More

    ಬಿಎಸ್‌ಇ ಸೂಚ್ಯಂಕ 229.84 ಅಂಕ ಏರಿಕೆ: ಲಾಭ ಗಳಿಸಿದ, ನಷ್ಟ ಅನುಭವಿಸಿದ ಷೇರುಗಳು ಯಾವವು?

    ಮುಂಬೈ: ಭಾರತೀಯ ಷೇರು ಮಾರುಕಟ್ಟೆಗಳು ಮಂಗಳವಾರ ಲಾಭ ಕಂಡವು, ವಿದ್ಯುತ್, ಯುಟಿಲಿಟೀಸ್​, ತೈಲ, ಅನಿಲ ಮತ್ತು ಬ್ಯಾಂಕಿಂಗ್ ಷೇರುಗಳಲ್ಲಿ ಹೆಚ್ಚಿನ ಖರೀದಿ ಕಾರಣ ಸತತ ಮೂರನೇ ದಿನವೂ ಸೂಚ್ಯಂಕವು ಏರುಗತಿಯಲ್ಲಿ ಮುಂದುವರಿಯಿತು.

    30-ಷೇರು ಬಿಎಸ್‌ಇ ಸೂಚ್ಯಂಕ 229.84 ಅಂಕ ಅಥವಾ ಶೇಕಡಾ 0.32 ಏರಿಕೆಯಾಗಿ 71,336.80ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ನಡುವೆ ಇದು ಇದು 364.33 ಅಂಕ ಜಿಗಿದು 71,471.29 ಕ್ಕೆ ತಲುಪಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಏರುಗತಿಗೆ ಅಂದಾಜು 120 ಅಂಕಗಳ ಕೊಡುಗೆ ನೀಡಿರುವುದು ಗಮನಾರ್ಹವಾಗಿದೆ.

    ನಿಫ್ಟಿ ಸೂಚ್ಯಂಕವು 91.95 ಅಂಕಗಳು ಅಥವಾ ಶೇಕಡಾ 0.43ರಷ್ಟು ಏರಿಕೆ ಕಂಡು 21,441.35 ಕ್ಕೆ ತಲುಪಿತು.

    ವಿದ್ಯುತ್, ಯುಟಿಲಿಟೀಸ್​, ಬ್ಯಾಂಕಿಂಗ್, ತೈಲ ಮತ್ತು ಅನಿಲ ಮತ್ತು ಸರಕುಗಳ ಷೇರುಗಳು ಖರೀದಿ ಜೋರಾಗಿ ಸಾಗಿತು. ಐಟಿ ಮತ್ತು ಟೆಕ್ ಷೇರುಗಳು ಮಾರಾಟಕ್ಕೆ ಶರಣಾಗಿ ಕುಸಿತ ಕಂಡವು.

    ಎನ್‌ಟಿಪಿಸಿ, ಮಹೀಂದ್ರಾ ಆಂಡ್ ಮಹೀಂದ್ರಾ, ವಿಪ್ರೋ, ಕೋಟಕ್ ಮಹೀಂದ್ರಾ ಬ್ಯಾಂಕ್, ಟಾಟಾ ಸ್ಟೀಲ್, ಏಷ್ಯನ್ ಪೇಂಟ್ಸ್, ಭಾರ್ತಿ ಏರ್‌ಟೆಲ್, ಪವರ್ ಗ್ರಿಡ್, ಟೈಟಾನ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು.

    ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಮೋಟಾರ್ಸ್ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಷೇರುಗಳು ನಷ್ಟ ಕಂಡವು.

    ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್ ಮತ್ತು ಟೋಕಿಯೊ ಲಾಭದಲ್ಲಿ ಮುನ್ನಡೆದರೆ, ಶಾಂಘೈ ಕುಸಿತ ಕಂಡಿತು.

    “2024 ರಲ್ಲಿ ಅಮೆರಿಕದ ಫೆಡರಲ್​ ರಿಸರ್ವ್ ಬಡ್ಡಿ ದರ ಕಡಿತದ ನಿರೀಕ್ಷೆಯಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಸೂಚ್ಯಂಕ ಹೆಚ್ಚುತ್ತಿದೆ. ಭಾರತೀಯ ಷೇರುಗಳು ಸಹ ಉಲ್ಬಣ ಕಾಣುತ್ತಿವೆ” ಎಂದು ಪರಿಣತರು ಹೇಳಿದ್ದಾರೆ.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ 2,828.94 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರದ ಮಾಹಿತಿ ತಿಳಿಸಿದೆ.

    ಬಿಎಸ್‌ಇ ಸೂಚ್ಯಂಕ ಶುಕ್ರವಾರ 241.86 ಅಂಕ ಏರಿಕೆಯಾಗಿ 71,106.96 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 94.35 ಅಂಕ ಹೆಚ್ಚಳ ಕಂಡು 21,349.40 ಕ್ಕೆ ತಲುಪಿತ್ತು.

    ಯೂಟ್ಯೂಬ್ ಚಾನಲ್‌ ಸಬ್​ಸ್ಕ್ರಿಪ್ಶನ್​ನಲ್ಲಿ ವಿಶ್ವದಲ್ಲೇ ಮೋದಿ ನಂಬರ್​ ಒನ್​: ನಮ್ಮ ಪ್ರಧಾನಿಯ ಚಂದಾದಾರಿಕೆ ಎಷ್ಟು ಗೊತ್ತೆ?

    ಬಿಹಾರದಲ್ಲಿ 3.5 ಲಕ್ಷ ಗುತ್ತಿಗೆ ಶಿಕ್ಷಕರಿಗೆ ಸರ್ಕಾರಿ ನೌಕರರ ಸ್ಥಾನಮಾನ: ನಿತೀಶ್​ ಕುಮಾರ್​ ನಿರ್ಧಾರದಿಂದ ಏನೇನು ಪ್ರಯೋಜನ?

    ಸ್ವಿಗ್ಗಿ ಪ್ರತಿಸ್ಪರ್ಧಿ ಜೊಮ್ಯಾಟೊದಲ್ಲಿಯೂ ಬಿರಿಯಾನಿಗೇ ಅಗ್ರಸ್ಥಾನ: ಪ್ರತಿದಿನ 9 ಬಾರಿ ಫುಡ್​ ಆರ್ಡರ್​ ಮಾಡಿದ ವ್ಯಕ್ತಿ ಯಾರು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts