More

    ಭಾರತ vs ಶ್ರೀಲಂಕಾ ಒಡಿಐನಿಂದ ಬುಮ್ರಾ ಔಟ್​…

    ನವದೆಹಲಿ: “ಬುಮ್ರಾ, ತಂಡದೊಂದಿಗೆ ಗುವಾಹಟಿಗೆ ಪ್ರಯಾಣಿಸಿಲ್ಲ. ಅವರು ಸರಿಯಾದ ಫಿಟ್‌ನೆಸ್‌ಗೆ ಮರಳಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ, ಅದಲ್ಲದೇ ಬುಮ್ರಾ ಇಲ್ಲದೇ ಆಸ್ಟ್ರೇಲಿಯಾ ಟೆಸ್ಟ್ ಸರಣಿ ಆಡುವುದು ಕಷ್ಟವಾಗುತ್ತೆ, ”ಎಂದು ಅನಾಮಧೇಯರಾಗಿ ಉಳಿಯ ಬಯಸುವ ಹಿರಿಯ ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

    ಜನವರಿ 18 ರಿಂದ ಪ್ರಾರಂಭವಾಗುವ ಒಡಿಐ ಸರಣಿಗಾಗಿ ನ್ಯೂಜಿಲೆಂಡ್ ವಿರುದ್ಧ ಸ್ಪರ್ಧಿಸಲು ಬುಮ್ರಾ ಚೇತರಿಸಿಕೊಳ್ಳುತ್ತಾರಾ ಎನ್ನುವುದು ಕುತೂಹಲಕರ ವಿಷಯ. ಒಂದು ದೇಶೀಯ ಪಂದ್ಯವನ್ನೂ ಆಡದೆ ಫೀಲ್ಡಿಂಗ್ ಹೇಗೆ ಮಾಡುತ್ತಾರೆ ಎಂದು ಕಾದು ನೋಡಬೇಕಿಗಿದೆ.

    “ಎಂಎಸ್‌ಕೆ ಪ್ರಸಾದ್ ನೇತೃತ್ವದ ಸಮಿತಿ ಈ ಹಿಂದೆ ಗಾಯಗೊಂಡ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಾಪಸ್ ಮರಳಲು ಕನಿಷ್ಠ ಒಂದು ಅಥವಾ ಸಾಧ್ಯವಾದರೆ ಎರಡು ದೇಶೀಯ ಪಂದ್ಯಗಳನ್ನು ಆಡಬೇಕು ಎಂಬ ನಿಯಮವನ್ನು ಮಾಡಿತ್ತು” ಎಂದು ಮಾಜಿ ಪದಾಧಿಕಾರಿಯೊಬ್ಬರು ಈ ಸಂದರ್ಭ ನೆನಪಿಸಿಕೊಂಡರು.

    ಮಂಗಳವಾರದಿಂದ ಗುವಾಹಟಿಯಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಬುಮ್ರಾ ಅವರನ್ನು ಭಾರತದ ಏಕದಿನ ತಂಡಕ್ಕೆ ಸೇರಿಸಲಾಗಿತ್ತು.

    ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ T20I ಸರಣಿಯ ನಂತರ ಬೆನ್ನುನೋವಿನಿಂದಾಗಿ ಬುಮ್ರಾ T20 ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಅವರು ಪುನರ್ವಸತಿಗೆ ಒಳಗಾಗಿದ್ದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಿಂದ ಫಿಟ್ ಎಂದು ಘೋಷಿಸಲಾಗಿದೆ. ಶೀಘ್ರದಲ್ಲೇ ಭಾರತೀಯ ಏಕದಿನ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಹೇಳಿಕೆ ನೀಡಿದೆ.

    ಕಳೆದ ಬೇಸಿಗೆಯ ಆರಂಭದಲ್ಲಿ, ಜುಲೈನಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸದ ವೇಳೆ ಬುಮ್ರಾ ಗಾಯಗೊಂಡಿದ್ದರು. ಇದರಿಂದಾಗಿ ಸುಮಾರು ಎರಡು ತಿಂಗಳ ಕಾಲ ಆಟದಿಂದ ಹೊರಗುಳಿದಿದ್ದರು.

    ಭಾರತ ಪುರುಷರ ಕ್ರಿಕೆಟ್ ತಂಡ ತಮ್ಮ ಮೊದಲ ದ್ವಿಪಕ್ಷೀಯ ಸರಣಿಯನ್ನು ಶ್ರೀಲಂಕಾ ವಿರುದ್ಧ ಮಂಗಳವಾರ, ಜನವರಿ 3 ರಿಂದ ಆರಂಭಿಸಲಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts