More

    ಬಿಎಸ್​ಇ ಸೂಚ್ಯಂಕ 199.17 ಅಂಕ ಕುಸಿತ: ಐಟಿ ಷೇರುಗಳು ಹಿನ್ನಡೆ ಅನುಭವಿಸಿದ್ದೇಕೆ?

    ಮುಂಬೈ: ಲಾಭ ಮಾಡಿಕೊಳ್ಳುವುದಕ್ಕಾಗಿ ಐಟಿ ಮತ್ತು ತೈಲ ಷೇರುಗಳ ಮಾರಾಟ ಮತ್ತು ದುರ್ಬಲ ಜಾಗತಿಕ ಪ್ರವೃತ್ತಿಯಿಂದಾಗಿ ಷೇರು ಮಾರುಕಟ್ಟೆಗಳು ಮಂಗಳವಾರ ಕುಸಿತ ಕಂಡವು

    30-ಷೇರುಗಳ ಬಿಎಸ್‌ಇ ಸೂಚ್ಯಂಕವು 199.17 ಅಂಕಗಳು ಅಥವಾ ಶೇಕಡಾ 0.27 ಕುಸಿದು 73,128.77 ಕ್ಕೆ ಸ್ಥಿರವಾಯಿತು. ಸೆನ್ಸೆಕ್ಸ್ ಷೇರುಗಳ ಪೈಕಿ 20 ಕುಸಿತ ಕಂಡರೆ, 10 ಏರಿಕೆ ದಾಖಲಿಸಿದವು.

    ನಿಫ್ಟಿ ಸೂಚ್ಯಂಕವು ಸಾರ್ವಕಾಲಿಕ ಇಂಟ್ರಾ-ಡೇ ಗರಿಷ್ಠ ಮಟ್ಟ 22,124.15 ತಲುಪಿದರೂ ನಂತರ ಕುಸಿತ ಕಂಡಿತು. 65.15 ಅಂಕಗಳು ಅಥವಾ 0.29 ರಷ್ಟು ಕಡಿಮೆಯಾಗಿ 22,032.30 ಕ್ಕೆ ತಲುಪಿತು. ನಿಫ್ಟಿಯ 33 ಷೇರುಗಳು ಇಳಿಕೆ ಕಂಡರೆ, 17 ಷೇರುಗಳು ಲಾಭ ಗಳಿಸಿದವು.

    ಕಳೆದ ಐದು ದಿನಗಳಲ್ಲಿ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು 1,972.72 ಅಂಕಗಳು ಅಥವಾ ಶೇಕಡಾ 2.76 ರಷ್ಟು ಏರಿಕೆಯಾಗಿದೆ. ನಿಫ್ಟಿ ಸೂಚ್ಯಂಕವು 584.45 ಅಂಕಗಳು ಅಥವಾ 2.71 ರಷ್ಟು ಜಿಗಿದಿದೆ.

    ಎಚ್‌ಸಿಎಲ್ ಟೆಕ್ ಷೇರುಗಳು ಶೇ.2.05ರಷ್ಟು ಕುಸಿತ ಕಂಡವು. ವಿಪ್ರೋ ಶೇ.1.93, ಎನ್‌ಟಿಪಿಸಿ ಶೇ.1.84, ರಿಲಯನ್ಸ್ ಇಂಡಸ್ಟ್ರೀಸ್ ಶೇ.1.43, ಇನ್ಫೋಸಿಸ್ ಶೇ.1.27, ಟೆಕ್ ಮಹೀಂದ್ರಾ ಶೇ.1.17 ಮತ್ತು ಟಿಸಿಎಸ್ ಶೇ.1.06ರಷ್ಟು ಕುಸಿದವು. ಇಂಡಸ್‌ಇಂಡ್ ಬ್ಯಾಂಕ್, ಸನ್ ಫಾರ್ಮಾ, ಎಂ & ಎಂ, ಪವರ್ ಗ್ರಿಡ್, ಭಾರ್ತಿ ಏರ್‌ಟೆಲ್ ಮತ್ತು ಎಸ್‌ಬಿಐ ಸಹ ನಷ್ಟ ಅನುಭವಿಸಿದವು. ಐಟಿ ಷೇರುಗಳು ಕಳೆದ ಎರಡು ದಿನಗಳಲ್ಲಿ ತೀವ್ರ ಏರಿಕೆ ಮಾಡಿದ ನಂತರ ಮಂಗಳವಾರ ಲಾಭಕ್ಕಾಗಿ ಮಾರಾಟ ಮಾಡಿದ್ದರಿಂದ ಕುಸಿತ ಕಂಡವು.

    ಟಾಟಾ ಸ್ಟೀಲ್, ಟೈಟಾನ್, ಮಾರುತಿ, ಲಾರ್ಸನ್ ಅಂಡ್ ಟೂಬ್ರೊ, ಐಟಿಸಿ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಲಾಭ ಗಳಿಸಿದವು.

    ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಹಣಕಾಸಿನ ಫಲಿತಾಂಶ ಘೋಷಿಸುವ ಮೊದಲು ಅದರ ಷೇರುಗಳು ಶೇಕಡಾ 0.42 ಏರಿಕೆ ಕಂಡವು.

    ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್, ಟೋಕಿಯೋ ಮತ್ತು ಹಾಂಗ್ ಕಾಂಗ್ ಕುಸಿತ ಕಂಡರೆ, ಶಾಂಘೈ ಲಾಭ ಮಾಡಿದೆ. ಐರೋಪ್ಯ ಮಾರುಕಟ್ಟೆಗಳು ಕಡಿಮೆ ವಹಿವಾಟು ನಡೆಸಿದವು. ಅಮೆರಿಕ ಮಾರುಕಟ್ಟೆಗಳಿಗೆ ಸೋಮವಾರ ರಜೆ ಇತ್ತು.

    ಸೋಮವಾರ ಬಿಎಸ್‌ಇ ಬೆಂಚ್‌ಮಾರ್ಕ್​ ಸೂಚ್ಯಂಕವು 759.49 ಅಂಕಗಳ ಏರಿಕೆ ಕಂಡು 73,327.94 ರ ಹೊಸ ಮುಕ್ತಾಯದ ಗರಿಷ್ಠ ಮಟ್ಟ ತಲುಪಿತ್ತು. ನಿಫ್ಟಿ ಸೂಚ್ಯಂಕವು 202.90 ಅಂಕಗಳ ಏರಿಕೆಯಾಗಿ 22,097.45 ರ ಹೊಸ ಮುಕ್ತಾಯದ ಗರಿಷ್ಠ ಮಟ್ಟವನ್ನು ತಲುಪಿತ್ತು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ 1,085.72 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    3ನೇ ತ್ರೈಮಾಸಿಕದಲ್ಲಿ ನಿರೀಕ್ಷೆ ಮೀರಿದ ಎಚ್‌ಡಿಎಫ್‌ಸಿ ಬ್ಯಾಂಕ್ ಫಲಿತಾಂಶ: ಶೇ. 34ರಷ್ಟು ಏರಿಕೆಯೊಂದಿಗೆ ರೂ. 16,373 ಕೋಟಿ ಲಾಭ

    ಫೋನ್ ಚಾರ್ಜ್​ ಮಾಡುವ ಅಗತ್ಯವೇ ಇಲ್ಲ: ಶೀಘ್ರದಲ್ಲೇ ಬರಲಿದೆ 50 ವರ್ಷ ತಾಳಿಕೆ ಬರುವ ಬ್ಯಾಟರಿ!!

    ವಿಮಾನ ನಿಲ್ದಾಣಗಳಲ್ಲಿ ವಾರ್​ ರೂಂ ಸ್ಥಾಪನೆ: ಹೊಸ ನಿಯಮಾವಳಿ ಘೋಷಿಸಿದ ವಿಮಾನಯಾನ ಸಚಿವ ಸಿಂಧಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts