More

    ಮಬ್ಬು ಕವಿದ ಮಾರ್ಗ, 35 ಪ್ರಯಾಣಿಕರಿದ್ದ ಬಸ್​ ಪಲ್ಟಿ​!

    ಬೆಳಗಾವಿ: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ವಾಹನ ಸವಾರರು ಎಷ್ಟೇ ಜಾಗರೂಕತೆ ವಹಿಸಿದರೂ ಸಾಲದು ಎಂಬುವುದಕ್ಕೆ ಇದೊಂದು ತಾಜಾ ಉದಾಹರಣೆ. ಮಳೆಯಿಂದಾಗಿ ಮಬ್ಬು ಕವಿದು, ದಾರಿ ಸರಿ ಕಾಣದೆ ಬಸ್​ ಪಲ್ಟಿಯಾದ ಪ್ರಕರಣವೊಂದು ನಡೆದಿದೆ.

    ಬೆಳಗಾವಿಯ ಬಡಕೊಳ್ಳಿ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ಅಪಘಾತ ಸಂಭವಿಸಿದೆ. ಬೆಳಗಾವಿಯಿಂದ ಹಿರೇಕೆರೂರಗೆ ಹೋಗುತ್ತಿದ್ದ ಸರ್ಕಾರಿ ಬಸ್ ಅಪಘಾತಕ್ಕೀಡಾಗಿದೆ.

    ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಅಬ್ಬರಿಸುತ್ತಿದ್ದು, ಭಾರಿ ಮಳೆಯಿಂದಾಗಿ ಬಸ್​ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಬಸ್​ನಲ್ಲಿ 35 ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಆದರೆ ಬಸ್​ನಲ್ಲಿದ್ದ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.

    ಮಬ್ಬು ಕವಿದ ಮಾರ್ಗ, 35 ಪ್ರಯಾಣಿಕರಿದ್ದ ಬಸ್​ ಪಲ್ಟಿ​!

    ನಿಮ್ಮೂರಿಗೀಗ ಅವರಲ್ಲ, ಇವರೇ ಇನ್​ಸ್ಪೆಕ್ಟರ್​; 13 ಡಿವೈಎಸ್​ಪಿಗಳೂ ಟ್ರಾನ್ಸ್​ಫರ್​..

    ಅನ್ಯಕೋಮಿನವರಿಂದ ಆರ್​ಎಸ್​ಎಸ್​ ಮುಖಂಡನ ಮುಖಕ್ಕೆ ಚಾಕು ಇರಿತ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts