More

    ಷೇರುಗಳಿಗೆ ರೆಕ್ಕೆಪುಕ್ಕ ನೀಡಿದ ಬಜೆಟ್ ಘೋಷಣೆ; ಕುಣಿದು ಕುಪ್ಪಳಿಸಿದ ಹೂಡಿಕೆದಾರರು; ಒಂದೇ ದಿನದಲ್ಲಿ 20% ಹೆಚ್ಚಳವಾಗಿ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಮುಂಬೈ: ಗುರುವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಕೇಂದ್ರ ಮಧ್ಯಂತರ ಬಜೆಟ್​ ಮಂಡಿಸಿದರು. ಬಜೆಟ್ ಘೋಷಣೆಯ ನಂತರ ಈ ಸರ್ಕಾರಿ ಕಂಪನಿಯ ಹೂಡಿಕೆದಾರರು ಸಂತೋಷದಿಂದ ಕುಣಿದುಕುಪ್ಪಳಿಸಿದ್ದಾರೆ.

    ಗುರುವಾರ ಅಂದರೆ ಫೆಬ್ರವರಿ 1 ರಂದು ಹುಡ್ಕೊ (HUDCO- Housing and Urban Development Corporation, ವಸತಿ ಮತ್ತು ನಗರಾಭಿವೃದ್ಧಿ ನಿಗಮ) ಷೇರುಗಳ ಮೇಲೆ 20% ಅಪ್ಪರ್ ಸರ್ಕ್ಯೂಟ್ ವಿಧಿಸಲಾಯಿತು. ಈ ಷೇರುಗಳು ಗುರುವಾರದ ವಹಿವಾಟಿನಲ್ಲಿ ಹಿಂದಿನ ದಿನದ ಬೆಲೆಗಿಂತ 20% ಏರಿಕೆ ಕಂಡು 207 ರೂಪಾಯಿ ತಲುಪಿದವು. ಈ ಕಾರಣಕ್ಕಾಗಿ ಈ ಷೇರುಗಳ ಬೆಲೆ ಮತ್ತಷ್ಟು ಏರದಂತೆ ಅಪ್ಪರ್​ ಸರ್ಕ್ಯೂಟ್​ ಹೇರಲಾಯಿತು. ಇದು ಈ ಷೇರುಗಳ 52 ವಾರದ ಗರಿಷ್ಠ ಬೆಲೆ ಕೂಡ ಆಗಿದೆ. ಗುರುವಾರದ ಅಂತ್ಯಂಕ್ಕೆ ಈ ಷೇರು ಬೆಲೆ ಶೇ. 19.47 ಏರಿಕೆಯೊಂದಿಗೆ 205.90 ರೂಪಾಯಿ ತಲುಪಿತು. ಕಳೆದ ಒಂದು ವರ್ಷದಲ್ಲಿ, ಕಂಪನಿಯ ಷೇರುಗಳ ಬೆಲೆಯಲ್ಲಿ ಅಪಾರ ಏರಿಕೆ ಕಂಡುಬಂದಿದೆ.

    ಷೇರುಗಳಿಗೆ ರೆಕ್ಕೆಪುಕ್ಕ ನೀಡಿದ ಬಜೆಟ್ ಘೋಷಣೆ:

    ಗುರುವಾರ ಕಂಪನಿಯ ಷೇರುಗಳ ಏರಿಕೆಯ ಹಿಂದೆ ಹಣಕಾಸು ಸಚಿವರು ಬಜೆಟ್‌ನಲ್ಲಿ ಮಾಡಿದ ಘೋಷಣೆಯೇ ಕಾರಣವಾಯಿತು. ಮಧ್ಯಂತರ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬಾಡಿಗೆ ಮನೆಯಲ್ಲಿ ಇರುವವರಿಗೆ, ಓಣಿ ಮತ್ತು ಕೊಳೆಗೇರಿಗಳಲ್ಲಿ ವಾಸಿಸುವ ಮಧ್ಯಮ ವರ್ಗದವರಿಗಾಗಿ ಯೋಜನೆಯೊಂದನ್ನು ತರಲಾಗುತ್ತಿದೆ. ಈ ಯೋಜನೆಯ ಸಹಾಯದಿಂದ ನಾವು ನಮ್ಮ ಸ್ವಂತ ಮನೆಯನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಘೋಷಿಸಿದರು.

    ಒಂದೇ ವರ್ಷದಲ್ಲಿ ಹಣ ಮೂರ್ನಾಲ್ಕು ಪಟ್ಟು:

    ಕಳೆದ ವರ್ಷ ಮಾರ್ಚ್ 29ರಂದು ಕಂಪನಿಯ ಷೇರುಗಳು 40.50 ರೂ. ಇದ್ದವು. ಅಂದಿನಿಂದ, ಇದುವರೆಗೆ ಕಂಪನಿಯ ಷೇರುಗಳ ಬೆಲೆಗಳು ಶೇಕಡಾ 411 ರಷ್ಟು ಹೆಚ್ಚಾಗಿದೆ. ಕಳೆದ ಒಂದು ವರ್ಷದ ಬಗ್ಗೆ ಹೇಳುವುದಾದರೆ, ಈ ಷೇರು 324 ಪ್ರತಿಶತದಷ್ಟು ಆದಾಯವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಈ ಷೇರು ಕೇವಲ 3 ತಿಂಗಳಲ್ಲಿ ಶೇಕಡಾ 173 ರಷ್ಟು ಹೆಚ್ಚಾಗಿದೆ.

    ಸರ್ಕಾರದ ಪಾಲು 50% ಕ್ಕಿಂತ ಅಧಿಕ:
    ಹೌಸಿಂಗ್ ಮತ್ತು ಅರ್ಬನ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ ಸರ್ಕಾರದ ಒಟ್ಟು ಪಾಲು 54.40 ಪ್ರತಿಶತ ಇದೆ. ಜೀವ ವಿಮಾ ನಿಗಮವು ಶೇಕಡಾ 8.9 ಪಾಲನ್ನು ಹೊಂದಿದೆ. ಕಂಪನಿಯಲ್ಲಿ ಸಾರ್ವಜನಿಕರ ಒಟ್ಟು ಪಾಲು ಶೇಕಡಾ 11.9 ರಷ್ಟಿದೆ. ಇತರರು ಶೇಕಡಾ 9.1 ರಷ್ಟು ಹೊಂದಿದ್ದಾರೆ.

    ಮೂಲಸೌಕರ್ಯಗಳ ಅಭಿವೃದ್ಧಿಗೆ ಹಣಕಾಸು ನೀಡುವುದನ್ನು 1989ರಲ್ಲಿ ಹುಡ್ಕೊ ಪ್ರಾರಂಭಿಸಿತು. ನಗರ ಪ್ರದೇಶಗಳಲ್ಲಿ ಒಳಚರಂಡಿ, ವಿದ್ಯುತ್, ನೀರು ಸರಬರಾಜು, ಒಳಚರಂಡಿ, ಘನತ್ಯಾಜ್ಯ ನಿರ್ವಹಣೆ ಮತ್ತು ರಸ್ತೆಗಳ ಕ್ಷೇತ್ರಗಳಲ್ಲಿನ ಯೋಜನೆಗಳು ಸೇರಿದಂತೆ ಮೂಲಸೌಕರ್ಯ ಸೌಲಭ್ಯಗಳಿಗೆ ಆದ್ಯತೆ ನೀಡಲಾಯಿತು.

    ಹುಡ್ಕೊ ಪ್ರಮುಖ ಸಾರ್ವಜನಿಕ ಹಣಕಾಸು ಸಂಸ್ಥೆಯಾಗಿ ಹೊರಹೊಮ್ಮಿದೆ. ದೇಶದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ಮತ್ತು ಪ್ರೋತ್ಸಾಹಿಸುವ ಪ್ರಮುಖ ಉದ್ದೇಶ ಇದರದ್ದಾಗಿದೆ.

    ಬಜೆಟ್​ನಲ್ಲಿ ಕೋಟಿ ತೆರಿಗೆದಾರರಿಗೆ ಪ್ರಯೋಜನ: ನಿರ್ಮಲಾ ಸೀತಾರಾಮನ್​ ಘೋಷಣೆಯಿಂದ ನಿಮಗೂ ಲಾಭವಾಗುವುದೇ?

    ಬಜೆಟ್​ನಲ್ಲಿ ಆದಾಯ ತೆರಿಗೆ ಯಥಾಸ್ಥಿತಿ: ಚುನಾವಣೆ ಹೊಸ್ತಿಲಲ್ಲೇ ಮಧ್ಯಮ ವರ್ಗದವರಿಗೆ ನಿರಾಸೆ ಆಗಿದ್ದೇಕೆ?

    ಗರಿಷ್ಠ ಮಟ್ಟ ಮುಟ್ಟಿದ ಟಾಟಾ ಪವರ್​ ಷೇರು ಬೆಲೆ: ಪ್ರೈಸ್​ ಇನ್ನೂ ಜಾಸ್ತಿಯಾಗಲಿದೆ ಎಂದು ಬ್ರೋಕರೇಜ್​ ಸಂಸ್ಥೆಗಳು ಹೇಳುತ್ತಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts