More

    ರಿಲಯನ್ಸ್ ಜತೆ ಬಸ್​ ತಯಾರಿಕೆ ಡೀಲು​: ಹೂಡಿಕೆದಾರರಿಗೆ 7330% ಲಾಭ ನೀಡಿದ ಷೇರಿಗೆ ಮತ್ತೆ ಈಗ ಡಿಮ್ಯಾಂಡು

    ಮುಂಬೈ: ಎಲೆಕ್ಟ್ರಿಕ್ ಬಸ್ ತಯಾರಿಸುವ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ (Olectra Greentech Ltd) ಕಂಪನಿಯ ಷೇರುಗಳ ಬೆಲೆ ಶುಕ್ರವಾರದ ವಹಿವಾಟಿನಲ್ಲಿ ಶೇಕಡಾ 6.93 ರಷ್ಟು ಏರಿಕೆ ಕಂಡಿದೆ. ಕಂಪನಿಯ ಷೇರುಗಳು ಎನ್‌ಎಸ್‌ಇಯಲ್ಲಿ ದಾಖಲೆಯ ಗರಿಷ್ಠ ಬೆಲೆಯಾದ 2048 ರೂಪಾಯಿ ತಲುಪಿದವು.

    ಕಳೆದ 3 ತಿಂಗಳುಗಳಲ್ಲಿ ಈ ಇವಿ (ಎಲೆಕ್ಟ್ರಿಕ್​ ವೆಹಿಕಲ್​) ಸ್ಟಾಕ್‌ನ ಷೇರುಗಳು ಶೇಕಡಾ 70 ರಷ್ಟು ಜಿಗಿತವನ್ನು ಕಂಡಿವೆ. ಕಂಪನಿಯ ಷೇರು ಇದುವರೆಗೆ ಹೂಡಿಕೆದಾರರಿಗೆ 7,330.68% ಲಾಭವನ್ನು ನೀಡಿದೆ.

    ಒಲೆಕ್ಟ್ರಾ ಗ್ರೀನ್‌ಟೆಕ್​ ಕಂಪನಿಯು 7000 ಕ್ಕೂ ಹೆಚ್ಚು ಬಸ್‌ ತಯಾರಿಕೆಯ ಆರ್ಡರ್ ಪಡೆಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಈ ಕಂಪನಿಗೆ ದೊಡ್ಡ ಪ್ರಮಾಣದ ಆರ್ಡರ್​ಗಳು ದೊರೆತಿವೆ. ಈ ಕಂಪನಿಯು BEST, TSRTC ಮತ್ತು MSRTC ಯಿಂದ ಬಸ್​ ತಯಾರಿಕೆ ಆರ್ಡರ್​ಗಳನ್ನು ಪಡೆದುಕೊಂಡಿದೆ.

    ಒಲೆಕ್ಟ್ರಾ ಗ್ರೀನ್‌ಟೆಕ್‌ಗೆ ತಮಿಳುನಾಡಿನ ಟಿಎಸ್‌ಆರ್‌ಟಿಸಿಯು 550 ಬಸ್‌ಗಳಿಗೆ, ಮುಂಬೈನ ಬೆಸ್ಟ್ 2100 ಬಸ್‌ಗಳಿಗೆ ಮತ್ತು ಎಂಎಸ್‌ಆರ್‌ಟಿಸಿಯು 5150 ಬಸ್‌ಗಳಿಗೆ ಆರ್ಡರ್ ನೀಡಿವೆ. ಪ್ರಸ್ತುತ ಕಂಪನಿಯು 7000 ಕ್ಕೂ ಹೆಚ್ಚು ಬಸ್‌ಗಳನ್ನು ಪೂರೈಸುವ ಆರ್ಡರ್​ ಹೊಂದಿದೆ.

    ಎಲೆಕ್ಟ್ರಿಕ್ ಬಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, ಕಂಪನಿಯು ಈಗ 3-ಚಕ್ರ ವಾಹನಗಳ ಮೇಲೆ ಕೇಂದ್ರೀಕರಿಸಿದೆ. ಈ ಕಂಪನಿಯು ಆಟೋ ಮತ್ತು ಎಲೆಕ್ಟ್ರಿಕ್ ಟ್ರಕ್ ತಯಾರಿಕೆ ಮೇಲೆ ಗಮನ ಕೇಂದ್ರೀಕರಿಸಿದೆ. ಇದೇ ತಿಂಗಳಲ್ಲಿ ಒಲೆಕ್ಟ್ರಾ ಗ್ರೀನ್ ಕಂಪನಿಯು ರಿಲಯನ್ಸ್ ಸಹಾಯದಿಂದ ಎಲ್ಲರಿಗೂ ಹೈಡ್ರೋಜನ್ ಬಸ್ ತಯಾರಿಸಲು ಮುಂದಾಗಿದೆ.

    ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ 27 ಕೋಟಿ ರೂಪಾಯಿ ಆಗಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ, 15 ಕೋಟಿ ರೂ.ಗಳಷ್ಟು ಲಾಭವನ್ನು ಕಂಪನಿ ಮಾಡಿತ್ತು. ಇದೇ ಸಮಯದಲ್ಲಿ, ಕಂಪನಿಯ ಒಟ್ಟು ಆದಾಯವು ಅಕ್ಟೋಬರ್‌ನಿಂದ ಡಿಸೆಂಬರ್ 2023 ರವರೆಗೆ 342 ಕೋಟಿ ರೂ. ತಲುಪಿದ್ದು, ಹಿಂದಿನ ವರ್ಷ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ, ಶೇ.33.6ರಷ್ಟು ಹೆಚ್ಚಳವಾಗಿದೆ.

    ಕಳೆದ ಆರು ತಿಂಗಳ ಅವಧಿಯಲ್ಲಿ ಕಂಪನಿಯ ಷೇರು ಬೆಲೆ 89.88 ಪ್ರತಿಶತದಷ್ಟು ಹೆಚ್ಚಾಗಿದೆ. ಕೇವಲ ಒಂದು ವರ್ಷದಲ್ಲಿ 331 ಪ್ರತಿಶತ ಹೆಚ್ಚಳವಾಗಿ ಹೂಡಿಕೆದಾರರಿಗೆ ದೊಡ್ಡ ಲಾಭ ದೊರೆತಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ 16,000 ಕೋಟಿ ರೂ. ಇದೆ.

    ಈ ಕಂಪನಿಯು ಭಾರತದ ಹೈದರಾಬಾದ್‌ನಲ್ಲಿರುವ ಅತಿ ದೊಡ್ಡ ಭಾರತೀಯ ಎಲೆಕ್ಟ್ರಿಕ್ ಬಸ್ ತಯಾರಕ ಸಂಸ್ಥೆಯಾಗಿದೆ. ಇದು ಪ್ರಾಥಮಿಕವಾಗಿ ಸಂಯುಕ್ತ ಪಾಲಿಮರ್ ಇನ್ಸುಲೇಟರ್‌ಗಳು ಮತ್ತು ಎಲೆಕ್ಟ್ರಿಕಲ್ ಬಸ್‌ಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ.

     

    ಸ್ಟಾರ್ ಇನ್ವೆಸ್ಟರ್ಸ್​​ ವಿಜಯ್ ಕೇಡಿಯಾ, ಮುಕುಲ್ ಅಗರವಾಲ್ ಖರೀದಿಸಿದ ಷೇರು ವರ್ಷದಲ್ಲಿ 380% ಏರಿಕೆ; ಕಂಪನಿ ಲಾಭ 166% ಹೆಚ್ಚಳೊಂದಿಗೆ ಸ್ಟಾಕ್​ಗೆ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts