More

    ಬಸ್ ನಿಲ್ದಾಣಕ್ಕೆ ಮಲ್ಲಮ್ಮಳ ಹೆಸರಿಡಿ

    ಬೈಲಹೊಂಗಲ: ನವೀಕರಣಗೊಳ್ಳುತ್ತಿರುವ ಬೈಲಹೊಂಗಲ ಪಟ್ಟಣದ ಕೇಂದ್ರ ಬಸ್ ನಿಲ್ದಾಣಕ್ಕೆ ವೀರ ವನಿತೆ ಬೆಳವಡಿ ಮಲ್ಲಮ್ಮಳ ಹೆಸರನ್ನು ನಾಮಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

    ಪಟ್ಟಣದ ಮೂರುಸಾವಿರ ಮಠದಲ್ಲಿ ಭಾನುವಾರ ಬೆಳವಡಿ, ಪಟ್ಟಣದ ಹಿರಿಯರು ಮಲ್ಲಮ್ಮಳ ಹೆಸರನ್ನು ಬಸ್ ನಿಲ್ದಾಣಕ್ಕೆ ನಾಮಕರಣ ಮಾಡುವ ಕುರಿತು ಚರ್ಚಿಸಲು ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿ, ಸರ್ಕಾರ ಮಟ್ಟದಲ್ಲಿ ಈ ಕುರಿತು ಗಮನ ಸೆಳೆಯಲಾಗುವುದು. ನೂತನ ಬೆಳಗಾವಿ-ಬೆಂಗಳೂರು ರೈಲ್ವೆಗೆ ರಾಣಿ ಮಲ್ಲಮ್ಮಳ ಹೆಸರಿಡುವಂತೆ ಈಗಾಗಲೇ ಉ.ಕ. ಭಾಗದ 48 ಶಾಸಕರ ಸಹಿ ಸಂಗ್ರಹಿಸಿ, ಸರ್ಕಾರಕ್ಕೆ ಮನವಿ ಪತ್ರ ಕಳುಹಿಸಲಾಗಿದೆ ಎಂದರು.

    ಮಾಜಿ ಶಾಸಕರಾದ ಡಾ. ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ ಮಾತನಾಡಿ, ವೀರ ವನಿತೆ ಮಲ್ಲಮ್ಮಳ ಹೆಸರು ಅಜರಾಮರವಾಗಲು ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಲಾಗುವುದು ಎಂದರು.

    ಬೆಳವಡಿ ಗ್ರಾಮದ ಮುಖಂಡ ಡಾ. ಆರ್.ಬಿ. ಪಾಟೀಲ ಮಾತನಾಡಿ, ಮಲ್ಲಮ್ಮಳ ಶೌರ್ಯ, ಸಾಹಸಗಳನ್ನು ಯುವ ಜನರಿಗೆ ಪರಿಚಯಿಸಲು ಜನಪ್ರತಿನಿಧಿಗಳು ಕಾಳಜಿವಹಿಸಬೇಕು ಎಂದರು.

    ಸಾನ್ನಿಧ್ಯವಹಿಸಿದ್ದ ಪ್ರಭುನೀಲಕಂಠ ಸ್ವಾಮೀಜಿ, ಜಿಪಂ ಸದಸ್ಯ ಶಂಕರ ಮಾಡಲಗಿ, ಮುಖಂಡರಾದ ಶ್ರೀಶೈಲ ಬೋಳಣ್ಣವರ, ಮಹಾಂತೇಶ ತುರಮರಿ ಮಾತನಾಡಿದರು. ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ನಿಂಗಪ್ಪ ಚೌಡಣ್ಣವರ, ರಾಚಯ್ಯ ರೊಟ್ಟಯ್ಯನವರ, ಕೆ.ಎಸ್. ಕುಲಕರ್ಣಿ, ದುಂಡೇಶ ಗರಗದ, ವಿಶ್ವನಾಥ ಪೂಜೇರ, ಬಸವರಾಜ ಬಿ ಲ್ಲಶಿವಣ್ಣವರ, ಯಾಸೀನ್ ಕಿತ್ತೂರ, ರಫೀಕ್ ಬಡೇಘರ, ಉದಯ ಕೊಟಬಾಗಿ, ವಿಲಾಸ ಕೊಟಬಾಗಿ, ಶ್ರೀಶೈಲ ಆಲದಕಟ್ಟಿ, ವಿಠ್ಠಲ ಹಂಪಿಹೊಳಿ, ಶ್ರೀಶೈಲ ಬೈಲವಾಡ, ದಯಾನಂದ ಮುಪ್ಪಯ್ಯನವರಮಠ ಇತರರು ಇದ್ದರು. ಪ್ರಕಾಶ ಹುಂಬಿ ನಿರೂಪಿಸಿದರು. ಸಿ.ಎಸ್. ಚಿಕ್ಕನಗೌಡರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts