More

    ರಾಜಕೀಯದಲ್ಲಿ 1 ರೂಪಾಯಿ ಹಾಕಿ 10 ರೂ. ಲಾಭ ಮಾಡುವವರಿದ್ದಾರೆ: ಸಿಎಂ ಇಬ್ರಾಹಿಂ ಟಾಂಗ್​ ಕೊಟ್ಟಿದ್ಯಾರಿಗೆ?

    ಬೆಂಗಳೂರು: ನಾನು ಜೆಡಿಎಸ್ ಸೇರುತ್ತೇನೆಂದು ಹೇಳಿಲ್ಲ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್​.ಡಿ.ದೇವೆಗೌಡರ ಜತೆ ಚೆನ್ನಾಗಿದ್ದೇನೆ. ಬಿಜೆಪಿ ಪಕ್ಷದ ನಾಯಕರು ಸಹ ನನ್ನ ಜತೆ ಚೆನ್ನಾಗಿದ್ದಾರೆ. ಹಾಗಂತ ನಾನು ಕಾಂಗ್ರೆಸ್ ಬಿಡ್ತೀನಿ ಅಂತಲ್ಲ ಎಂದು ಶಾಸಕ ಸಿಎಂ ಇಬ್ರಾಹಿಂ ಹೇಳಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಬೆನ್ನಲ್ಲೇ ಮಾತನಾಡಿದ ಸಿಎಂ ಇಬ್ರಾಹಿಂ, ಶುಭ ಶುಕ್ರವಾರ ಎಲ್ಲವೂ ಒಳ್ಳೆಯದಾಗುತ್ತದೆ ಎಂದರು. ಇದೇ ವೇಳೆ ಜೆಡಿಎಸ್​ಗೆ ಸೇರುವ ವಿಚಾರದ ಬಗ್ಗೆ ಮಾತನಾಡಿ, ಅದು ಇಲ್ಲಿ ತೀರ್ಮಾನ ಆಗಲ್ಲ. ದೆಹಲಿಯಲ್ಲಿ ತೀರ್ಮಾನ ಆಗುತ್ತದೆ. ಸಮಯ ಸಿಕ್ಕಾಗ ದೆಹಲಿಗೆ ಹೋಗಿ ಬರ್ತೆನೆಂದು ಮಾರ್ಮಿಕವಾಗಿ ನುಡಿದರು.

    ಮೊನ್ನೆ ಇಬ್ರಾಹಿಂ ನಿವಾಸಕ್ಕೆ ಸಿದ್ದು ಭೇಟಿ ನೀಡಿದ ವಿಚಾರವಾಗಿ ಎಲ್ಲ ದೇವರ ದಯೆ, ಋಣ ಸಂದಾಯ ಎಂದರು. ನಾನು ಸಿದ್ದರಾಮಯ್ಯ ಉಪಹಾರಕ್ಕೆ ಅಂತ ಸೇರಿದ್ದೆವು. ರಾಜ್ಯ, ರಾಷ್ಟ್ರ ರಾಜಕಾರಣದ ಚರ್ಚೆ ಮಾಡಿದ್ದೇವೆ. ಪಕ್ಷದಲ್ಲಿ ನನ್ನ ಪಾತ್ರ ಏನು ಅನ್ನುವುದು ಚರ್ಚೆ ಮಾಡಿದ್ದೇವೆ. ರಾಜ್ಯದಲ್ಲಿ ನಮ್ಮ ಸಮುದಾಯ 18% ಇದೆ. ಹೀಗಾಗಿ ನಮ್ಮ ಪಾತ್ರ ಕೂಡ ದೊಡ್ಡದಿದೆ ಎಂದು ತಿಳಿಸಿದರು.

    ಇದನ್ನೂ ಓದಿರಿ: ಬುದ್ಧಿಗೊಂದು ಗುದ್ದು: ಇದರಲ್ಲಿ ನಾನು ಅವನಲ್ಲ… ಇವನಲ್ಲ… ಹಾಗಿದ್ರೆ ನಾನ್ಯಾರು ಹೇಳಬಲ್ಲಿರಾ?

    ನಾನು ಜೆಡಿಎಸ್ ಸೇರುತ್ತೇನೆ ಅಂತ ಎಲ್ಲಿ ಹೇಳಿದ್ದೆ? ಸಿದ್ದರಾಮಯ್ಯ ಜತೆ ನನಗೆ ಯಾವತ್ತು ಬೆಸರವಿರಲಿಲ್ಲ. ಕುಮಾರಸ್ವಾಮಿ, ದೇವೆಗೌಡರ ಜತೆ ನಾನು ಚೆನ್ನಾಗಿದ್ದೇನೆ. ನಾನು ಅಡ್ವಾಣಿ ಮನೆಯಲ್ಲೂ ತಿಂಡಿ ತಿಂದಿದ್ದೆ. ಬಿಜೆಪಿ ಪಕ್ಷದ ನಾಯಕರು ನನ್ನ ಜತೆ ಚೆನ್ನಾಗಿದ್ದಾರೆ. ಹಾಗಂತ ಕಾಂಗ್ರೆಸ್ ಬಿಡ್ತೀನಿ ಅಂತ ಅಲ್ಲ. ನಾನು ಬಸವ ತತ್ವದಲ್ಲಿ ನಂಬಿಕೆ ಇಟ್ಟಿರುವವನು ಎಂದು ಹೇಳಿದರು.

    ರಾಜಕೀಯವಾಗಿ ನನ್ನ ತೀರ್ಮಾನ ಏನು ಅಂತ ದೆಹಲಿಗೆ ಹೋದ ಮೇಲೆ ಅಂತಿಮಗೊಳಿಸುವೆ. ತೀರ್ಮಾನ ಕೈಗೊಳ್ಳುವಿಕೆಯಲ್ಲಿ ಭಾಗಿಯಾಗೋದು ಮುಖ್ಯ. ಯಾರು ಯಾರಿಗೂ ಏನೂ ಕೊಡಬೇಕಾಗಿಲ್ಲ. ನಮಗೆ ಬರಬೇಕಾದ್ದು ಕೊಟ್ಟರೆ ಸಾಕು. ರಾಜಕೀಯದಲ್ಲಿ 1 ರೂಪಾಯಿ ಹಾಕಿ ಹತ್ತು ರೂಪಾಯಿ ತೆಗೆದುಕೊಂಡು ಹೋಗುವವರು ಇದಾರೆ ಎಂದು ಜಮೀರ್ ಅಹ್ಮದ್ ಖಾನ್​ಗೆ ಸಿ.ಎಂ. ಇಬ್ರಾಹಿಂ ಟಾಂಗ್ ನೀಡಿದರು. (ದಿಗ್ವಿಜಯ ನ್ಯೂಸ್​)

    ಮದ್ವೆ ಖುಷಿಯಲ್ಲಿದ್ದ ಆಂಧ್ರದ ಯುವತಿ ವಿವಾಹ ದಿನದಂದೇ ಅಮೆರಿಕದಲ್ಲಿ ಆತ್ಮಹತ್ಯೆಗೆ ಶರಣು!

    ನ್ಯೂಜಿಲೆಂಡ್​ನಲ್ಲಿ ಸುನಾಮಿ ಅಪ್ಪಳಿಸುವ ಭೀತಿ: ಸಾವಿರಾರು ಜನರ ಸ್ಥಳಾಂತರ

    ಬಾಯ್​ಫ್ರೆಂಡ್​ ಭೇಟಿಗಾಗಿ ಈಕೆ ಸೃಷ್ಟಿಸಿದ್ದು ಅಂತಿಂಥ ಕತೆಯಲ್ಲ: ಈಕೆಯ ಡ್ರಾಮಾ ನೋಡಿ ಪೊಲೀಸರೇ ಕಂಗಾಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts