ ಪ್ರಸ್ತಾವನೆಯನ್ನು ಕೇಂದ್ರದ ಆರ್ಥಿಕ ವ್ಯವಹಾರಗಳ ಸಮಿತಿ ಬುಧವಾರ ಅಂಗೀಕರಿಸಿದೆ.

    ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ಇದಕ್ಕೆ ಅಂಗೀಕಾರ ನೀಡಿದ್ದು, ಕೇಂದ್ರದ ಪಾಲು ಶೇಕಡ 60 ಆಗಿದ್ದು, ಉಳಿದ 40 ರಾಜ್ಯಗಳದ್ದಾಗಿರುತ್ತದೆ. ಕೇಂದ್ರದ ಪಾಲು 35,534 ಕೋಟಿ ರೂಪಾಯಿ ಆಗಿರಲಿದೆ. ಈ ಹೊಸ ಯೋಜನೆಯು ಚಾಲ್ತಿಯಲ್ಲಿರುವ ಬದ್ಧತೆಯ ಬಾಧ್ಯತೆ ಒಳಗೊಂಡ ವ್ಯವಸ್ಥೆಯ ಬದಲಾಗಿ ಮಹತ್ವದ ಯೋಜನೆಯಲ್ಲಿ ಕೇಂದ್ರ ಹೆಚ್ಚಿನ ಪಾಲುದಾರಿಕೆ ವಹಿಸುವುದಕ್ಕೆ ಸೂಕ್ತವಾಗುವಂತೆ ಇರಲಿದೆ. ಅತ್ಯಂತ ಬಡ ವಿದ್ಯಾರ್ಥಿಗಳಿಗೆ ಕ್ಲಪ್ತ ಸಮಯದಲ್ಲಿ ಹಣಕಾಸಿನ ನೆರವನ್ನು ಪಾರದರ್ಶಕ ರೀತಿಯಲ್ಲಿ ಒದಗಿಸುವುದಕ್ಕೆ ಅನುಕೂಲವೆನಿಸುವಂತೆ ರೂಪಿಸಲಾಗಿದೆ. ನಿರಂತರ ನಿಗಾ ಕೂಡ ಇದರಲ್ಲಿ ಇರಲಿದೆ ಎಂದು ಸರ್ಕಾರ ತಿಳಿಸಿದೆ.

    ಇದನ್ನೂ ಓದಿ: ದುಡ್ಡು ಕೊಡು ಎಂದು ಕೇಳಿದ್ದಕ್ಕೆ ವಿಷವನ್ನು ಕಳುಹಿಸಿಕೊಟ್ಟ ಸಹೋದರ! ವಿಷ ಕುಡಿಯದಿದ್ದರೆ ನಾನೇ ಸಾಯಿಸುತ್ತೇನೆಂದು ಬೆದರಿಸಿದ!

    ಪೋಸ್ಟ್ ಮೆಟ್ರಿಕ್ ಸ್ಕಾಲರ್​ಷಿಪ್​ ಯೋಜನೆ ಕುರಿತ ಸಚಿವ ಸಂಪುಟದ ನಿರ್ಣಯ ಎಸ್​ಸಿ ಸಮುದಾಯದ ಯುವಜನರು ಹೆಚ್ಚಿನ ಶಿಕ್ಷಣ ಪಡೆಯುವುದಕ್ಕೆ ನೆರವಾಗಲಿದೆ. ಉನ್ನತ ಗುಣಮಟ್ಟ ಮತ್ತು ಕೈಗೆಟಕುವ ಶಿಕ್ಷಣವನ್ನು ಯುವಜನರಿಗೆ ಖಾತರಿಗೊಳಿಸುವ ಸರ್ಕಾರದ ಉದ್ದೇಶಕ್ಕೆ ಇದು ಪೂರಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಡಿಟಿಎಚ್​ ಪರಿಷ್ಕೃತ ಮಾರ್ಗದರ್ಶಿಗೆ ಸಚಿವ ಸಂಪುಟ ಒಪ್ಪಿಗೆ – ಪರವಾನಗಿ 20 ವರ್ಷಕ್ಕೆ, ಎಫ್​ಡಿಐ 100%

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts