More

    ಪುರಿ ಜಗನ್ನಾಥ ರೂಪವನ್ನೇ ಹೋಲುವ ಪತಂಗ ಪತ್ತೆ! ಗ್ರಾಮಸ್ಥರ ಮಾತು ಕೇಳಿದ್ರೆ ಬೆರಗಾಗ್ತೀರಾ!

    ತೆಂಟುಲಿಖುಂತಿ (ಒಡಿಶಾ): ಪ್ರಕೃತಿಯ ವೈಚಿತ್ರ್ಯಗಳೇ ಅಂತದ್ದು. ಇದರಲ್ಲಿ ಅದೇನೇನೋ ಅಚ್ಚರಿಗಳು ಅಡಗಿರುತ್ತವೆ. ಭೇದಿಸಲಾಗದಷ್ಟು ರಹಸ್ಯಗಳು ಸಹ ಅಡಗಿವೆ. ಭೇದಿಸಿದಂತಹ ರಹಸ್ಯಗಳು ಮಾನವನ ಹುಬ್ಬೇರಿಸಿಯು ಇದೆ. ಒಟ್ಟಾರೆ ಪ್ರಕೃತಿ ಎಂದರೆ ಅದೊಂದು ವಿಸ್ಮಯಗಳ ತಾಣ. ಆ ವಿಸ್ಮಯವನ್ನು ಗಮನಿಸಿ, ಆಸ್ವಾದಿಸುವ ಕಣ್ಣು ಇರಬೇಕಷ್ಟೇ. ಅಂಥದ್ದೆ ಒಂದು ವಿಸ್ಮಯ ಒಡಿಶಾದ ಗ್ರಾಮವೊಂದರಲ್ಲಿ ಕಂಡುಬಂದಿದೆ.

    ಹೌದು. ಪತಂಗ (ಬಟರ್​ಫ್ಲೈ) ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಅದರಲ್ಲಿನ ಬಣ್ಣದ ಚಿತ್ತಾರ ಮನಸ್ಸಿಗೆ ಮುದ ನೀಡುತ್ತದೆ. ಅದರ ಸ್ವಚ್ಛಂದ ಹಾರಾಟ ನೋಡಿ ನಾವು ಹೀಗೆ ಇರಬೇಕಿತ್ತಲ್ಲ ಎಂದು ಅಂದುಕೊಂಡವರೇ ಹೆಚ್ಚು. ಹೇಳಬೇಕೆಂದರೆ ಪತಂಗ ಪ್ರೀತಿಯ ಸಂಕೇತವೂ ಹೌದು. ಇಂತಹ ಅಚ್ಚುಮೆಚ್ಚಿನ ಜೀವಿ ದೇವರ ರೂಪದಲ್ಲಿ ಕಾಣಿಸಿಕೊಂಡರೆ ಹೇಗಿರುತ್ತೆ? ಇದು ಸಾಧ್ಯಾನಾ ಎಂದು ಪ್ರಶ್ನಿಸುವವರಿಗೆ ಉತ್ತರ ಮುಂದಿದೆ.

    ಇದನ್ನೂ ಓದಿರಿ: ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದು ಜೋಕ್ ಎಂದುಕೊಂಡಿದ್ದ ತೆವಾಟಿಯಾ!

    ಒಡಿಶಾದ ನಾಬರಂಗ್ಪುರ್​ ಜಿಲ್ಲೆಯ ತೆಂಟುಲಿಖುಂತಿ ಬ್ಲಾಕ್​ ಅಡಿಯಲ್ಲಿ ಬರುವ ಡೆಂಗಪದರ್ ಗ್ರಾಮದ ನಿವಾಸಿ ಭೀಮ್​ಸೇನ್​ ಬಿಸೊಯಿ ಮನೆಗೆ ನೂರಾರು ಗ್ರಾಮದ ಜನರು ಗುಂಪು ಗುಂಪಾಗಿ ಬರುತ್ತಿದ್ದಾರೆ. ಅದಕ್ಕೆ ಕಾರಣ ದೇವರ ರೂಪದಲ್ಲಿ ಕಾಣಿಸಿಕೊಂಡಿರುವ ಪತಂಗ.

    ಪಂತಗ ಕೀಟವೂ ಥೇಟ್​ ಪುರಿ ಜಗನ್ನಾಥನ ರೂಪದಲ್ಲಿ ಕಾಣಿಸಿಕೊಂಡಿದೆ. ಪತಂಗದ ಮುಖವು ಪುರಿ ಜಗನ್ನಾಥನ ಮುಖವನ್ನೇ ಹೋಲುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದ್ದು, ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಬಿಸೊಯಿ ಮನೆಗೆ ನೂರಾರು ಮಂದಿ ದಾಂಗುಡಿ ಇಡುತ್ತಿದ್ದಾರೆ. ಶಂಖ ಮೊಳಗಿಸುವುದರ ಜತೆಗೆ ಪತಂಗಕ್ಕೆ ಹೂವುಗಳನ್ನು ಅರ್ಪಿಸಿ ಪೂಜೆಯನ್ನು ಸಲ್ಲಿಸುತ್ತಿದ್ದಾರೆ.

    ಭೀಮ್​ಸೇನ್​ ಬಿಸೊಯಿ ಕುಟುಂಬ ಸದಸ್ಯರು ಮೊದಲು ತಮ್ಮ ತೋಟದಲ್ಲಿ ಈ ವಿರಾಳಾತಿವಿರಳ ಪತಂಗವನ್ನು ಪತ್ತೆಹಚ್ಚುತ್ತಾರೆ. ಜಗನ್ನಾಥನ ಮುಖ ಹೋಲುತ್ತಿರುವುದರಿಂದ ಅದನ್ನು ಮನೆಗೆ ತಂದು ಪೂಜೆ ನೇರವೇರಿಸುತ್ತಿದ್ದಾರೆ.

    ಇದನ್ನೂ ಓದಿರಿ: ಟೈಫಾಯ್ಡ್​ಗೆ ತುತ್ತಾಗಿದ್ದ ಮಗಳಿಗೆ ಭೂತ ಹಿಡಿದಿದೆಯೆಂದು ಆಸ್ಪತ್ರೆಗೆ ದಾಖಲಿಸದ ಅಪ್ಪ! ಕೊನೆಯುಸಿರೆಳೆದ ಮಗಳು

    ಈ ಬಗ್ಗೆ ಗ್ರಾಮಸ್ಥರೊಬ್ಬರು ಮಾತನಾಡಿ, ಭಗವಾನ್ ಜಗನ್ನಾಥನು ಡೆಂಗಪದರ್ ಗ್ರಾಮಕ್ಕೆ ಇಳಿದಿರುವುದು ನೋಡಿ ನನಗೆ ತುಂಬಾ ಸಂತೋಷವಾಗಿದೆ. ಬ್ರಹ್ಮಾಂಡದ ಅಧಿಪತಿ ತಮ್ಮ ಸ್ಥಳಕ್ಕೆ ಹತ್ತಿರದಲ್ಲಿರುವುದನ್ನು ಕಂಡು ಗ್ರಾಮಸ್ಥರು ತುಂಬಾ ಸಂತೋಷಪಟ್ಟಿದ್ದಾರೆಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಹುಲಿಗೆ ಇಬ್ಬರು ಬಲಿ; ಹುಲಿ ಪತ್ತೆ ಕಾರ್ಯಾಚರಣೆ ಮುಂದುವರಿಕೆ, ಶಾಲಾ-ಕಾಲೇಜುಗಳಿಗೆ 2 ದಿನ ರಜೆ…

    ಇಬ್ಬರನ್ನು ಸಾಯಿಸಿದ್ದ ಹುಲಿ ಕೊನೆಗೂ ಸೆರೆ ಸಿಕ್ಕಿತು; ಹತ್ತರ ಪ್ರಾಯದ ಹೆಣ್ಣು ಹುಲಿ ಮೈಸೂರಿಗೆ ರವಾನೆ

    ಕರ್ನಾಟಕದಲ್ಲಿ ಲಾಕ್​ಡೌನ್ ? ಆರೋಗ್ಯ ಸಚಿವ ಸುಧಾಕರ್ ಹೇಳಿದ್ದೇನು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts