More

  ಬಿ.ಎಸ್​.ಯಡಿಯೂರಪ್ಪ ಶ್ರೇಷ್ಠ ಆಸ್ತಿಕ ಮುಖ್ಯಮಂತ್ರಿ: ಉಜ್ಜಯಿನಿಶ್ರೀ ಬಣ್ಣನೆ

  ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರನ್ನು ಶ್ರೇಷ್ಠ ಆಸ್ತಿಕ ಮುಖ್ಯಮಂತ್ರಿ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗತ್ಪಾದರು ಬಣ್ಣನೆ ಮಾಡಿದ್ದಾರೆ.

  ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ದಿಂಡದಹಳ್ಳಿ ಧರ್ಮಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ಪುಣ್ಯಾರಾಧನೆ ಹಾಗೂ ಧಾರ್ವಿುಕ ಜನಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಬಿಎಸ್​ವೈ ಅವರ ಕುರಿತು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.

  ಧರ್ಮೋತ್ಥಾನ ಕಾರ್ಯ ಮಾಡುವುದರಿಂದ ನಮಗರಿವಿಲ್ಲದಂತೆ ಮಾನವೀಯ ಮೌಲ್ಯಗಳು ಸೃಜಿಸುತ್ತವೆ. ಅನಗತ್ಯವಾದ ದ್ವೇಷಾಸೂಯೆಗಳು ನಮ್ಮಿಂದ ದೂರ ಹೋಗುತ್ತವೆ. ಇಂತಹ ಗುರುಗಳ, ಸಾಧು-ಸಂತರ, ಮಹಾಂತರ, ಶರಣರ ಕಾರ್ಯಕ್ರಮಗಳು ನಮಗೆ ಸದಾ ಸ್ಫೂರ್ತಿದಾಯಕ ಎಂದು ಅವರು ಹೇಳಿದರು.

  ಇದನ್ನೂ ಓದಿ: ಇಬ್ಬರು ಮಕ್ಕಳನ್ನು ನೋಡಿಕೊಳ್ಳೋ ಆಯಾಗೆ 80 ಲಕ್ಷ ರೂ. ಸಂಬಳ ಕೊಡ್ತಾರಂತೆ!

  ದಿಂಡದಹಳ್ಳಿ ಧರ್ಮಕ್ಷೇತ್ರದಲ್ಲಿ ಇಂದು ಸಹಸ್ರಾರು ಭಕ್ತರು ಸೇರಿದ್ದೀರಿ. ಲಿಂಗೈಕ್ಯ ಶ್ರೀ ಶಿವಾನಂದ ಶಿವಾಚಾರ್ಯರ ಪುಣ್ಯಾರಾಧನೆಯ ಸೇವೆ ಮಾಡುತ್ತಿದ್ದೀರಿ. ಸೇವಾ ಕಾರ್ಯಗಳಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.

  ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಇವುಗಳನ್ನು ಮಾಡಬೇಡಿ: ಯಾತಕ್ಕಾಗಿ?

  ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬಕ್ಕೆ ಮಹಾಸನ್ನಿಧಿ ಮತ್ತು ಗುರುಗಳೆಂದರೆ ಅಪಾರ ಗೌರವ. ಯಡಿಯೂರಪ್ಪ ತಮ್ಮ ಆಡಳಿತಾವಧಿಯಲ್ಲಿ ಜಾತಿ-ಮತಗಳ ಭೇದವಿಲ್ಲದೆ ಎಲ್ಲ ಸಮುದಾಯದ ಮಠ-ಮಂದಿರಗಳ ಜೀರ್ಣೋದ್ಧಾರಕ್ಕೆ ಅನುದಾನ ನೀಡಿದ್ದಾರೆ. ಅವರೊಬ್ಬ ಶ್ರೇಷ್ಠ ಆಸ್ತಿಕ ಮುಖ್ಯಮಂತ್ರಿ ಎಂದು ಉಜ್ಜಯಿನಿ ಶ್ರೀಗಳು ಬಣ್ಣಿಸಿದರು.

  ವಾರಕ್ಕೆ 55 ಗಂಟೆ ಅಥವಾ ಅದಕ್ಕೂ ಹೆಚ್ಚು ಕೆಲಸ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ: ಅಧ್ಯಯನದ ವಿವರ ಇಲ್ಲಿದೆ..

  ಈ ದೇವಸ್ಥಾನದಲ್ಲಿ ಮಹಿಳೆಯರಿಗಷ್ಟೇ ಗರ್ಭಗುಡಿಗೆ ಪ್ರವೇಶ, ಪೂಜಿಸಲು ಅವಕಾಶ: ಮುಟ್ಟಾಗಿದ್ದರೂ ಇಲ್ಲಿ ಮೈಲಿಗೆಯಲ್ಲ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts