More

    ಪ್ರೇಕ್ಷಕನಿಂದ ಬುಮ್ರಾ, ಸಿರಾಜ್‌ಗೆ ಜನಾಂಗೀಯ ನಿಂದನೆ, ಭಾರತ ತಂಡ ದೂರು

    ಸಿಡ್ನಿ: ಭಾರತ ತಂಡದ ಬೌಲರ್‌ಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮದ್ ಸಿರಾಜ್ ಆಸೀಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ಕುಡುಕ ಪ್ರೇಕ್ಷಕನಿಂದ ಜನಾಂಗೀಯ ನಿಂದನೆ ಎದುರಿಸಿದ್ದಾರೆ. ಭಾರತ ತಂಡ ಈ ಸಂಬಂಧ ಐಸಿಸಿ ಮ್ಯಾಚ್ ರೆಫ್ರಿ ಡೇವಿಡ್ ಬೂನ್‌ಗೆ ಶನಿವಾರ ಅಧಿಕೃತವಾಗಿ ದೂರು ಸಲ್ಲಿಸಿದೆ.

    ಎಸ್‌ಸಿಜಿ ಮೈದಾನದ ಸ್ಟಾೃಂಡ್‌ನಿಂದ ಕುಡುಕ ಪ್ರೇಕ್ಷಕ, ಸಿರಾಜ್ ಅವರನ್ನು ‘ಮಂಗ’ ಎಂದು ನಿಂದಿಸಿದ್ದಾನೆ. ಭಾರತದ ಒಟ್ಟಾರೆ ನಾಲ್ವರು ಆಟಗಾರರು ನಿಂದನೆಗೆ ಗುರಿಯಾಗಿದ್ದಾರೆ ಎಂದೂ ಹೇಳಲಾಗಿದೆ. ಈ ಘಟನೆ 2007-08ರ ಆಸೀಸ್ ಪ್ರವಾಸದ ಮಂಕಿಗೇಟ್ ಪ್ರಕರಣವನ್ನು ನೆನಪಿಸಿದೆ. ಆಗ ಸಿಡ್ನಿ ಟೆಸ್ಟ್‌ನಲ್ಲೇ ಆ್ಯಂಡ್ರ್ಯೋ ಸೈಮಂಡ್ಸ್‌ರನ್ನು ಹರ್ಭಜನ್ ಸಿಂಗ್ ‘ಮಂಕಿ’ ಎಂದು ನಿಂದಿಸಿದ್ದರು ಎಂಬ ಆರೋಪ ಎದುರಾಗಿತ್ತು. ಬಳಿಕ ಬಜ್ಜಿ ಆರೋಪಮುಕ್ತಗೊಂಡಿದ್ದರು.

    ಇದನ್ನೂ ಓದಿ: ಸಿಡ್ನಿ ಟೆಸ್ಟ್‌ನಲ್ಲಿ ಭಾರತ ತಂಡಕ್ಕೆ ಇನಿಂಗ್ಸ್ ಹಿನ್ನಡೆ, ಗಾಯದ ಹೊಡೆತ

    ಆಸ್ಟ್ರೇಲಿಯಾದ 2ನೇ ಇನಿಂಗ್ಸ್ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಬುಮ್ರಾ, ಸಿರಾಜ್‌ಗೆ ನಿಂದನೆ ಎದುರಾಗಿದೆ. ಭಾರತ ತಂಡದ ದೂರಿನಿಂದ 3ನೇ ದಿನದಾಟದ ಬಳಿಕ ಅಂಪೈರ್‌ಗಳು ಮತ್ತು ಮೈದಾನದ ಭದ್ರತಾ ಸಿಬ್ಬಂದಿ, ಬುಮ್ರಾ-ಸಿರಾಜ್ ಅವರಲ್ಲದೆ ನಾಯಕ ಅಜಿಂಕ್ಯ ರಹಾನೆ ಜತೆಗೂ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಪಂದ್ಯಕ್ಕೆ ಪ್ರತಿದಿನ ಕೇವಲ 10 ಸಾವಿರ ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

    ದೇಶೀಯ ಟಿ20 ಕ್ರಿಕೆಟ್ ಹಬ್ಬಕ್ಕೆ ಈ ಐಪಿಎಲ್ ತಾರೆಯರೇ ಆಕರ್ಷಣೆ!

    VIDEO | ಸೀರೆಯುಟ್ಟು ಪಲ್ಟಿ ಹೊಡೆದ ಮಹಿಳಾ ಜಿಮ್ನಾಸ್ಟ್, ವಿಡಿಯೋ ವೈರಲ್!

    VIDEO | ಸ್ಟೀವನ್ ಸ್ಮಿತ್‌ರನ್ನು ರವೀಂದ್ರ ಜಡೇಜಾ ರನೌಟ್ ಮಾಡಿದ ರೀತಿಗೆ ಕ್ರಿಕೆಟ್​ ಪ್ರೇಮಿಗಳು ಫಿದಾ!

    14ನೇ ಐಪಿಎಲ್‌ಗೆ ಸಿಎಸ್‌ಕೆ ತಂಡದಿಂದ ಹೊರಬೀಳಲಿರುವ ಆಟಗಾರರು ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts