More

    ಕಾಯ್ದೆಯಿಂದ ಯಾವುದೇ ತೊಂದರೆಯಿಲ್ಲ

    ಯಳಂದೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯಿಂದ ದೇಶದ ಜನರಿಗೆ ಯಾವುದೇ ತೊಂದರೆಯಿಲ್ಲ ಎಂದು ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಸ್ಪಷ್ಟ ಪಡಿಸಿದರು.
    ಪಟ್ಟಣದಲ್ಲಿ ಭಾನುವಾರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಅರಿವು ಜಾಥಾದಲ್ಲಿ ಅವರು ಮಾತನಾಡಿದರು.
    ಲೋಕ ಮತ್ತು ರಾಜ್ಯಸಭೆಯಲ್ಲಿ ಎನ್‌ಆರ್‌ಸಿ ಕಾಯ್ದೆ ಅಂಗೀಕಾರವಾಗಿದೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನದಲ್ಲಿರುವ ಅಲ್ಪಸಂಖ್ಯಾತರ ರಕ್ಷಣೆ ಸುಲಭವಾಗಲಿದೆ. ಈ ಕಾಯ್ದೆಯಿಂದ ದೇಶದಲ್ಲಿರುವ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಅನಗತ್ಯ ಗೊಂದಲ ಮೂಡಿಸುತ್ತಿವೆ. ಬಿಜೆಪಿ ಇದುವರಿಗೂ ಮುಸ್ಲಿಮರಿಗೆ ಅನೇಕ ಸವಲತ್ತುಗಳನ್ನು ನೀಡುತ್ತ ಬಂದಿದ್ದು, ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿಲ್ಲ. ಈ ಬಗ್ಗೆ ಅನಗತ್ಯ ವಿವಾದ ಸಲ್ಲದು ಎಂದರು.
    ಪಕ್ಷದ ಮುಖಂಡ ನೂರೊಂದು ಶೆಟ್ಟಿ ಮಾತನಾಡಿ, ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರ ರಕ್ಷಣೆಯಾಗುತ್ತಿದೆ. ಆದರೆ ನೆರೆಯ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ಆದ್ದರಿಂದ ಈ ಕಾಯ್ದೆ ಅವಶ್ಯಕತೆ ಇದೆ. ತ್ರಿವಳಿ ತಲಾಖ್, ಕಾಶ್ಮೀರ ವಿಚಾರ, ರಾಮಜನ್ಮಭೂಮಿ ತೀರ್ಪಿನ ವಿಚಾರ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಗೊಂದಲ ನಿರ್ಮಾಣ ಸಾಧ್ಯವಾಗಲಿಲ್ಲ. ಆದ್ದರಿಂದ ಈಗ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿದೆ. ದೇಶದ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಯಿಲ್ಲ ಎಂದರು.
    ಬಿಜೆಪಿ ಮಂಡಲ ಅಧ್ಯಕ್ಷ ಮಹೇಶ್, ಪಕ್ಷದ ಮುಖಂಡರಾದ ಮಾಂಬಳ್ಳಿ ನಂಜುಂಡಸ್ವಾಮಿ, ಕಿನಕಹಳ್ಳಿ ರಾಚಯ್ಯ, ಪುಟ್ಟಸುಬ್ಬಪ್ಪ, ಶಿವಕುಮಾರ್, ಲಕ್ಷ್ಮೀಪತಿ, ಮದ್ದೂರು ಶ್ರೀಕಂಠ, ಡಿ.ಎನ್. ನಟರಾಜು, ಬಾಲಸುಬ್ರಹ್ಮಣ್ಯ, ಅಂಬಳೆ ಶಿವಾನಂದಸ್ವಾಮಿ, ಜಿ.ಎನ್.ಲೋಕೇಶ್, ನಂಜಶೆಟ್ಟಿ, ಪಟೇಲ್ ಮಹೇಶ್, ಮಹಾದೇವಸ್ವಾಮಿ, ಮದ್ದೂರು ವಿರೂಪಾಕ್ಷ, ಮೋಹನ್, ವೆಂಕಟರಂಗಯ್ಯ, ಸುಧಾಮಲ್ಲಣ್ಣ, ಪುರಿನಿಂಗಣ್ಣ, ಆಟೋ ನಾಗಣ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts