More

    ತಾವು ವಾಸವಿಲ್ಲದ ಫ್ಲ್ಯಾಟ್ ನಲ್ಲಿ 50 ಲಕ್ಷ ರೂ. ಇಟ್ಟಿದ್ದ ಮಹಿಳಾ ಉದ್ಯಮಿ! ಏನಾಯ್ತು ಆ ದುಡ್ಡು?

    ಮಂಗಳೂರು: ಇದೊಂದು ವಿಚಿತ್ರ ಪ್ರಕರಣ. ಸುರತ್ಕಲ್‌ನಲ್ಲಿ ಪೆಟ್ರೋಲ್ ಬಂಕ್ ಹೊಂದಿದ್ದ ವಿದ್ಯಾ ಪ್ರಭು ಎಂಬುವವರು ಸಮೀಪದ ಇಡ್ಯಾ ಗ್ರಾಮದ ಜಾರ್ಡಿನ್ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಹೊಂದಿದ್ದರು. ಆ ಫ್ಲ್ಯಾಟ್ ನಲ್ಲಿ ಅವರು ವಾಸಿಸುತ್ತಿರಲಿಲ್ಲ. ಅವರಿಗೆ ಬೇರೊಂದು ಸ್ವಂತ ಮನೆ ಇತ್ತು. ಇಲ್ಲಿಗೆ ಆಗಾಗ ಬಂದು ಹೋಗುತ್ತಿದ್ದರು. ಅಷ್ಟೇ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಅವರು ಆ ಫ್ಲ್ಯಾಟ್ ನಲ್ಲಿ 50 ಲಕ್ಷ ರೂ. ನಗದು ಹಣ ಮತ್ತು ಅಪಾರ ಚಿನ್ನಾಭರಣ ಇಟ್ಟಿದ್ದರು!

    ಅದೇ ಅಪಾರ್ಟ್‌ಮೆಂಟ್‌ನಲ್ಲಿ ನವೀನ್ ಎಂಬಾತ ಮೂರು ವರ್ಷಗಳಿಂದ ನೆಲೆಸಿದ್ದ. ಆತ ಸೇನೆಯಲ್ಲಿ ಸುಮಾರು 15 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತನಾಗಿದ್ದ. ಇವನ ಹಿನ್ನೆಲೆ ಗಮನಿಸಿ ಅಲ್ಲಿರುವವರೆಲ್ಲರೂ ಸೇರಿ ಆತನನ್ನು ಅಪಾರ್ಟ್‌ಮೆಂಟ್‌ನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದ್ದರು. ಇಡೀ ಅಪಾರ್ಟ್‌ಮೆಂಟ್‌ನ ಯೋಗಕ್ಷೇಮ ನೋಡಿಕೊಳ್ಳುವುದು ಆತನ ಕೆಲಸವಾದರೂ, ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಆತ ಮಾಡಿದ ಕೆಲಸವೇ ಬೇರೆ.

    ಇದನ್ನೂ ಓದಿ: ವೆಂಟಿಲೇಟರ್ ಖರೀದಿ ಅಕ್ರಮ: ಸದನದಲ್ಲಿ ಪ್ರತಿಧ್ವನಿಸಿದ ‘ವಿಜಯವಾಣಿ’ ವರದಿ

    ಯಾರೂ ವಾಸಿಸದ ಈ ಫ್ಲ್ಯಾಟ್ ಮೇಲೆ ನವೀನ್ ಕಣ್ಣು ಹಾಕಿದ. ತಾನು ಮೊದಲು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸುರತ್ಕಲ್‌ನ ಬಾರ್‌ನ ವೇಟರ್ ಆಗಿದ್ದ ಸಂತೋಷ್ ಜತೆ ಸೇರಿ ಕಳ್ಳತನದ ಸಂಚು ಹೂಡಿದ. ಅವರ ಜತೆ ಕೇರಳ ಮೂಲದ ರಘು, ಅಮೇಶ್ ಹಾಗೂ ಇತರ ಇಬ್ಬರು ಸೇರಿಕೊಂಡರು. ಎಲ್ಲರೂ ಸೇರಿ ಆ.17ರಂದು ರಾತ್ರಿ ವಿದ್ಯಾಪ್ರಭು ಅವರ ಫ್ಲ್ಯಾಟ್ ಗೆ ಬಾಲ್ಕನಿ ಮೂಲಕ ಪ್ರವೇಶಿಸಿ 50 ಲಕ್ಷ ರೂ. ನಗದು ಹಾಗೂ ಚಿನ್ನ ದೋಚಿದ್ದರು.

    ಪ್ರಕರಣಕ್ಕೆ ಸಂಬಂಧಿಸಿ ಸೆ.15ರಂದು ಸುರತ್ಕಲ್ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಕೇರಳ ತಿರುವನಂತಪುರದ ಆರೋಪಿಗಳಿಬ್ಬರನ್ನು ಬಂಧಿಸಿದ್ದರು. ನವೀನ್ ಮತ್ತು ಸಂತೋಷ್‌ನನ್ನು ಸೆ.18ರಂದು ಬಂಧಿಸಿದ್ದಾರೆ. ಕೇರಳ ಮೂಲದ ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರು ಹಾಗು ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ 30,85,710 ರೂ. ನಗದು ಹಾಗೂ 224 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳವು ಮಾಡಿದ ಹಣದಲ್ಲಿ ಸಾಕಷ್ಟು ಹಣವನ್ನು ಆರೋಪಿಗಳು ದುಂದು ವೆಚ್ಚ ಮಾಡಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಮದುವೆಯಾದ ಹತ್ತೇ ದಿನಕ್ಕೆ ಗಂಡನನ್ನು ಜೈಲಿಗಟ್ಟಿದ ಪೂನಂ ಪಾಂಡೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts